ಮಡಿಕೇರಿ, ಆ. ೫ : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ೨೨೨ನೇ ರ‍್ಯಾಂಕ್‌ನ ಸಾಧನೆ ಮಾಡಿರುವ ಕೊಡಗಿನ ಯುವಕ ಮುಂಡAಡ ರಾಜೇಶ್ ಪೊನ್ನಪ್ಪ ಇದೀಗ ಇಂಡಿಯನ್ ಫಾರಿನ್ ಸರ್ವೀಸ್ (ಐ.ಎಫ್.ಎಸ್) ಹುದ್ದೆಗೆ ಆಯ್ಕೆಗೊಂಡಿದ್ದಾರೆ. ಮೂಲತಃ ನೆಲಜಿ ಗ್ರಾಮದವರಾದ ಮುಂಡAಡ ಜಯಾ ಪೂವಯ್ಯ ಹಾಗೂ ಸುಧಾ ಪೂವಯ್ಯ ದಂಪತಿಯ ಪುತ್ರ ರಾಜೇಶ್ ಪೊನ್ನಪ್ಪ ಕಳೆದ ಮೇ ತಿಂಗಳಿನಲ್ಲಿ ಪ್ರಕಟವಾದ ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶದಲ್ಲಿ ರಾಷ್ಟçಮಟ್ಟದಲ್ಲಿ ೨೨೨ನೆಯ ರ‍್ಯಾಂಕ್ ಪಡೆದುಕೊಂಡಿದ್ದರು.

ಇAಡಿಯನ್ ಫಾರಿನ್ ಸರ್ವೀಸ್ (ಐ.ಎಫ್.ಎಸ್) ತಮ್ಮ ಪ್ರಥಮ ಆಯ್ಕೆ ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದ ಅವರು ಇದೀಗ ಈ ಹುದ್ದೆಗೆ ನಿಯೋಜಿತರಾಗಿದ್ದಾರೆ. ತಾವು ಪ್ರಥಮ ಆಯ್ಕೆಯಾಗಿ ಐ.ಎಫ್.ಎಸ್ ಹಾಗೂ ದ್ವಿತೀಯ ಆಯ್ಕೆಯಾಗಿ ಐ.ಪಿ.ಎಸ್ ಅನ್ನು ಕೋರಿ ಮನವಿ ಸಲ್ಲಿಸಿದ್ದು, ಇದೀಗ ತಮ್ಮ ಅಪೇಕ್ಷೆಯಂತೆ ಇಂಡಿಯನ್ ಫಾರಿನ್ ಸರ್ವೀಸ್ ಸ್ಥಾನ ಲಭಿಸಿರುವದು ಸಂತಸ ತಂದಿದೆ. ತರಬೇತಿ ಬಳಿಕ ಸ್ಥಾನ ನಿಯೋಜಿತಗೊಳ್ಳಲಿದೆ ಎಂದು ರಾಜೇಶ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.