ರೊಬೋಟ್-ಸಹಾಯದ ಶಸ್ತ್ರಚಿಕಿತ್ಸೆ ಎಂದೂ ಕರೆಯಲ್ಪಡುವ ರೊಬೋಟಿಕ್ ಶಸ್ತçಚಿಕಿತ್ಸೆಯು ಸಾಂಪ್ರದಾಯಿಕ ತಂತ್ರಗಳೊAದಿಗೆ ಸಾಧ್ಯವಾಗುವುದಕ್ಕಿಂತ ಹೆಚ್ಚು ನಿಖರತೆ, ನಮ್ಯತೆ ಮತ್ತು ನಿಯಂತ್ರಣದೊAದಿಗೆ ಅನೇಕ ರೀತಿಯ ಸಂಕೀರ್ಣ ಕಾರ್ಯವಿಧಾನ ಗಳನ್ನು ನಿರ್ವಹಿಸಲು ವೈದ್ಯರಿಗೆ ಅನುವು ಮಾಡಿಕೊಡುತ್ತದೆ. ರೋಗಿಗೆ ಈ ವಿಧಾನ ಸಂಜೀವಿನಿಯಾಗಿ ಪರಣಮಿಸಿದೆ. ರೊಬೊಟಿಕ್ ಶಸ್ತ್ರಚಿಕಿತ್ಸೆಯು ಸಾಮಾನ್ಯವಾಗಿ ಶಸ್ತ್ರಚಿಕಿತೆಯ ಕ್ಲಿಷ್ಟತೆಯನ್ನು ಕನಿಷ್ಟಗೊಳಿಸುವಲ್ಲಿ ಸಮರ್ಥ ವಾದುದು. ಸಣ್ಣ ಛೇದನದ ಮೂಲಕ ಚಿಕಿತ್ಸಾ ಕಾರ್ಯವನ್ನು ಪೂರೈಸುತ್ತದೆ. ಇದನ್ನು ಕೆಲವೊಮ್ಮೆ ಕೆಲವು ಸಾಂಪ್ರದಾಯಿಕ ತೆರೆದ ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿಯೂ ಬಳಸಲಾಗುತ್ತದೆ. ಯಂತ್ರ ಮಾನವನ ವಿದ್ಯುನ್ಮಾನ ನಿಯೋಜಿತ ಕರ ಚಳಕದ ತಂತ್ರಗಾರಿಕೆ ಇದರಲ್ಲಿ ಅಡಗಿದೆ.

ಯಾಂತ್ರಿಕ ತೋಳು

ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಕ್ಲಿನಿಕಲ್ ರೊಬೋಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಯು ಕ್ಯಾಮರಾ ತೋಳು ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳೊಂದಿಗೆ ಯಾಂತ್ರಿಕ ತೋಳುಗಳನ್ನು ಒಳಗೊಂಡಿರುತ್ತದೆ. ಆಪರೇಟಿಂಗ್ ಟೇಬಲ್ ಬಳಿ ಕಂಪ್ಯೂಟರ್ ಸಂಯೋಜನೆಯೊAದಿಗೆ ಶಸ್ತ್ರಚಿಕಿತ್ಸಕ ವೈದ್ಯ ಕುಳಿತಿರುವಾಗ ಆತನು ರೊಬೋಟಿಕ್ ಯಂತ್ರದ ತೋಳುಗಳನ್ನು ನಿಯಂತ್ರಿಸುತ್ತಾನೆ. ಆ ಸಂದರ್ಭ ವೈದ್ಯರಿಗೆ ಶಸ್ತ್ರಚಿಕಿತ್ಸಾ ಸ್ಥಳದ ಹೆಚ್ಚಿನ-ವ್ಯಾಖ್ಯಾನದ, ವಿಸ್ತೃತ ನೋಟವನ್ನು ವಿದ್ಯುನ್ಮಾನ ಯಂತ್ರ ನೀಡುತ್ತದೆ. ಆಗಿನ ಕಾರ್ಯಾಚರಣೆಯ ಸಮಯದಲ್ಲಿ ಸಹಾಯ ಮಾಡುವ ಇತರ ತಂಡದ ಸದಸ್ಯರನ್ನು ಶಸ್ತ್ರಚಿಕಿತ್ಸಕ ಮುನ್ನಡೆಸುತ್ತಾನೆ. ಇದರಿಂದಾಗಿ ಕಷ್ಟಕರವಾದ ಅಥವಾ ಅಸಾಧ್ಯವಾದ ಸೂಕ್ಷ್ಮ ಮತ್ತು ಸಂಕೀರ್ಣ ಕಾರ್ಯವಿಧಾನಗಳನ್ನು ಮಾಡಬಹುದು. ಶಸ್ತçಚಿಕಿತ್ಸೆಯ ಸ್ಥಳದಲ್ಲಿ ಸೋಂಕಿನ ಸಣ್ಣ ಅಪಾಯ ಮತ್ತು ಇತರ ತೊಡಕುಗಳು ಸಾಂಪ್ರದಾಯಿಕ ತೆರೆದ ಶಸ್ತçಚಿಕಿತ್ಸೆಯಲ್ಲಿರುವಂತೆಯೇ ಇರುತ್ತದೆ. ಆದರೆ, ಸಾಮಾನ್ಯವಾಗಿ, ರೊಬೋಟಿಕ್ ಶಸ್ತçಚಿಕಿತ್ಸೆಯು ಕನಿಷ್ಟ ಪ್ರಮಾಣದ ಆಕ್ರಮಣಶೀಲ ಶಸ್ತ್ರಚಿಕಿತ್ಸೆಯನ್ನು ಸಾಧ್ಯವಾಗಿಸುತ್ತದೆ.

ಕಡಿಮೆ ನೋವು-ಕಡಿಮೆ ರಕ್ತದ ನಷ್ಟ

ರೊಬೋಟಿಕ್ ಶಸ್ತ್ರಚಿಕಿತ್ಸೆಯು ಕಡಿಮೆ ನೋವು-ಕಡಿಮೆ ರಕ್ತದ ನಷ್ಟವುಂಟು ಮಾಡುತ್ತದೆ. ಕಡಿಮೆ ಆಸ್ಪತ್ರೆ ವಾಸ ಮತ್ತು ತ್ವರಿತ ಚೇತರಿಕೆ ಇದರ ಹೆಚ್ಚಿನ ಪ್ರಯೋಜನಗಳಾಗಿವೆ. ಚರ್ಮವು ದುಷ್ಪರಿಣಾಮಕ್ಕೀಡಾಗುವು ದಿಲ್ಲ. ಲ್ಯಾಪ್ರೊಸ್ಕೋಪಿಕ್ ಸರ್ಜರಿಗಳಿಗೂ ರೊಬೋಟ್ ನೆರವಿನ ಶಸ್ತ್ರಚಿಕಿತ್ಸೆ ಲಭ್ಯವಿದೆ. ಪ್ರಾಟೆಕ್ಟಮಿಗಳು, ಹೃದಯ ಕವಾಟ ದುರಸ್ತಿ ಮತ್ತು ಸ್ತಿçÃರೋಗ ಶಾಸ್ತ್ರದ ಶಸ್ತçಚಿಕಿತ್ಸಾ ವಿಧಾನಗಳಿಗೂ ರೊಬೋಟ್ ನೆರವಿನ ಶಸ್ತçಚಿಕಿತ್ಸಾ ವ್ಯವಸ್ಥೆ ಲಭ್ಯವಿದೆ. ರೊಬೋಟ್ ನೆರವಿನ ಕನಿಷ್ಟ ಆಕ್ರಮಣಶೀಲ ಶಸ್ತçಚಿಕಿತ್ಸೆಯ ಸಂದರ್ಭದಲ್ಲಿ, ಉಪಕರಣಗಳನ್ನು ನೇರವಾಗಿ ಚಲಿಸುವ ಬದಲು, ಶಸ್ತçಚಿಕಿತ್ಸಕ ಉಪಕರಣಗಳನ್ನು ನಿರ್ವಹಿಸಲು ಎರಡು