ಮಡಿಕೇರಿ, ಆ. ೪: ಹೊಟೇಲ್ ಮತ್ತು ಉಪಹಾರ ಮಂದಿರಗಳಲ್ಲಿ ಸೇವಾ ಶುಲ್ಕವನ್ನು ವಿಧಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಸೇವಾ ಶುಲ್ಕ ವಿಧಿಸುವುದನ್ನು ಕಾನೂನಿನಲ್ಲಿ ಕಡ್ಡಾಯಗೊಳಿಸಿಲ್ಲ.
ಈ ರೀತಿಯ ನ್ಯಾಯಸಮ್ಮತವಲ್ಲದ ಸೇವಾ ಶುಲ್ಕವನ್ನು ವಿಧಿಸುವ ವ್ಯಾಪಾರಿ ಪ್ರವೃತ್ತಿಯನ್ನು ತಡೆಗಟ್ಟುವ ಸಲುವಾಗಿ ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ, ಭಾರತ ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲಾಗಿದೆ.
ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ಹೊರಡಿಸಿರುವ ಮಾರ್ಗಸೂಚಿಗಳನ್ವಯ ನ್ಯಾಯ ಸಮ್ಮತವಲ್ಲದ ವ್ಯಾಪಾರಿ ಪ್ರವೃತ್ತಿಯ ಬಗ್ಗೆ ಹಾಗೂ ಸೇವಾ ಶುಲ್ಕವನ್ನು ವಿಧಿಸುವ ಬಗ್ಗೆ ರಾಷ್ಟಿçÃಯ ಗ್ರಾಹಕರ ಸಹಾಯವಾಣಿಗೆ ದಾಖಲಾಗುವ ದೂರುಗಳ ತನಿಖೆಯನ್ನು ಕೈಗೊಳ್ಳಲು ಗ್ರಾಹಕರ ಹಿತರಕ್ಷಣಾ ಕಾಯ್ದೆ ೨೦೧೯ರನ್ವಯ ಜಿಲ್ಲಾಡಳಿತಕ್ಕೆ ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ತಿಳಿಸಿದ್ದಾರೆ.