ಮಡಿಕೇರಿ, ಆ. ೫: ಮಡಿಕೇರಿ ನಗರದಲ್ಲಿ ಮಹಿಳೆಯರು ಮನೆ ಮನೆಗಳಲ್ಲಿ ವರ ಮಹಾಲಕ್ಷಿö್ಮ ಹಬ್ಬವನ್ನು ಶ್ರದ್ಧಾ - ಭಕ್ತಿಯಿಂದ ಆಚರಿಸಿದರು. ಮಳೆಯ ನಡುವೆ, ವರಮಹಾಲಕ್ಷಿö್ಮ ಮೂರ್ತಿಯನ್ನು ಪ್ರತಿಷ್ಠಾಪಿಸಿ ತುಪ್ಪದ ದೀಪವನ್ನಿಟ್ಟು, ಬಗೆ ಬಗೆಯ ಸಿಹಿತಿಂಡಿ ಗಳು, ಹಣ್ಣು - ಹಂಪಲು, ನೈವೇದ್ಯವಿಟ್ಟು, ಹೂವುಗಳಿಂದ ಅಲಂಕರಿಸಿ, ಬಳೆ - ಸೀರೆಗಳನ್ನು ತೊಡಿಸಿ ಭಕ್ತಿಯಿಂದ ದೇವಿಯನ್ನು ಪ್ರಾರ್ಥಿಸಿದರು. ನಗರದ ಹಲವೆಡೆ ದೇವಸ್ಥಾನಗಳಲ್ಲಿಯೂ ವರಮಹಾಲಕ್ಷಿö್ಮ ಪ್ರಯುಕ್ತ ವಿಶೇಷ ಪೂಜಾ ವಿಧಾನಗಳು ನಡೆದವು. ಭಕ್ತರು ಮಳೆಯಲ್ಲಿಯೇ ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸಿ, ಪೂಜೆ ನಡೆಸುತ್ತಿದ್ದರು.ಶ್ರದ್ಧಾಭಕ್ತಿಯಿಂದ ನಡೆದ ವರ ಮಹಾಲಕ್ಷಿö್ಮ ಹಬ್ಬ

ಮುಳ್ಳೂರು: ವರಮಹಾಲಕ್ಷಿö್ಮ ಹಬ್ಬವನ್ನು ಶನಿವಾರಸಂತೆ ವ್ಯಾಪ್ತಿಯಲ್ಲಿ ಶ್ರದ್ಧಾಭಕ್ತಿಯಿಂದ ತಮ್ಮ ಮನೆಗಳಲ್ಲಿ ಆಚರಿಸಿದರು. ಕೆಲವು ಕಡೆಗಳಲ್ಲಿ ದೇವಸ್ಥಾನಗಳಲ್ಲಿ ವರ ಮಹಾಲಕ್ಷಿö್ಮ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದರು. ಬಹಳಷ್ಟು ಮನೆಗಳಲ್ಲಿ ವರ ಮಹಾಲಕ್ಷಿö್ಮ ಹಬ್ಬದ ಪ್ರಯುಕ್ತ ವರ ಮಹಾಲಕ್ಷಿö್ಮ ದೇವರ ವಿಗ್ರಹವನ್ನು ಹೂವುಗಳಿಂದ ಅಲಂಕರಿಸಿ ಪೂಜಿಸಿದರು. ಶನಿವಾರಸಂತೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಮನೆಗಳಲ್ಲಿ ವರ ಮಹಾಲಕ್ಷಿö್ಮ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.