ಮಡಿಕೇರಿ, ಆ. ೫: ಪ್ರತೀ ಕುಟುಂಬಕ್ಕೂ ಸ್ವಂತ ನಿವೇಶನ ಹಾಗೂ ಮನೆ ನಿರ್ಮಿಸಿಕೊಳ್ಳುವ ಕನಸು ನನಸು ಮಾಡಲು ಸರ್ಕಾರ ಮುಂದಾಗಿದ್ದು, ವಸತಿ ರಹಿತ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗುತ್ತಿದೆ ಎಂದು ಶಾಸಕÀ ಎಂ.ಪಿ. ಅಪ್ಪಚ್ಚುರಂಜನ್ ತಿಳಿಸಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕಿನ ೮ ಗ್ರಾ.ಪಂ.ಗಳ ವಸತಿ ರಹಿತ ೨೬೦ ಫಲಾನುಭವಿಗಳಿಗೆ ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಯ ಮನೆ ನಿರ್ಮಾಣದ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.

ಬಸವ ವಸತಿ ಯೋಜನೆಯಲ್ಲಿ ೧.೬೨ ಲಕ್ಷ ರೂ. ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ೨ ಲಕ್ಷ ರೂ. ಸಹಾಯಧನ ದೊರೆಯಲಿದೆ. ಆ ನಿಟ್ಟಿನಲ್ಲಿ ಜನವರಿ, ಫೆಬ್ರವರಿ ಒಳಗೆ ಮನೆ ನಿರ್ಮಿಸಿಕೊಳ್ಳುವಂತೆ ಶಾಸಕರು ಸಲಹೆ ನೀಡಿದರು.

ಸರ್ಕಾರದ ನಿಯಮದಂತೆ ಮನೆ ನಿರ್ಮಿಸಿಕೊಳ್ಳಬೇಕು. ಮನೆ ನಿರ್ಮಾಣ ನಂತರ ತಮಗೆ ಬೇಕಾದಂತೆ ಮನೆ ಉನ್ನತ್ತೀಕರಿಸಿಕೊಳ್ಳಬಹುದು. ಆ ನಿಟ್ಟಿನಲ್ಲಿ ಕಾಲಮಿತಿಯಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಬೇಕು. ವಸತಿ ಸಚಿವರಾದ ವಿ.ಸೋಮಣ್ಣ ಅವರು ಕೊಡಗು ಜಿಲ್ಲೆಯ ಪ್ರತೀ ಗ್ರಾ.ಪಂ.ಯಲ್ಲಿ ಹೆಚ್ಚುವರಿಯಾಗಿ ೧೦ ಮನೆಗಳ ನಿರ್ಮಾಣಕ್ಕೆ ಅವಕಾಶ ಮಾಡಿದ್ದಾರೆ. ೨೦೨೪ರ ಅವಧಿಯೊಳಗೆ ಮನೆ ಇಲ್ಲದ ಪ್ರತೀ ಬಡವರಿಗೆ ಮನೆ ನಿರ್ಮಿಸಿಕೊಡುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯವಾಗಿದೆ. ಆ ನಿಟ್ಟಿನಲ್ಲಿ ಬಡವರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದರು.

ರಾಜ್ಯ ಸರ್ಕಾರದಿಂದ ಶೇ.೪೦ ರಷ್ಟು, ಕೇಂದ್ರ ಸರ್ಕಾರದಿಂದ ಶೇ.೬೦ ರಷ್ಟು ಹಣ ಬಿಡುಗಡೆಯಾಗಲಿದ್ದು, ಹಂತ ಹಂತವಾಗಿ

(ಮೊದಲ ಪುಟದಿಂದ) ಮನೆ ನಿರ್ಮಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಮಿಕ ಇಲಾಖೆ ವತಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ವಿವಿಧ ಬಗೆಯ ಟೂಲ್ ಕಿಟ್‌ಗಳನ್ನು (ಬಾರ್ ಬೆಂಡಿAಗ್ ೫೦, ಕಾರ್ಪೆಂಟರ್ ೧೬೧, ಎಲೆಕ್ಟಿçÃಷಿಯನ್ ೧೪೦, ಪೇಂಟರ್ ೨೦೭, ಪ್ಲಂಬರ್ ೨೦, ಮೇಸನ್ ಕಿಟ್ ೪೦೦) ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಇದೇ ಸಂದರ್ಭದಲ್ಲಿ ವಿತರಿಸಿದರು.

ತಾ.ಪಂ.ಇಒ ಶೇಖರ್ ಅವರು ಮಾಹಿತಿ ನೀಡಿ ಸರ್ವರಿಗೂ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುತ್ತಿದೆ. ಆ ನಿಟ್ಟಿನಲ್ಲಿ ಮಡಿಕೇರಿ ತಾಲೂಕಿನ ಕೆ.ನಿಡುಗಣೆ, ಗಾಳಿಬೀಡು, ಹೊದ್ದೂರು, ಮರಗೋಡು, ಮೂರ್ನಾಡು, ಕಡಗದಾಳು, ಹೊಸ್ಕೇರಿ, ಮಕ್ಕಂದೂರು ಗ್ರಾ.ಪಂ.ವ್ಯಾಪ್ತಿಯ ೨೬೦ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣ ಆದೇಶ ಪತ್ರ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಜಿ.ಪಂ.ಯೋಜನಾ ನಿರ್ದೇಶಕರಾದ ಜಗದೀಶ್, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಅನಿಲ್ ಬಗಟಿ, ತಾಲ್ಲೂಕು ಕಾರ್ಮಿಕ ಅಧಿಕಾರಿ ಎಂ.ಎA.ಯತ್ನಟ್ಟಿ, ಜಿ.ಪಂ.ಜಿಲ್ಲಾ ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್, ವಸತಿ ನೋಡಲ್ ಅಧಿಕಾರಿ ಬಾನುಪ್ರಕಾಶ್, ಎಂಟು ಗ್ರಾ.ಪಂ.ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಫಲಾನುಭವಿಗಳು ಇದ್ದರು. ಸುನಿತಾ ಮತ್ತು ತಂಡದವರು ಪ್ರಾರ್ಥಿಸಿದರು. ಹೊಸ್ಕೇರಿ ಗ್ರಾ.ಪಂ.ಪಿಡಿಒ ಅಂಜನಾ ಮೂರ್ತಿ ಸ್ವಾಗತಿಸಿದರು. ಹೊದ್ದೂರು ಗ್ರಾ.ಪಂ.ಪಿಡಿಒ ಅಬ್ದುಲ್ಲಾ ವಂದಿಸಿದರು.