ಗುಡ್ಡೆಹೊಸೂರು, ಆ. ೫: ಇಲ್ಲಿಗೆ ಸಮೀಪದ ಬೊಳ್ಳೂರು ಗ್ರಾಮಕ್ಕೆ ಸೇರಿದ ಸುಣ್ಣದಕೆರೆ ಎಂಬಲ್ಲಿ ಈ ಹಿಂದೆ ತೋಟಗಾರಿಕಾ ಇಲಾಖೆಗೆ ಸೇರಿದ ಜಾಗದÀಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸ್ಮಶಾನ ಮಾಡಲು ಮುಂದಾಗಿರುವುದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬAಧ ಜಿಲ್ಲಾಡಳಿತಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪತ್ರ ಸಲ್ಲಿಸಲಾಗಿತ್ತು. ಬಳಿಕ ಸಂಬAಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಗ್ರಾಮಸ್ಥರ ಹೇಳಿಕೆ ಪಡೆದು ಮುನ್ನಡೆಯುವಂತೆ ಆದೇಶವಿದೆ. ಆದರೆ, ಅಲ್ಲಿನ ಸಾಧಕ ಬಾದಕಗಳ ಬಗ್ಗೆ ಯೋಚಿಸದೆ ಸರ್ವೆ ಕಾರ್ಯ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಜಾಗದಲ್ಲಿ ಇದೀಗ ವಿವಿಧ ಜಾತಿಯ ಹಣ್ಣಿನ ಗಿಡಗಳು ಬೆಳೆದು ನಿಂತಿವೆ. ಗ್ರಾಮಕ್ಕೆ ಸೇರಿದ ಗುಳಿಗನ ಸ್ಥಾನ ಗುರುತು ಮಾಡಿದ ಸ್ಥಳದಲ್ಲಿದೆ.

ಪಕ್ಕದಲ್ಲಿ ನಾಗದೇವರ ಬನ, ಶ್ರೀ ಚಾಮುಂಡೇಶ್ವರಿ, ಮುನೇಶ್ವರ ದೇವರ ಬನಗಳು ಪಕ್ಕದಲ್ಲಿವೆ. ಈ ಸ್ಥಳವು ಗ್ರಾಮದ ರೈತರ ಜಮೀನು ಮತ್ತು ಅರಣ್ಯಕ್ಕೆ ಹೊಂದಿಕೊAಡಿದ್ದು, ಮುಂದಿನ ದಿನಗಳಲ್ಲಿ ಅರಣ್ಯ ಕಾಡ್ಗಿಚ್ಚು ಸಂಭವಿಸಬಹುದು ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ ಮಾತನಾಡಿ, ಗಿರಿಜನರು ವಾಸವಿರುವ ಪರಿಸರದಲ್ಲಿ ಸ್ಮಶಾನ ನಿರ್ಮಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ವಿರೋಧ ಹಿನ್ನೆಲೆ ಗುಡ್ಡೆಹೊಸೂರು ಪಿ.ಡಿ.ಓ. ಶ್ಯಾಂ ಮತ್ತು ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಚರ್ಚಿಸಿದರು.

-ಗಣೇಶ್ ಕುಡೆಕ್ಕಲ್