ಶ್ರೀಮಂಗಲ, ಆ. ೫: ಪೊನ್ನಂಪೇಟೆಯ ಕಿಗ್ಗಟ್ಟ್ನಾಡ್ ಕೊಡವ ಹಿತರಕ್ಷಣಾ ಬಳಗದಿಂದ ಕಳೆದ ಹಲವು ವರ್ಷಗಳಿಂದ ಕಕ್ಕಡ ಪದ್‌ನೆಟ್ಟ್ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದ್ದು, ಕಳೆದ ಎರಡು ವರ್ಷಗಳ ಅಂತರದ ಬಳಿಕ (ಕೋವಿಡ್ ಕಾರಣ) ಈ ಬಾರಿ ವಿಜೃಂಭಣೆಯಿAದ ಆಚರಿಸಲಾಯಿತು.

ವಿಶೇಷವಾಗಿ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ಸಂಜೆ ಗಮನಸೆಳೆಯಿತು. ಕೊಡವ ಸಮಾಜದಿಂದ ನೂರಾರು ಮಂದಿ ಪುರುಷರು, ಮಹಿಳೆಯರು, ಮಕ್ಕಳು ಪಂಜು ಹಿಡಿದು ಮೆರವಣಿಗೆಯಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿದ ದೃಶ್ಯ ಆಕರ್ಷಣೀಯವಾಗಿತ್ತು. ಬಳಿಕ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ಕೊಡವ ಆರ್ಕೆಸ್ಟಾçದೊಂದಿಗೆ ಕಕ್ಕಡದ ವಿಶೇಷವಾದ ಮದ್ದು ಪಾಯಸ ಸಹಿತವಾಗಿ ಇತರ ಖಾದ್ಯಗಳ ಊಟೋಪಚಾರ ಜರುಗಿತು.

ಸಂಸ್ಕೃತಿ ಉಳಿವಿಗೆ ಕರೆ

ಹಬ್ಬ ಹರಿದಿನಗಳ ಮಹತ್ವವನ್ನು ಅರಿತು ಆಚರಣೆ ಮಾಡುವುದರ ಮೂಲಕ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರು ಅಭಿಪ್ರಾಯಪಟ್ಟರು.

ಸಭಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಕೊಡವರ ಎಲ್ಲಾ ಹಬ್ಬ ಹರಿದಿನಗಳು ಈ ಭೂಮಿಗೆ ಬಾಂಧವ್ಯ ಬೆಸೆದಿವೆ. ಆದ್ದರಿಂದ ಕೊಡಗಿನ ಭೂಮಿಯನ್ನು ನಾವು ಎಂದಿಗೂ ಕಳೆದುಕೊಳ್ಳದೆ ಕಾಪಾಡಿಕೊಳ್ಳಬೇಕಾಗಿದೆ. ಕೊಡವ ಸಮಾಜಗಳು ಕೇವಲ ಕಲ್ಯಾಣ ಮಂಟಪಕ್ಕೆ ಸೀಮಿತವಾಗಿ ಕೆಲಸ ಮಾಡುವುದನ್ನು ಬಿಟ್ಟು ಕೊಡವ ಜನಾಂಗದ ಅಭಿವೃದ್ಧಿ ಹಿತಾಸಕ್ತಿ ಮತ್ತು ಸಂರಕ್ಷಣೆಗೆ ಒತ್ತು ನೀಡಬೇಕು ಎಲ್ಲಾ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುವ ಜನಾಂಗದವರು ಒಂದೇ ವೇದಿಕೆಯಲ್ಲಿ ಬಂದು ರಾಜಕೀಯ ರಹಿತವಾಗಿ ಕೊಡವ ಜನಾಂಗದ ಏಳಿಗೆಗೆ ಶ್ರಮಿಸುವ ಮನಸ್ಸು ಮಾಡಬೇಕು. ಪ್ರಸ್ತುತ ಕೊಡವರು ವಿವಿಧ ರಾಜಕೀಯ ಪಕ್ಷದಲ್ಲಿ ಗುರುತಿಸಿ ಗುರುತಿಸಿಕೊಂಡರೂ ರಾಜಕೀಯದಲ್ಲಿ ಒಂದು ಹಂತದವರೆಗೆ ಮಾತ್ರ ಬೆಳೆಯಲು ಸಾಧ್ಯವಾಗುತ್ತಿದ್ದು ಈ ಬಗ್ಗೆ ಚಿಂತನೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಮತ್ತೋರ್ವ ಅತಿಥಿ ಗೋಣಿಕೊಪ್ಪಲು ಕಾವೇರಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಚಿರಿಯಪಂಡ ಕೆ. ಉತ್ತಪ್ಪ ಮಾತನಾಡಿ, ಜನಾಂಗ ಉಳಿದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ. ಪ್ರಸುತ್ತ ಕೊಡವ ಜನಾಂಗದಲ್ಲಿ ಜನಸಂಖ್ಯೆ ಕ್ಷೀಣಿಸುತ್ತಿದ್ದು, ಜನಾಂಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಬಗ್ಗೆ ಕೊಡವ ಜನಾಂಗದ ಪ್ರಮುಖರು ಬುದ್ಧಿಜೀವಿಗಳು ಚಿಂತಿಸಿ ಜನಾಂಗದ ಹಿತಾಸಕ್ತಿಯನ್ನು ಕಾಪಾಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊನ್ನಂಪೇಟೆ ಕ್‌ಗ್ಗಟ್ಟ್ ಕೊಡವ ಹಿತರಕ್ಷಣಾ ಬಳಗದ ಉಪಾಧ್ಯಕ್ಷ ಚೆಕ್ಕೆರ ರಮೇಶ್, ಕಳೆದ ಎರಡು ವರ್ಷಗಳಿಂದ ಕೋವಿಡ್-೧೯ ಹಿನ್ನೆಲೆ ಕಕ್ಕಡ ೧೮ ಪಂಜಿನ ಮೆರವಣಿಗೆ ನಮ್ಮೆಯನ್ನು ಆಚರಿಸಲು ಸಾಧ್ಯವಾಗಲಿಲ್ಲ. ಈ ಬಾರಿ ಎಲ್ಲರ ಸಹಕಾರದಿಂದ ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಜನಾಂಗದ ಪ್ರತಿಯೊಬ್ಬರು ಕೊಡವ ಸಂಸ್ಕೃತಿ, ಭಾಷೆ, ಆಚಾರ, ವಿಚಾರ, ಪದ್ಧತಿ, ಪರಂಪರೆ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.

ಪ್ರತಿಭಾವಂತರಿಗೆ ಸನ್ಮಾನ

ಈ ಸಂದರ್ಭ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಚಿರಿಯಪಂಡ ಮನಿಶ ಲಕ್ಷಿö್ಮ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಆಪಟ್ಟಿರ ಕವಿನ ಚಂಗಪ್ಪ ಮತ್ತು ಮುಕಾಟೀರ ತೀರ್ಥ ಕಾವೇರಪ್ಪ ಅವರನ್ನು ಸನ್ಮಾನಿಸಲಾಯಿತು.

ಜಭ್ಬೂಮಿ ಸಂಘಟನೆಯ ಸಂಚಾಲಕ ಚೋಟ್ಟೆಕ್ ಮಾಡ ರಾಜೀವ್ ಬೋಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಹಬ್ಬಾಚರಣೆಯ ಮಹತ್ವವನ್ನು ಅರಿಯುವಂತೆ ಕರೆ ನೀಡಿದರು. ಕಳ್ಳಿಚಂಡ ದೀನಾ ಪ್ರಾರ್ಥಿಸಿದರು. ಮಲ್ಲಮಾಡ ಪ್ರಭು ಪೂಣಚ್ಚ ವಂದಿಸಿದರು. ಉಳುವಂಗಡ ಲೋಹಿತ್ ಭೀಮಯ್ಯ ನಿರೂಪಿಸಿದರು.

