ಕೊಡ್ಲಿಪೇಟೆ, ಆ. ೫: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಮು ದಾಯದ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಾಗಿರುವ ಕಾಯಿದೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆ ವಿನಃ ದುರ್ಬಳಕೆ ಯಾಗದಂತೆ ಎಚ್ಚರವಹಿಸಬೇಕು ಎಂದು ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೋಭಿತ್ ಗೌಡ ಹೇಳಿದರು.

ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೋಮವಾರಪೇಟೆ ಇವರ ಸಹಯೋಗದಲ್ಲಿ ಕೊಡ್ಲಿಪೇಟೆ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ದೌರ್ಜನ್ಯ ತಡೆ ಕಾಯ್ದೆ ಕುರಿತು ವಿಚಾರಗೋಷ್ಠಿ ಮತ್ತು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ದೌರ್ಜನ್ಯ ತಡೆ ಕಾಯಿದೆ ಕುರಿತ ಪರಿಣಾಮಕಾರಿ ಯಾಗಿ ಜನರಲ್ಲಿ ಅರಿವು ಮೂಡಿಸು ವುದು ಅಗತ್ಯವಾಗಿದೆ ಎಂದರು. ಕೊಡ್ಲಿಪೇಟೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಬಾಬು ಮಾತನಾಡಿ, ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕುಗಳು ಹಾಗೂ ಸೌಲಭ್ಯ ಕೊಟ್ಟಿದೆ. ಭಾರತ ದೇಶ ಯಾವುದೇ ವರ್ಗ ಹಾಗೂ ಜನಾಂಗಕ್ಕೆ ಸೀಮಿತವಾದ ರಾಷ್ಟç ಅಲ್ಲ ಎಂಬದನ್ನು ಸಂವಿಧಾನದ ಪೀಠಿಕೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ತಿಳಿಸಿದ್ದಾರೆ ಎಂದರು.

ಮುಖ್ಯ ಶಿಕ್ಷಕ ಅಬ್ದುಲ್ ರಬ್ ಮಾತನಾಡಿ, ಭಾರತದ ಸಂವಿಧಾನ ವಿಶ್ವ ಶ್ರೇಷ್ಠ ಸಂವಿಧಾನವಾಗಿದ್ದು, ಸಮಾಜದಲ್ಲಿ ಪ್ರತಿಯೊಬ್ಬರು ಸಮಾನತೆಯಿಂದ ಬದುಕಬೇಕು ಎಂಬದು ಸಂವಿಧಾನ ಆಶಯಗಳಲ್ಲಿ ಒಂದಾಗಿದೆ ಎಂದರು.

ಉಪನ್ಯಾಸಕ ಯೋಗೇಂದ್ರ ಮಾತನಾಡಿ, ದಲಿತ ಸಮುದಾಯವು ಕೀಳರಿಮೆಯನ್ನು ಬಿಟ್ಟು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು. ವಕೀಲ ವೆಂಕಟೇಶ್ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ದೌರ್ಜನ್ಯ ತಡೆ ಕಾಯಿದೆ ಸಮಸ್ಯೆ ಮತ್ತು ಸವಾಲುಗಳ ಕುರಿತು ಮಾಹಿತಿ ನೀಡಿದರು.

ಸೋಮವಾರ ಪೇಟೆ ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ಬಾಲಕೃಷ್ಣ ರೈ, ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಸೋಮವಾರಪೇಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕೊಡ್ಲಿಪೇಟೆ ಗ್ರಾ.ಪಂ. ಸದಸ್ಯರಾದ ಪ್ರಸನ್ನಕುಮಾರ್, ಲಾವಣ್ಯ, ಪ್ರಭಾರ ಅಭಿವೃದ್ಧಿ ಅಧಿಕಾರಿ ಹೂವಯ್ಯ, ಅಕ್ರಮ ಸಕ್ರಮ ಸಮಿತಿ ಸದಸ್ಯ ಕೆಂಚಯ್ಯ, ತಾಲೂಕು ದಸಂಸ ಸಂಚಾಲಕ ಡಿ.ಎನ್. ವಸಂತ, ದಸಂಸ ಮುಖಂಡ ಕೂಡ್ಲೂರು ದೇವರಾಜ್, ವಿವಿಧ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ರಾದ ಹೆಚ್.ಎಸ್. ಮಧು, ಅಲ್ತಪ್ ಮೊಮೀನ್, ಮಂಜುನಾಥ್, ಹೆಚ್.ಎಸ್. ಮುತ್ತಮ್ಮ, ಶಶಿಕಲಾ, ಆಶ್ರಮ ಶಾಲೆ ಮುಖ್ಯ ಶಿಕ್ಷಕ ಹೆಚ್.ಎಲ್. ರವಿ, ಮಾಲಂಬಿ ಆಶ್ರಮ ಶಾಲೆ ಮುಖ್ಯ ಶಿಕ್ಷಕ ಹೆಚ್.ಕೆ. ಆನಂದ್, ಸಿಬ್ಬಂದಿ ಡಿಲಕ್ಸ್, ಪತ್ರಕರ್ತ ರಘು ಹೆಬ್ಬಾಲೆ ಉಪಸ್ಥಿತರಿದ್ದರು. ಹೆಚ್.ಎಸ್. ಮಧು ನಿರೂಪಿಸಿದರು. ಹೆಚ್.ಎನ್. ರವಿ ಸ್ವಾಗತಿಸಿದರು.