ಮಡಿಕೇರಿ, ಆ. ೩: ಮೂಲತಃ ಕಾಕೋಟುಪರಂಬುವಿನವರಾದ ಬೆಂಗಳೂರಿನಲ್ಲಿ ನೆಲೆಸಿದ್ದ ವೀರಚಕ್ರ ಪುರಸ್ಕೃತ ನಿವೃತ್ತ ಕರ್ನಲ್ ಮಂಡೇಟಿರ ರವಿ (೭೭) ಅವರು ತಾ. ೩ ರಂದು ನಿಧನರಾದರು. ೧೯೭೧ ಇಂಡೋ-ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದ ರವಿ ಅವರು ಯುದ್ಧ ಸಂದರ್ಭ ತೋರಿದ ಅಪ್ರತಿಮ ಶೌರ್ಯಕ್ಕೆ ವೀರಚಕ್ರ ಪುರಸ್ಕೃತರಾಗಿದ್ದರು. ರವಿ ಅವರ ಪುತ್ರ ಕರ್ನಲ್ ಅವಿನ್ ಉತ್ತಯ್ಯ ಪ್ರಸ್ತುತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಸೇನಾ ಮೆಡಲ್ (ಗ್ಯಾಲೆಂಟ್ರಿ) ಪುರಸ್ಕೃತರಾಗಿದ್ದಾರೆ. ಮೃತರ ಅಂತ್ಯಸAಸ್ಕಾರ ತಾ.೪ ರಂದು ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ವಿಲ್‌ಸನ್ ಗಾರ್ಡನ್‌ನಲ್ಲಿ ನಡೆಯಲಿದೆ.