ವಿಧಾನಗಳಲ್ಲಿ ಒಂದನ್ನು ಬಳಸುತ್ತಾರೆ. ಇವುಗಳಲ್ಲಿ ನೇರ ಟೆಲಿಮ್ಯಾನಿಪ್ಯುಲೇಟರ್ ಅಥವಾ ಕಂಪ್ಯೂಟರ್ ನಿಯಂತ್ರಣದ ಮೂಲಕ ಬಳಸುವುದು ಸೇರಿದೆ. ಟೆಲಿಮ್ಯಾನಿಪ್ಯುಲೇಟರ್ ಎನ್ನುವುದು ದೂರಸ್ಥ (ರಿಮೋಟ್) ನಿರ್ವಾಹಕ (ಮ್ಯಾನಿಪ್ಯುಲೇಟರ್) ಗಳಾಗಿದ್ದು, ಶಸ್ತçಚಿಕಿತ್ಸಕ ವೈದ್ಯನಿಗೆ ಶಸ್ತçಚಿಕಿತ್ಸೆಗೆ ಸಂಬAಧಿಸಿದ ಸಾಮಾನ್ಯ ಚಲನೆಯನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ರೊಬೋಟಿಕ್ ತೋಳುಗಳು ಅಂತ್ಯ-ಪರಿಣಾಮಕಾರಿ ಗಳು ಮತ್ತು ನಿರ್ವಾಹಕಗಳನ್ನು ಬಳಸಿಕೊಂಡು ಆ ಚಲನೆಯನ್ನು ನಿರ್ವಹಿಸುತ್ತವೆ. ನಿಜವಾದ ಶಸ್ತçಚಿಕಿತ್ಸೆ ಮಾಡಲು. ಕಂಪ್ಯೂಟರ್-ನಿಯAತ್ರಿತ ವ್ಯವಸ್ಥೆಗಳಲ್ಲಿ, ಶಸ್ತçಚಿಕಿತ್ಸಕ ವೈದ್ಯರು ರೊಬೋಟಿಕ್ ತೋಳುಗಳನ್ನು ಮತ್ತು ಅದರ ಅಂತ್ಯ-ಪರಿಣಾಮಕಾರಿಗಳನ್ನು ನಿಯಂತ್ರಿಸಲು ಕಂಪ್ಯೂಟರ್ ಅನ್ನು ಬಳಸುತ್ತಾರೆೆ, ಆದರೂ ಈ ವ್ಯವಸ್ಥೆಗಳಿಗೆ ಇನ್ನೂ ಅಧಿಕ ಸೇರ್ಪಡೆಗಾಗಿ ನಿರ್ವಾಹಕಗಳನ್ನು ಬಳಸಬಹುದು. ಗಣಕೀಕೃತ ವಿಧಾನವನ್ನು ಬಳಸುವುದರ ಒಂದು ಪ್ರಯೋಜನವೆಂದರೆ ಶಸ್ತçಚಿಕಿತ್ಸಕ ವೈದ್ಯರು ಶಸ್ತçಚಿಕಿತ್ಸೆ ನಡೆಯುವ ಸ್ಥಳದಲ್ಲಿಯೇ ಇರಬೇಕಾಗಿಲ್ಲ, ಇದು ದೂರಸ್ಥ ಶಸ್ತçಚಿಕಿತ್ಸೆಯ ಸಾಧ್ಯತೆಗೆ ಕಾರಣವಾಗುತ್ತದೆ. ಇದರ ಮುಖ್ಯ ಪ್ರಯೋಜನ ವೆಂದರೆ ಓರ್ವ ವಿದೇಶದಲ್ಲಿರುವ ಬಾರೀ ತಜ್ಞ ವೈದ್ಯನ ನೆರವು ಬೇಕೆಂದರೂ ಗಣಕೀಕೃತ ಯಂತ್ರದ ನೆರವಿನಿಂದ ರೊಬೋಟ್ ಶಸ್ತçಚಿಕಿತ್ಸೆಯನ್ನು ನಿಯಂತ್ರಿಸ ಬಹುದಾಗಿದೆ, ಅತ್ಯಂತ ತುರ್ತಾದ ಚಿಕಿತ್ಸೆಗೆ ಹಾಗೂ ದೂರದ ಪ್ರದೇಶಕ್ಕೆ ತೆರಳಲು ಸಾಧ್ಯವಿಲ್ಲದೆ ಪ್ರಾಣವೇ ಹೋಗುವಂತಹ ಸನ್ನಿವೇಶವನ್ನು ತಪ್ಪಿಸಿ ಸನಿಹದ ಆಸ್ಪತ್ರೆಯಲ್ಲಿ ರೊಬೋಟ್ ಶಸ್ತçಚಿಕಿತ್ಸೆ ಸೌಲಭ್ಯವಿದ್ದರೆ ಸುಲಭದಲ್ಲಿ ಪ್ರಾಣಾಪಾಯ ತಪ್ಪಿಸಿ ತಕ್ಷಣ ಚಿಕಿತ್ಸೆ ಮಾಡಬಹುದಾಗಿದೆ. ತಜ್ಞ ವೈದ್ಯರು ಯಾವದೇ ಪ್ರದೇಶದಲ್ಲಿದ್ದರೂ, ವಿದೇಶದಲ್ಲಿದ್ದರೂ ಅವರು ವಿದ್ಯುನ್ಮಾನ ಯಂತ್ರದಲ್ಲಿ ಶಸ್ತçಚಿಕಿತ್ಸೆಯನ್ನು ರೋಬೋಟ್ ಯಾಂತ್ರಿಕ ವಿಧಾನದಲ್ಲಿ ನಿರ್ವಹಿಸುವಂತಹ ಕಾರ್ಯದ ಮೂಲಕ ಈ ಚಿಕಿತ್ಸಾ ವಿಧಾನವು ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಆಪದ್ಬಾಂಧವನಾಗುತ್ತದೆ. ರೋಬೋಟ್ ನೆರವಿನ ಶಸ್ತçಚಿಕಿತ್ಸೆಯಲ್ಲಿ ಯಾವುದೇ ಅನಾನುಕೂಲತೆಗಳನ್ನು ತಡೆಗಟ್ಟುವಲ್ಲಿ ಜ್ಞಾಪನಾ ಸಾಧನಗಳು ಪ್ರಮುಖ ಪಾತ್ರವಹಿಸುತ್ತವೆ. ರೋಗಿಯ ಭೌತಿಕ ದಾಖಲೆಯ ಆಧಾರದ ಮೇಲೆ ಆ ರೋಗಿಯ ದೈಹಿಕ ಸಾಮರ್ಥ್ಯ ಅಥವಾ ಬಲಹೀನತೆಯ ಮಾಹಿತಿಗಳು ನೆನಪಿನ ಶೇಖರಣಾ ವಿಭಾಗದಲ್ಲಿ ಶೇಖರಣೆ ಗೊಂಡಿರುವುದರಿAದ ಶಸ್ತçಚಿಕಿತ್ಸೆಯನ್ನು ನಿಖರವಾಗಿ ಹಾಗೂ ಯಶಸ್ವಿಯಾಗಿ ನಿರ್ವಹಿಸಲು ಸುಲಭ ಸಾಧ್ಯವಾಗುತ್ತೆ. ದಾಸ್ತಾನು ಶೇಖರಣಾ ವ್ಯವಸ್ಥೆ ಮೂಲಕ ರೋಗಿಯ ಹಳೆಯ ದೈಹಿಕ ಲೋಪದೋಷಗಳನ್ನೂ ತಿಳಿಯುವ ಮೂಲಕ ಅದಕ್ಕೆ ಪೂರಕವಾಗಿ ಶಸ್ತçಚಿಕಿತ್ಸಾ ವಿಧಾನಗಳನ್ನು ಬದಲಾಯಿಸಿಕೊಂಡು ಸಮರ್ಪಕವಾಗಿ ಶಸ್ತçಚಿಕಿತ್ಸೆ ನಡೆಸಬಹುದಾಗಿದೆ. ಆದರೆ, ರೋಬೋಟಿಕ್ ಶಸ್ತçಚಿಕಿತ್ಸೆಯ ಒಂದು ನ್ಯೂನ್ಯತೆಯೆಂದರೆ ಅದರ ವೆಚ್ಚ ತೀರಾ ದುಬಾರಿ. ಆದರೆ, ಪ್ರಾಣಕ್ಕಿಂತ ಮಿಗಿಲಾದುದು ಯಾವದೂ ಇಲ್ಲ ಎಂದಾಗ ಸಾಲ ಮಾಡಿಯಾದರೂ ಶಸ್ತçಚಿಕಿತ್ಸೆ ಮಾಡಿಸುವವರೂ ಇಲ್ಲದಿಲ್ಲ. ಏಕೆಂದರೆ, ಶಸ್ತçಚಿಕಿತ್ಸೆ ಬಹುಪಾಲು ಯಶಸ್ಸುಗೊಳ್ಳುವ ವಿಶ್ವಾಸವಿರುವುದರಿಂದ ಹಣವಂತರಿ ಗಂತೂ ಇದೊಂದು ರಾಮಬಾಣ. ಗುಣವಂತರಾಗಿದ್ದರೂ ಹಣವಂತರಲ್ಲ ನಿರ್ವಹಿಸುತ್ತವೆ. ನಿಜವಾದ ಶಸ್ತçಚಿಕಿತ್ಸೆ ಮಾಡಲು. ಕಂಪ್ಯೂಟರ್-ನಿಯAತ್ರಿತ ವ್ಯವಸ್ಥೆಗಳಲ್ಲಿ, ಶಸ್ತçಚಿಕಿತ್ಸಕ ವೈದ್ಯರು ರೊಬೋಟಿಕ್ ತೋಳುಗಳನ್ನು ಮತ್ತು ಅದರ ಅಂತ್ಯ-ಪರಿಣಾಮಕಾರಿಗಳನ್ನು ನಿಯಂತ್ರಿಸಲು ಕಂಪ್ಯೂಟರ್ ಅನ್ನು ಬಳಸುತ್ತಾರೆÉ, ಆದರೂ ಈ ವ್ಯವಸ್ಥೆಗಳಿಗೆ ಇನ್ನೂ ಅಧಿಕ ಸೇರ್ಪಡೆಗಾಗಿ ನಿರ್ವಾಹಕಗಳನ್ನು ಬಳಸಬಹುದು. ಗಣಕೀಕೃತ ವಿಧಾನವನ್ನು ಬಳಸುವುದರ ಒಂದು ಪ್ರಯೋಜನವೆಂದರೆ ಶಸ್ತçಚಿಕಿತ್ಸಕ ವೈದ್ಯರು ಶಸ್ತçಚಿಕಿತ್ಸೆ ನಡೆಯುವ ಸ್ಥಳದಲ್ಲಿಯೇ ಇರಬೇಕಾಗಿಲ್ಲ, ಇದು ದೂರಸ್ಥ ಶಸ್ತçಚಿಕಿತ್ಸೆಯ ಸಾಧ್ಯತೆಗೆ ಕಾರಣವಾಗುತ್ತದೆ. ಇದರ ಮುಖ್ಯ ಪ್ರಯೋಜನ ವೆಂದರೆ ಓರ್ವ ವಿದೇಶದಲ್ಲಿರುವ ಬಾರೀ ತಜ್ಞ ವೈದ್ಯನ ನೆರವು ಬೇಕೆಂದರೂ ಗಣಕೀಕೃತ ಯಂತ್ರದ ನೆರವಿನಿಂದ ರೊಬೋಟ್ ಶಸ್ತçಚಿಕಿತ್ಸೆಯನ್ನು ನಿಯಂತ್ರಿಸ ಬಹುದಾಗಿದೆ, ಅತ್ಯಂತ ತುರ್ತಾದ ಚಿಕಿತ್ಸೆಗೆ ಹಾಗೂ ದೂರದ ಪ್ರದೇಶಕ್ಕೆ ತೆರಳಲು ಸಾಧ್ಯವಿಲ್ಲದೆ ಪ್ರಾಣವೇ ಹೋಗುವಂತಹ ಸನ್ನಿವೇಶವನ್ನು ತಪ್ಪಿಸಿ ಸನಿಹದ ಆಸ್ಪತ್ರೆಯಲ್ಲಿ ರೊಬೋಟ್ ಶಸ್ತçಚಿಕಿತ್ಸೆ ಸೌಲಭ್ಯವಿದ್ದರೆ ಸುಲಭದಲ್ಲಿ ಪ್ರಾಣಾಪಾಯ ತಪ್ಪಿಸಿ ತಕ್ಷಣ ಚಿಕಿತ್ಸೆ ಮಾಡಬಹುದಾಗಿದೆ. ತಜ್ಞ ವೈದ್ಯರು ಯಾವದೇ ಪ್ರದೇಶದಲ್ಲಿದ್ದರೂ, ವಿದೇಶದಲ್ಲಿದ್ದರೂ ಅವರು ವಿದ್ಯುನ್ಮಾನ ಯಂತ್ರದಲ್ಲಿ ಶಸ್ತçಚಿಕಿತ್ಸೆಯನ್ನು ರೋಬೋಟ್ ಯಾಂತ್ರಿಕ ವಿಧಾನದಲ್ಲಿ ನಿರ್ವಹಿಸುವಂತಹ ಕಾರ್ಯದ ಮೂಲಕ ಈ ಚಿಕಿತ್ಸಾ ವಿಧಾನವು ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಆಪದ್ಬಾಂಧವನಾಗುತ್ತದೆ. ರೋಬೋಟ್ ನೆರವಿನ ಶಸ್ತçಚಿಕಿತ್ಸೆಯಲ್ಲಿ ಯಾವುದೇ ಅನಾನುಕೂಲತೆಗಳನ್ನು ತಡೆಗಟ್ಟುವಲ್ಲಿ ಜ್ಞಾಪನಾ ಸಾಧನಗಳು ಪ್ರಮುಖ ಪಾತ್ರವಹಿಸುತ್ತವೆ. ರೋಗಿಯ ಭೌತಿಕ ದಾಖಲೆಯ ಆಧಾರದ ಮೇಲೆ ಆ ರೋಗಿಯ ದೈಹಿಕ ಸಾಮರ್ಥ್ಯ ಅಥವಾ ಬಲಹೀನತೆಯ ಮಾಹಿತಿಗಳು ನೆನಪಿನ ಶೇಖರಣಾ ವಿಭಾಗದಲ್ಲಿ ಶೇಖರಣೆ ಗೊಂಡಿರುವುದರಿAದ ಶಸ್ತçಚಿಕಿತ್ಸೆಯನ್ನು ನಿಖರವಾಗಿ ಹಾಗೂ ಯಶಸ್ವಿಯಾಗಿ ನಿರ್ವಹಿಸಲು ಸುಲಭ ಸಾಧ್ಯವಾಗುತ್ತೆ. ದಾಸ್ತಾನು ಶೇಖರಣಾ ವ್ಯವಸ್ಥೆ ಮೂಲಕ ರೋಗಿಯ ಹಳೆಯ ದೈಹಿಕ ಲೋಪದೋಷಗಳನ್ನೂ ತಿಳಿಯುವ ಮೂಲಕ ಅದಕ್ಕೆ ಪೂರಕವಾಗಿ ಶಸ್ತçಚಿಕಿತ್ಸಾ ವಿಧಾನಗಳನ್ನು ಬದಲಾಯಿಸಿಕೊಂಡು ಸಮರ್ಪಕವಾಗಿ ಶಸ್ತçಚಿಕಿತ್ಸೆ ನಡೆಸಬಹುದಾಗಿದೆ. ಆದರೆ, ರೋಬೋಟಿಕ್ ಶಸ್ತçಚಿಕಿತ್ಸೆಯ ಒಂದು ನ್ಯೂನ್ಯತೆಯೆಂದರೆ ಅದರ ವೆಚ್ಚ ತೀರಾ ದುಬಾರಿ. ಆದರೆ, ಪ್ರಾಣಕ್ಕಿಂತ ಮಿಗಿಲಾದುದು ಯಾವದೂ ಇಲ್ಲ ಎಂದಾಗ ಸಾಲ ಮಾಡಿಯಾದರೂ ಶಸ್ತçಚಿಕಿತ್ಸೆ ಮಾಡಿಸುವವರೂ ಇಲ್ಲದಿಲ್ಲ. ಏಕೆಂದರೆ, ಶಸ್ತçಚಿಕಿತ್ಸೆ ಬಹುಪಾಲು ಯಶಸ್ಸುಗೊಳ್ಳುವ ವಿಶ್ವಾಸವಿರುವುದರಿಂದ ಹಣವಂತರಿ ಗಂತೂ ಇದೊಂದು ರಾಮಬಾಣ. ಗುಣವಂತರಾಗಿದ್ದರೂ ಹಣವಂತರಲ್ಲ ೯೩ ವರ್ಷದ ರೋಗಿಗೆ ಶಸ್ತçಚಿಕಿತ್ಸೆ !

