ಚೆಟ್ಟಳ್ಳಿ, ಆ. ೫: ಮಕ್ಕಂದೂರು ಕೊಡವ ಸಮಾಜದಲ್ಲಿ ಕಕ್ಕಡ -೧೮ ಹಬ್ಬವನ್ನು ಆಚರಿಸಲಾಯಿತು. ಸಮಾಜದ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ ಅವರ ಅಧ್ಯಕ್ಷತೆ ಯಲ್ಲಿ ನಡೆದ ಸಮಾರಂಭದಲ್ಲಿ ಸಮಾಜದ ಮಾಜಿ ಅಧ್ಯಕ್ಷ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿ ಆಯ್ಕೆಗೊಂಡ ನಾಪಂಡ ರವಿ ಕಾಳಪ್ಪ ಅವರನ್ನು ಸನ್ಮಾನಿಸಲಾಯಿತು. ಪೊಮ್ಮಕ್ಕಡ ಕೂಟದ ಸದಸ್ಯರಿಗೆ ಕಕ್ಕಡ -೧೮ ರ ವಿಶೇಷ ಖಾದ್ಯ ತಯಾರಿ ಸ್ಪರ್ಧೆ ಏರ್ಪಡಿಸಲಾಗಿತ್ತು.