*ಗೋಣಿಕೊಪ್ಪ, ಆ. ೫: ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಸ್ವ ಉದ್ಯೋಗವನ್ನು ಕಂಡುಕೊಳ್ಳಬೇಕು ಎಂದು ವೀರಾಜಪೇಟೆ ತಾಲೂಕು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಕುಲ್ಲೇಟಿರ ಪ್ರವಿ ಮೊಣ್ಣಪ್ಪ ಹೇಳಿದರು.

ಗೋಣಿಕೊಪ್ಪದ ಮಹಿಳಾ ಸಹಕಾರ ಸಂಘದ ಕಚೇರಿ ಆವರಣದಲ್ಲಿ ನಡೆದ ಮಹಿಳೆಯರಿಗೆ ಸಾಲ ಸೌಲಭ್ಯದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕೆಂಬ ಉದ್ದೇಶದೊಂದಿಗೆ ವೀರಾಜಪೇಟೆ, ಪೊನ್ನಂಪೇಟೆ ತಾಲೂಕು ಮಹಿಳಾ ಸಹಕಾರ ಸಂಘ ಕ್ರಿಯಾಶೀಲ ಚಟುವಟಿಕೆಗೆ ಚಿಂತನೆ ಹರಿಸಿದೆ. ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಸಹಕಾರ ಸಂಘ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಸ್ವಉದ್ಯೋಗ ಕಂಡುಕೊಳ್ಳುವ ಮಾರ್ಗವನ್ನು ತೋರಿಸುತ್ತಿದೆ ಎಂದರು.

ಉಪಾಧ್ಯಕ್ಷೆ ಕಡೆಮಾಡ ಕುಸುಮ ಜೋಯಪ್ಪ, ನಿರ್ದೇಶಕರುಗಳಾದ ಎಂ. ಮಂಜುಳ ಮಂಜು, ವರಲಕ್ಷಿö್ಮ, ಕೊಟ್ಟಂಗಡ ಅಮ್ಮಕ್ಕಿ ಪೂವಯ್ಯ, ಹೆಚ್.ವಿ. ಸರೋಜ ವೆಂಕಟೇಶ್, ಚೇಂದAಡ ಸುಮಿ ಸುಬ್ಬಯ್ಯ, ತೀತಿರ ಅನಿತಾ ಸುಬ್ಬಯ್ಯ, ಲಿಲ್ಲಿ ಅಂಥೋಣಿ, ರಾಣಿ ನಾರಾಯಣ, ಎಂ.ಕೆ. ಶೀಲಾ, ವ್ಯವಸ್ಥಾಪಕಿ ಕಸ್ತೂರಿ ಹಾಗೂ ಫಲಾನುಭವಿಗಳು ಹಾಜರಿದ್ದರು.