(ವಿಶೇಷ ವರದಿ : ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಆ. ೫: ಆನೆ ಮಾವುತರು ಮತ್ತು ಸಹಾಯಕರು ತಮ್ಮ ಬೇಡಿಕೆ ಈಡೇರಿಸದಿದ್ದರೆ, ಪ್ರಸಕ್ತ ಸಾಲಿನಲ್ಲಿ ಮೈಸೂರು ದಸರಾಗೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಮುಷ್ಕರ ನಡೆಸಿದ್ದರು. ಇದರ ಬೆನ್ನಲ್ಲೇ ಕೊಡಗು ಸೇರಿದಂತೆ ರಾಜ್ಯದ ೫ ಸಾಕಾನೆ ಶಿಬಿರಗಳ ಮಾವುತರು ಮತ್ತು ಸಹಾಯಕರಿಗೆ ರಾಜ್ಯ ಸರಕಾರ ವೇತನ ಪರಿಷ್ಕರಿಸಿದೆ. ಇದರಿಂದ ಸಂತೃಪ್ತಿ ಗೊಂಡಿರುವ ಮಾವುತರು ದಸರಾಗೆ ತಮ್ಮ ಗಜಗಳೊಂದಿಗೆ ಪಯಣ ಬೆಳೆಸಲಿರುವುದಾಗಿ ದುಬಾರೆ ಮಾವುತ ಪ್ರಮುಖ ಧೋಬಿ ‘ಶಕ್ತಿ’ಯೊಂದಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕೊಡಗು ಅರಣ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ಎನ್.ಮೂರ್ತಿ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಮಾವುತರು ಮತ್ತು ಸಹಾಯಕರ ಬೇಡಿಕೆಗೆ ಸರಕಾರ ತಕ್ಷಣ ಸ್ಪಂದಿಸಿ ಪರಿಹಾರ ಪ್ರಕಟಿಸಿದ್ದು, ಮೈಸೂರು ದಸರಾವು ಸುಸೂತ್ರವಾಗಿ ನಡೆಯಲು ಎಲ್ಲಾ ಸಿಬ್ಬಂದಿ ಸಹಕಾರ ನೀಡುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಖಚಿತಪಡಿಸಿದರು.

೮ ಸಿಬ್ಬಂದಿಗಳ ಅಮಾನತು.!

ತಮ್ಮ ವೇತನ ತಾರತಮ್ಯ ಬಗೆ ಹರಿಸುವಂತೆ ೧೩೭ ಸಿಬ್ಬಂದಿಗಳು ನ್ಯಾಯಯುತವಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ

(ಮೊದಲ ಪುಟದಿಂದ) ಸಂಬAಧಿಸಿದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಪೊಲೀಸ್ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದರು.

ಸರ್ಕಾರ ಇವರ ಬೇಡಿಕೆ ಈಡೇರಿಸುತ್ತಿದ್ದಂತೆಯೇ ಮುಷ್ಕರದ ಹಿನೆÀ್ನಲೆ ಕಾರಣವನ್ನು ಮುಂದಿಟ್ಟುಕೊAಡು ಇಲಾಖೆಯ ಹಿರಿಯ ಅಧಿಕಾರಿಗಳು ಸಕ್ರೆಬೈಲಿನ ಸಾಕಾನೆ ಶಿಬಿರದ ೭ ಮಂದಿ ಆನೆ ಮಾವುತರನ್ನು ಓರ್ವ ಕಾವಾಡಿಗರನ್ನು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ. ಇದರಿಂದ ಕಂಗೆಟ್ಟ ಉಳಿದ ಆನೆ ಮಾವುತರು ಕಾವಾಡಿಗರು ಹೊರಡಿಸಿರುವ ಆದೇಶವನ್ನು ಹಿಂಪಡೆಯುವAತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಆ.೧ರಂದು ಒಂಟಿ ಸಲಗವನ್ನು ಸಕ್ರೆಬೈಲು ವಲಯದಲ್ಲಿ ಸೆರೆಹಿಡಿಯಲು ನಿರ್ಧರಿಸಲಾಗಿತ್ತು. ಆ ಸಂದರ್ಭ ಈ ೮ ಮಂದಿ ಸಿಬ್ಬಂದಿ ಮುಷ್ಕರದ ನೆಪದಲ್ಲಿ ಕಾರ್ಯಾಚರಣೆಯಲ್ಲಿ ಸಹಕರಿಸುವುದಿಲ್ಲ ಎಂದು ಅಸಹಕಾರ ತೋರಿದರು. ಈ ಹಿನ್ನೆಲೆಯಲ್ಲಿ ಈ ೮ ಮಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕೃತ ಜ್ಞಾಪನಾ ಪತ್ರದಲ್ಲಿ ಸೂಚಿಸಲಾಗಿದೆ.

