ಬರ್ಮಿಂಗ್‌ಹ್ಯಾಮ್, ಆ. ೫: ಕಾಮನ್‌ವೆಲ್ತ್ ಗೇಮ್ಸ್ ೨೦೨೨ರಲ್ಲಿ ಭಾರತದ ಪದಕದ ಬೇಟೆ ಮುಂದು ವರೆದಿದೆ. ಪ್ಯಾರಾ (ವಿಶೇಷ ಚೇತನರ) ಪವರ್ ಲಿಫ್ಟಿಂಗ್‌ನಲ್ಲಿ ಭಾರತದ ಸುಧೀರ್ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಪುರುಷರ ಹೆವಿ ವೇಯ್ಟ್ ವಿಭಾಗದಲ್ಲಿ ಸುಧೀರ್ ೧೩೪.೫ ಅಂಕಗಳೊAದಿಗೆ

(ಮೊದಲ ಪುಟದಿಂದ) ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಇತಿಹಾಸ ನಿರ್ಮಿಸಿದರು. ಈ ಮೂಲಕ ಭಾರತದ ಪದಕಗಳ ಸಂಖ್ಯೆ ೨೦ಕ್ಕೇರಿದೆ. ೮೭ ಕೆಜಿ ಇರುವ ಸುಧೀರ್ ತಮ್ಮ ಮೊದಲ ಪ್ರಯತ್ನದಲ್ಲಿ ೨೦೮ ಕೆಜಿ ಭಾರ ಎತ್ತಿದರು. ಇನ್ನು ಎರಡನೇ ಪ್ರಯತ್ನದಲ್ಲಿ ೨೧೨ ಕೆಜಿ ಎತ್ತಿ ದಾಖಲೆಯ ೧೩೪.೫ ಅಂಕಗಳನ್ನು ಗಳಿಸಿದರು. ಈ ಮೂಲಕ ಕಾಮನ್ ವೆಲ್ತ್ ಗೇಮ್ಸ್ ೨೦೨೨ ರಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.