ಮಡಿಕೇರಿ, ಆ. ೩: ಕೊಡಗು ಜಿಲ್ಲೆಯಾದ್ಯಂತ ವಿದ್ಯುತ್ ವಿತರಣೆಗೆ ನಿರ್ಮಿಸಿರುವ ಮಾರ್ಗಗಳಲ್ಲಿ ಮರಗಳ ರೆಂಬೆ ಕೊಂಬೆಗಳ ಬೀಳುವಿಕೆಯಿಂದಾಗಿ ಕಂಬಗಳು ಬಾಗಿ, ತಂತಿಗಳು ಕೆಳಮಟ್ಟಕ್ಕಿಳಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಅಪಾಯ ಮಟ್ಟದಲ್ಲಿರುವ ವಿದ್ಯುತ್ ತಂತಿಗಳು, ಶಿಥಿಲಗೊಂಡಿರುವ ಕಂಬಗಳು ಕಂಡು ಬಂದರೆ ಸ್ವತಃ ಕ್ರಮಕೈಗೊಳ್ಳದೇ (ವಿದ್ಯುತ್ ತಂತಿಗಳನ್ನು ಸ್ಪರ್ಶಿಸದೇ) ತಕ್ಷಣ ನಮ್ಮ ಇಲಾಖೆಯ ದೂರವಾಣಿ ಸಂಖ್ಯೆಗೆ ತಮ್ಮ ದೂರುಗಳನ್ನು ದಾಖಲಿಸುವಂತೆ ಕೋರಿದೆ. (೨೪x೭) ಸರ್ವೀಸ್ ಸೆಂಟರ್‌ನ “೧೯೧೨”, ಮಡಿಕೇರಿ ತಾಲೂಕು ಗ್ರಾಹಕರ ಸೇವಾ ಕೇಂದ್ರ ೦೮೨೭೨-೨೪೮೪೫೪ ಮತ್ತು ೯೪೪೯೫೯೮೬೬೫, ಸೋಮವಾರಪೇಟೆ ತಾಲೂಕು:- ಗ್ರಾಹಕರ ಸೇವಾ ಕೇಂದ್ರ: ೯೪೪೮೨೮೩೩೯೩, ವೀರಾಜಪೇಟೆ ತಾಲೂಕು:- ಗ್ರಾಹಕರ ಸೇವಾ ಕೇಂದ್ರ ೯೪೪೮೨೮೯೪೦೯, ಪೊನ್ನಂಪೇಟೆ ತಾಲೂಕು ಗ್ರಾಹಕರ ಸೇವಾ ಕೇಂದ್ರ ೦೮೨೭೪-೨೪೭೨೨೨, ಕುಶಾಲನಗರ ತಾಲೂಕು ಗ್ರಾಹಕರ ಸೇವಾ ಕೇಂದ್ರ ೦೮೨೭೬-೨೭೧೦೪೬ನ್ನು ಸಂಪರ್ಕಿಸಬಹುದು ಎಂದು ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಅನಿತಾ ಬಾಯಿ ತಿಳಿಸಿದ್ದಾರೆ.