ವೀರಾಜಪೇಟೆ, ಆ. ೪: ವೀರಾಜಪೇಟೆ ಪದವಿಪೂರ್ವ ಕಾಲೇಜಿನ ೨೦೨೨ಮತ್ತು ೨೩ ನೇ ಸಾಲಿನ ವಿದ್ಯಾರ್ಥಿ ಸಂಘ, ಎನ್.ಎಸ್.ಎಸ್ ಘಟಕ ಹಾಗೂ ಇ.ಎಲ್.ಸಿ ಘಟಕಗಳ ಉದ್ಘಾಟನಾ ಸಮಾರಂಭವೂ ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮತಿಯ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಈ ಹಂತದಲ್ಲಿ ರೂಪಿಸಿಕೊಳ್ಳಲು ಆರಂಭಿಸಬೇಕು. ಆ ಮೂಲಕ ಸಮಾಜದ ಉತ್ತಮವಾದ ಪ್ರಜೆಗಳಾಗಬೇಕು ಎಂದು ಕಿವಿಮಾತಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಚಾರ್ಲ್ಸ್ ಡಿಸೋಜಾ ಅವರು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯೆ ಆಶಾ ಸುಬ್ಬಯ್ಯ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಎನ್.ಕೆ ಮಾತನಾಡಿದರು.
ವಿದ್ಯಾರ್ಥಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸಂಘದ ಕಾರ್ಯದರ್ಶಿ ಸುಜಾತ ಪಿ.ಎ ತಮ್ಮ ವರದಿಯನ್ನು ಮಂಡಿಸಿದರು. ಉಪನ್ಯಾಸಕ ದಿನೇಶ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋದಿಸಿದರು. ಎನ್.ಎಸ್.ಎಸ್ ರೋವರ್ ಘಟಕದ ಸಂಯೋಜನಾಧಿಕಾರಿ ವನೀತ್ ಕುಮಾರ್ ವರದಿ ವಾಚಿಸಿದರು. ಸುಮಾರು ಇಪ್ಪತ್ತೆöÊದಕ್ಕೂ ಹೆಚ್ಚಿನ ದಾನಿಗಳು ನೀಡಿರುವ ದತ್ತಿನಿಧಿ ಬಹುಮಾನವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕೊರೊನಾದಿಂದಾಗಿ ಎರಡು ವರ್ಷಗಳಿಂದ ನೀಡದೇ ಬಾಕಿಯಾಗಿದ್ದ ದತ್ತಿನಿಧಿಯನ್ನು ಈ ಸಂದರ್ಭ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸದೀದ ಮತ್ತು ತಂಡ ಪ್ರಾರ್ಥಿಸಿದರೆ, ಕನ್ನಡ ಉಪನ್ಯಾಸಕಿ ಗೌರಿ ಕೆ.ಬಿ ಎಲ್ಲಾರನ್ನು ಸ್ವಾಗತಿಸಿದರು. ಉಪನ್ಯಾಸಕಿ ಪವಿತ್ರಾ ಕುಮಾರಿ ವಂದನಾರ್ಪಣೆ ಮಾಡಿದರು, ಕಾರ್ಯಕ್ರಮವನ್ನು ಉಪನ್ಯಾಸಕಿ ಸುಜಾತ ಪಿ.ಎ ನಿರೂಪಿಸಿದರು.