ಮಡಿಕೇರಿ, ಆ. ೫: ಕರ್ನಾಟಕ ಪೊಲೀಸ್ ಇಲಾಖೆ ಗುಪ್ತಚರ ವಿಭಾಗದಲ್ಲಿ ಡಿವೈಎಸ್‌ಪಿ ಆಗಿ ಸೇವೆ ಸಲ್ಲಿಸುತ್ತಿದ್ದ ಜಿಲ್ಲೆಯವರಾದ ವಿಶ್ವನಾಥ ಕೆ.ಬಿ. ಕುಕ್ಕೇಟಿ ಅವರನ್ನು ಪೊಲೀಸ್ ಅಧೀಕ್ಷಕರಾಗಿ (ಎಸ್.ಪಿ.) ಮುಂಬಡ್ತಿ ನೀಡಿ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು ಆದೇಶಿಸಿದ್ದಾರೆ. ಅವರನ್ನು ಲೋಕಾಯುಕ್ತ ಎಸ್.ಪಿ. ಆಗಿ ನೇಮಕ ಮಾಡಲಾಗಿದೆ.

ಎಸ್.ಪಿ. ಆಗಿ ವಿಶ್ವನಾಥ್‌ಗೆ ಮುಂಬಡ್ತಿ

(ಮೊದಲ ಪುಟದಿಂದ) ಮಂಡೆಕೋಲು ಗ್ರಾಮದ ಕುಕ್ಕೇಟಿ ಬೋಜಪ್ಪ ಗೌಡರ ಪುತ್ರರಾದ ಇವರು ಪ್ರಸ್ತುತ ಕೊಡಗಿನ ಸೋಮವಾರಪೇಟೆ ಬಳಿಯ ಗೋಣಿಮರೂರಿನಲ್ಲಿ ನೆಲೆಸಿದ್ದಾರೆ. ಇವರು ಸುಳ್ಯ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಆರಂಭಿಸಿ ಬಳಿಕ ಇನ್ಸ್ಪೆಕ್ಟರ್ ಹಾಗೂ ಡಿವೈಎಸ್ಪಿ ಆಗಿ ಬಡ್ತಿ ಹೊಂದಿ ಬೆಂಗಳೂರು, ಮಂಡ್ಯ, ತುರುವೆಕೆರೆ, ತುಮಕೂರು ಮುಂತಾದ ಕಡೆ ಸೇವೆ ಸಲ್ಲಿಸಿದ್ದಾರೆ.