ರೊಬೋಟ್‌ನ ಸಾಹಸಗಾಥೆಗಳು ಬಹಳಷ್ಟಿವೆ. ಭಾರತದಲ್ಲಿಯೂ ಇದೀಗ ಜನಪ್ರಿಯತೆ ಪಡೆಯುತ್ತಿದೆ. ಇತ್ತೀಚೆಗೆ ಚೆನ್ನೆöÊನಲ್ಲಿರುವ ಅಪೊಲೋ ಆಸ್ಪತ್ರೆ ೯೩ ವರ್ಷದ ರೋಗಿಯೋರ್ವನಿಗೆ ರೋಬೋಟ್ ಸಹಾಯದಿಂದ ಹೃದಯ ಶಸ್ತçಚಿಕಿತ್ಸೆ ಮಾಡಿದ್ದು, ಈ ಸಾಧನೆ ಮಾಡಿರುವ ಭಾರತದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚೆನ್ನೆöÊನ ಗ್ರೀಮ್ಸ್ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ಈ ಶಸ್ತçಚಿಕಿತ್ಸೆ ಮಾಡಲಾಗಿದ್ದು, ರೋಬೋಟಿಕ್ಸ್ ಹೃದಯ ಶಸ್ತçಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಆಸ್ಪತ್ರೆಯ ವೈದ್ಯ ಡಾ.ಎಂ.ಎA.ಯೂಸುಫ್ ಹಾಗೂ ತಂಡ ಘೋಷಣೆ ಮಾಡಿದೆ. ೯೩ ವರ್ಷದ ರೋಗಿಯ ಮೇಲೆ ‘ರೋಬೋಟಿಕ್ ಅಸಿಸ್ಟೆಡ್ ಮಿನಿಮಲಿ ಇನ್ವೇಸಿವ್ ಕರೋನರಿ ಆರ್ಟರಿ ಬೈಪಾಸ್ ಗ್ರಾಫ್ಟ್ (ಸಿಎಬಿಜಿ)’ ಮಾಡುವ ಮೂಲಕ ಮೈಲಿಗಲ್ಲು ಸೃಷ್ಟಿಸಿದೆ. ಇದರಿಂದ ಎದೆಯಲ್ಲಿ ಸಣ್ಣ ರಂಧ್ರ ಮಾಡುವ ಬೈಪಾಸ್ ಶಸ್ತçಚಿಕಿತ್ಸೆ ನಡೆಸಲು ಸಹಕಾರಿಯಾಗುತ್ತದೆ.

ಏಕಕಾಲದಲ್ಲೇ ಅನ್ನನಾಳ ಕ್ಯಾನ್ಸರ್ ಹಾಗೂ ಮೂತ್ರಪಿಂಡದ ಕ್ಯಾನ್ಸರ್ ಹೊಂದಿದ್ದ ೭೪ ವರ್ಷದ ವ್ಯಕ್ತಿಗೆ ರೋಬೋಟ್ ಸಹಾಯದ ಮೂಲಕ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಇತ್ತೀಚೆಗೆ ಯಶಸ್ವಿ ಶಸ್ತçಚಿಕಿತ್ಸೆ ನಡೆಸಿದೆ. ಇದು ವಿಶ್ವದಲ್ಲೇ ಅಪರೂಪದ ಪ್ರಕರಣಗಳಲ್ಲಿ ಒಂದಾಗಿದೆ ಎನ್ನಲಾಗಿದೆ. ಬಹುವಿಭಾಗಿ ವೈದ್ಯರುಗಳಾದ ಆಂಕೋಲಜಿ ಮತ್ತು ಹೆಮಟೋ ಆಂಕೋಲಾಜಿ, ಫೊರ್ಟಿಸ್ ಕ್ಯಾನ್ಸರ್ ಇನ್ಸಿ÷್ಟಟ್ಯೂಟ್ ನಿರ್ದೇಶಕಿ ಡಾ. ನೀತಿರೈಝಾದ್, ಮೂತ್ರಶಾಸ್ತ್ರ ನಿರ್ದೇಶಕ ಡಾ. ಮೋಹನ್ ಕೇಶವಮೂರ್ತಿ, ಸರ್ಜಿಕಲ್ ಗ್ಯಾಸ್ಟೊçà ಎಂಟರಾಲಜಿ ಹಿರಿಯ ಸಲಹೆಗಾರ ಡಾ. ಮನೀಶ್ ಜೋಶಿ ತಂಡ ಶಸ್ತçಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ. ಆಘ್ಘಾನಿಸ್ತಾನ ಮೂಲದ ೭೪ ವರ್ಷದ ಇಳಿ ವಯಸ್ಸಿನ ವ್ಯಕ್ತಿಗೆ ಪ್ರಾರಂಭದಲ್ಲಿ ಆಹಾರ ಸೇವನೆ ಕಷ್ಟವಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಅನ್ನನಾಳದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ವಿವಿಧ ಪರೀಕ್ಷೆಗಳ ನಂತರ ಅವರಿಗೆ ಎಡ ಮೂತ್ರ ಪಿಂಡದಲ್ಲಿಯೂ ಗಡ್ಡೆಯೊಂದಿಗೆ ‘ಓಸೋಪೇಜಿಲ್ ಕ್ಯಾನ್ಸರ್' ಇರುವುದು ತಿಳಿದು ಬಂದಿತ್ತು. ಅತ್ಯಂತ ಅಪಾಯಕಾರಿ ಕ್ಯಾನ್ಸರ್ ಆಗಿತ್ತು ಎಂದು ಆಸ್ಪತ್ರೆ ತಿಳಿಸಿದೆ. ಸಾಮಾನ್ಯವಾಗಿ ಒಮ್ಮೆಲೆ ಎರಡೂ ರೀತಿಯ ಕ್ಯಾನ್ಸರ್ ಕಾಣಿಸಿಕೊಳ್ಳುವುದೇ ಅಪರೂಪದ ಪ್ರಕರಣವಾಗಿದೆ. ಎರಡು ರೀತಿಯ ಕ್ಯಾನ್ಸರ್ ಇರುವ ವ್ಯಕ್ತಿಗೆ ಶಸ್ತçಚಿಕಿತ್ಸೆ ಮಾಡಿದರೂ ಬದುಕುಳಿಯುವ ಸಾಧ್ಯತೆ ಶೇ.೯೦ರಷ್ಟು ಕಡಿಮೆ. ಈ ವ್ಯಕ್ತಿಗೆ ಅನ್ನನಾಳ ಹಾಗೂ ಮೂತ್ರಪಿಂಡ ದಲ್ಲಿ ಕ್ಯಾನ್ಸರ್ ಇದ್ದ ಕಾರಣ ಕಿಮೋರೇಡಿಯೇಷನ್ ಚಿಕಿತ್ಸೆಯಿಂದ ಪ್ರಾರಂಭಿಸಿ, ನಂತರದಲ್ಲಿ ರೋಬೋಟ್ ನೆರವಿನ ಮೂಲಕ ಏಕಕಾಲ ದಲ್ಲಿಯೇ ಎರಡೂ ಶಸ್ತçಚಿಕಿತ್ಸೆ ನಡೆಸಲಾಗಿದೆ. ಭಾರತವು ತಲೆ ಮತ್ತು ಕತ್ತು ಕ್ಯಾನ್ಸರ್ ಶಸ್ತçಚಿಕಿತ್ಸೆಯನ್ನು ರೋಬೋಟಿಕ್ ವಿಧಾನದಿಂದ ನಡೆಸುವಂಥ ಬಹಳಷ್ಟು ಪ್ರತಿಭೆ ಹಾಗೂ ತಜ್ಞರನ್ನು ಹೊಂದಿದೆ ಎಂದು ಅಮೆರಿಕಾದ ಸ್ಯಾನ್ಫೋರ್ಡ್ ಕ್ಯಾನ್ಸರ್ ಸೆಂಟರ್ನ ಮುಖ್ಯಸ್ಥ ಡಾ. ಕ್ರಿಸ್ ಹೋಲ್ಸಿಂಗರ್ ಅಭಿಪ್ರಾಯಪಟ್ಟಿದ್ದಾರೆ. ತಲೆ ಮತ್ತು ಕತ್ತು ಕ್ಯಾನ್ಸರ್ ಶಸ್ತçಚಿಕಿತ್ಸೆಯನ್ನು ರೊಬೋಟಿಕ್ ವಿಧಾನದ ಮೂಲಕ ಕೈಗೊಂಡರೆ ಬಾಯಿಯ ಮೂಲಕವೇ ಗಡ್ಡೆ ತೆಗೆದು ಹಾಕಬಹುದು. ಹೀಗಾಗಿ ನೋವು, ರಕ್ತನಷ್ಟ ಕಡಿಮೆ. ಜೊತೆಗೆ ಮುಖ ಇಲ್ಲವೇ ಕತ್ತಿನಲ್ಲಿ ಯಾವುದೇ ಕಲೆಯೂ ಉಳಿಯುವುದಿಲ್ಲ ಎಂಬುದು ಈ ವಿಧಾನದ ಹೆಗ್ಗಳಿಕೆ. -“ಚಕ್ರವರ್ತಿ”