ಕಾಡಿನಿಂದ ನಾಡಿಗೆ ಬಂದ ಕಾಡಾನೆಯನ್ನು ಸಾರ್ವಜನಿಕರ ಮೇಲೆ ದಾಳಿ ಮಾಡಿದ ಮತ್ತು ಬೆಳೆ ನಷ್ಟ ಮಾಡುತ್ತಿರುವ ಅನೇಕ ಆನೆಗಳನ್ನು ಸಾಕಾನೆಗಳ ಮುಖಾಂತರ ಮಾವುತ ಮತ್ತು ಕಾವಾಡಿಗರು ಕಾರ್ಯಾಚರಣೆ ಮಾಡಿ ಸೆರೆಹಿಡಿದು ನಂತರ ಶಿಬಿರಕ್ಕೆ ತಂದು ಕ್ರಾಲ್‌ನಲ್ಲಿ ಪಳಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆನೆ ಮಾವುತರು ಕಾವಾಡಿಗರು ಹಾಗೂ ಜಮೆದಾರರು ವಿಶ್ವವಿಖ್ಯಾತ ಮೈಸೂರು ನಾಡಹಬ್ಬ ದಸಾರ ಮಹೋತ್ಸವದಲ್ಲಿ ತಮ್ಮ ಆನೆಗಳೊಂದಿಗೆ ಪಾಲ್ಗೊಂಡು ಗಮನ ಸೆಳೆಯುತ್ತಿದ್ದರು. ಕಾರ್ಯಕ್ರಮದ ತರುವಾಯ ಈ ಆನೆಗಳು ಹಾಗೂ ಸಿಬ್ಬಂದಿಗಳು ಕಾಡಾನೆಗಳ ಸಹಾಯದಿಂದ ಕಾಡಿನಲ್ಲಿ ಬೇರೆ ಬೇರೆ ರೀತಿಯ ಕೆಲಸಗಳಿಗೆ ಅಣಿಯಾಗುತ್ತಿದ್ದರು. ದಿನನಿತ್ಯ ಇಂತಹ ಪಳಗಿಸಿದ ಆನೆಗಳೊಂದಿಗೆ ಬೆರೆತು ಆನೆ ಕೆಲಸ ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ವೇತನವಿಲ್ಲದೆ ಕಷ್ಟದಲ್ಲಿ ಸಿಲುಕಿದ್ದರು.

ಕೊಡಗು ಜಿಲ್ಲೆಗೆ ಆಗಮಿಸಿದ್ದ ರಾಜ್ಯಪಾಲರ ಗಮನ ಸೆಳೆದಿದ್ದು ಸಮಸ್ಯೆ ಪರಿಹಾರಕ್ಕೆ ಮುಖ್ಯ ಮಂತ್ರಿಗಳೊAದಿಗೆ ಮಾತನಾಡುವಂತೆ ಮನವಿ ನೀಡಿದ್ದರು. ಈ ವೇಳೆ ರಾಜ್ಯಪಾಲರು ಸಮಸ್ಯೆ ಪರಿಹಾರದ ಬಗ್ಗೆ ಭರವಸೆ ನೀಡಿದ್ದರು. ಆನೆ ಮಾವುತರ ಸಂಘವು ಹಲವು ಸುತ್ತುಗಳ ಸಭೆ ನಡೆಸಿ ಅಂತಿಮವಾಗಿ ತಮ್ಮ ಬೇಡಿಕೆ ಈಡೇರದಿದ್ದಲ್ಲಿ ಮೈಸೂರು ದಸರಾದ ಗಜಪಯಣಕ್ಕೆ ತೆರಳದಿರಲು ಒಮ್ಮತದ ತೀರ್ಮಾನ ಕೈಗೊಂಡಿದ್ದರು.

ಈ ವೇಳೆ ಕೊಡಗು ಜಿಲ್ಲೆಯ ಸಿಸಿಎಫ್ ಬಿ.ಎನ್.ಮೂರ್ತಿ ಕಾರ್ಮಿಕರನ್ನು ಭೇಟಿ ಮಾಡಿ ಸಮಸ್ಯೆ ಬಗೆ ಹರಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದರು. ಸಿಸಿಎಫ್ ನೀಡಿದ ಭರವಸೆಯಂತೆಯೆ ಕಳೆದ ೮ ವರ್ಷಗಳಿಂದ ವೇತನ ತಾರತಮ್ಯ ನಿವಾರಣೆ ಮಾಡುವಂತೆ ಪ್ರತಿಭಟಿಸುತ್ತ ಬಂದಿದ್ದ ಆನೆ ಮಾವುತರ, ಕಾವಾಡಿಗರ ಹಾಗೂ ಜಮೇದಾರರ ವೇತನ ತಾರತಮ್ಯವನ್ನು ಅರಣ್ಯ ಇಲಾಖೆಯು ಆ.೩ರಂದು ನಿವಾರಿಸಿ ಇವರ ಬೇಡಿಕೆಯಂತೆ ವೇತನವನ್ನು ಬಿಡುಗಡೆಗೊಳಿಸಿ ಆದೇಶ ಮಾಡಿತ್ತು.