ಸೋಮವಾರಪೇಟೆ, ಆ. ೫: ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯದ ಬ್ರಾಹ್ಮಣ ಸಮಾಜದ ವಾರ್ಷಿಕ ಮಹಾಸಭೆ ನಂಜಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ಮುಂದಿನ ವರ್ಷ ದೇವಾಲಯಕ್ಕೆ ೭೫ ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಎಲ್ಲರ ಸಹಕಾರದಿಂದ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಎಲ್ಲರೂ ಸಹಕಾರ ನೀಡಬೇಕೆಂದರು.

ಸಭೆಯಲ್ಲಿ ಉಪಾಧ್ಯಕ್ಷ ಸುದರ್ಶನ್ ಕೌಶಿಕ್, ಕಾರ್ಯದರ್ಶಿ ಎಸ್.ಡಿ. ವಿಜೇತ, ಪದಾಧಿಕಾರಿಗಳಾದ ಹರೀಶ್, ಶ್ಯಾಮ್ ಸುಂದರ್, ರಾಜೇಶ್ ಪದ್ಮನಾಭ, ಜಯಂತ್, ನಂದಕುಮಾರ್, ನಾಗರಾಜ್, ಚಿರಂಜೀವಿ, ದೇವಿ ಬಳಗದ ಅಧ್ಯಕ್ಷೆ ಚೂಡಾರತ್ನ ಮತ್ತಿತರರು ಇದ್ದರು.