ಈ ಸಂದರ್ಭ ಕಿಗ್ಗಟ್ಟ್ನಾಡು ಕೊಡವ ಹಿತ ರಕ್ಷಣಾ ಬಳಗದ ಕಾರ್ಯದರ್ಶಿ ಗಾಂಡAಗಡ ಕೌಶಿಕ್ ದೇವಯ್ಯ, ಖಜಾಂಚಿ ಕೋಟೆರ ಕಿಶನ್ ಉತ್ತಪ್ಪ, ಮಾಜಿ ಅಧ್ಯಕ್ಷ ಕಾಯಪಂಡ ಸನ್ನಿ ಬೋಪಣ್ಣ, ಆಲೆಮಾಡ ಸುಧೀರ್, ಕಳ್ಳಿಚಂಡ ಕೃಷ್ಣ, ಅಡ್ಡಂಡ ಸುನಿಲ್, ಚಿರಿಯಪ್ಪಂಡ ಸುನಿ, ಮತ್ರಂಡ ಜಾಕಿ ಉತ್ತಯ್ಯ, ಅಜ್ಜಿಕುಟ್ಟಿರ ಶುಭ, ಮಲಚೀರ ಉತ್ತಪ್ಪ ಹಾಗೂ ಇತರರು ಹಾಜರಿದ್ದರು. ಇದಕ್ಕೂ ಮೊದಲು ಪೊನ್ನಂಪೇಟೆ ಕೊಡವ ಸಮಾಜದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ನೂರಾರು ಕೊಡವರು ಸಾಂಪ್ರದಾಯಿಕ ಉಡುಪಿನೊಂದಿಗೆ ಮಹಿಳೆಯರು ಮಕ್ಕಳು ಸೇರಿದಂತೆ ಹಿರಿಯರು ಒಡ್ಡೋಲಗದೊಂದಿಗೆ ಪಂಜಿನ ಮೆರವಣಿಗೆಯನ್ನು ನಡೆಸಿದರು. ಈ ಸಂದರ್ಭ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಸಾಮೂಹಿಕವಾಗಿ ವಾಲಗತಾಟ್‌ಗೆ ಹೆಜ್ಜೆ ಹಾಕಿ ಗಮನಸೆಳೆದರು.

ನಂತರದ ಕೊಡವ ನೈಟ್ ಸಿಂಪೋನಿ ತಂಡದಿAದ ಕೊಡವ ಹಾಡುಗಳ ರಸಮಂಜರಿ ಕಾರ್ಯಕ್ರಮ ಜನಮನ ಸೆಳೆಯಿತು. ಬೊಪ್ಪಂಡ ಜೆಫ್ರಿ ಅಯ್ಯಪ್ಪ, ಚಕ್ಕೆರ ಪಂಚಮ್ ಬೋಪಣ್ಣ, ಮಾಳೆಟೀರ ಅಜಿತ್ ಪೂವಣ್ಣ, ಬಟ್ಟಿಯಂಡ ಲಿಖಿತ, ಉಳುವಂಗಡ ಲೋಹಿತ್ ಭೀಮಯ್ಯ ಅವರು ಕೊಡವ ಹಾಡುಗಳನ್ನು ಹಾಡಿ ಮನರಂಜಿಸಿದರು.

ಈ ಸಂದರ್ಭ ಎಲ್ಲರಿಗೂ ಕಕ್ಕಡ ನಮ್ಮೆಯ ವಿಶೇಷ ಖಾದ್ಯ ಮದ್ದುಪುಟ್ಟು ಹಾಗೂ ಸಾಂಪ್ರದಾಯಿಕ ಊಟೋಪಚಾರವನ್ನು ಏರ್ಪಡಿಸಲಾಗಿತ್ತು.