ಮಡಿಕೇರಿ, ಆ. ೫: ಕಳೆದ ೧೬ ವರ್ಷಗಳಿಂದ ವಿದ್ಯಾರ್ಥಿಗಳಿಗೆ ನೃತ್ಯ, ಭರತನಾಟ್ಯ, ಯಕ್ಷಗಾನ, ಚಿತ್ರಕಲೆ, ಅಭಿನಯ, ಸಂಗೀತ ಇನ್ನಿತರ ಪ್ರಾಕಾರಗಳ ಸಾಂಸ್ಕೃತಿಕ ತರಬೇತಿ ನೀಡುತ್ತಾ ಬಂದಿರುವ ಅಂಕೋಲದ ಸಂಗಾತಿ ರಂಗಭೂಮಿ ವತಿಯಿಂದ ಲಯನ್ಸ್ ಕ್ಲಬ್ ಅಂಕೋಲಾ ಸಿಟಿ ಸಹಯೋಗದಲ್ಲಿ ಕರ್ನಾಟಕ ಡಾನ್ಸ್ ಚಾಂಪಿಯನ್ ಎಂಬ ೧೦೦೦ ಸಂಚಿಕೆಗಳ ರಾಜ್ಯಮಟ್ಟದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಪಟ್ಟಣದ ಗುರುಪ್ರಸಾದ ಸಭಾ ಭವನದಲ್ಲಿ ನಡೆಯಿತು.
ಈ ಸಂಸ್ಥೆ ಇದೀಗ ನೃತ್ಯಪಟುಗಳನ್ನು ಪ್ರೋತ್ಸಾಹಿಸಲು ರಾಜ್ಯಮಟ್ಟದಲ್ಲಿ ವಿಭಿನ್ನ ಕಾರ್ಯಕ್ರಮ ನಡೆಸಬೇಕೆಂಬ ಉದ್ದೇಶ ಹೊಂದಿದೆ. ಇದರಂತೆ ರಾಜ್ಯಮಟ್ಟದ ಬೃಹತ್ ವೇದಿಕೆಯಲ್ಲಿ ನೃತ್ಯ ಪ್ರದರ್ಶಿಸಿ ರಾಜ್ಯದ ಮುಖ್ಯಮಂತ್ರಿಯವರಿAದ ಸನ್ಮಾನ ಸ್ವೀಕರಿಸಲು ಕೊಡಗು ಜಿಲ್ಲೆಯಿಂದ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ಡಾನ್ಸ್ ಇನ್ಸ್ಟಿಟ್ಯೂಷನ್ ಆಯ್ಕೆಯಾಗಿದೆ. ಈ ಸಂಸ್ಥೆಯ ೨೪೮ ನೃತ್ಯಪಟುಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ. ಸಂಸ್ಥೆಯು ಇದುವರೆಗೆ ೧೦೦ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿ ಸಾಧನೆ ಮಾಡಿದ್ದು, ೬೪ ರಾಜ್ಯ ಪ್ರಶಸ್ತಿಗಳನ್ನು ತನ್ನ ಮುಡಿಗೆರಿಸಿಕೊಂಡಿದೆ. ಪ್ರಶಂಸನಾ ಪತ್ರ ವಿತರಿಸುವ ಸಂದರ್ಭದಲ್ಲಿ ಸಂಗಾತಿ ರಂಗಭೂಮಿಯ ಕಾರ್ಯಾಧ್ಯಕ್ಷÀ
ಕೆ. ರಮೇಶ್, ಇನ್ನಿತರ
ಗಣ್ಯರು ಹಾಜರಿದ್ದರು. ನೃತ್ಯ ಸಂಯೋಜಕರಾದ ಮಹೇಶ್, ಕಿರಣ್ ಹಾಗೂ ಯಶಸ್ವಿನಿ ಇದ್ದರು.