ಬರ್ಮಿಂಗ್‌ಹಾಮ್, ಆ.೩: ಇಂಗ್ಲೆAಡಿನ ಬರ್ಮಿಂಗ್‌ಹಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕೊಡಗಿನವರಾದ ಅಶ್ವಿನಿ ಪೊನ್ನಪ್ಪ ಅವರನ್ನು ಒಳಗೊಂಡ ಭಾರತದ ಬ್ಯಾಂಡ್ ಮಿಂಟನ್ ತಂಡವು ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ. ಸೆಮಿ ಫೈನಲ್‌ನಲ್ಲಿ ಸಿಂಗಾಪುರದೊAದಿಗೆ ಗೆದ್ದು ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದ ಭಾರತ ಮಲೇಷಿಯಾ ವಿರುದ್ಧ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಗೊಂಡಿತು. ೨೦೧೮ ರಲ್ಲಿ ನಡೆದ ಫೈನಲ್‌ನಲ್ಲಿ ಭಾರತ ಮಲೇಷಿಯಾ ವಿರುದ್ಧ ಗೆಲ್ಲುವ ಮೂಲಕ ಚಿನ್ನ ಪಡೆದಿತ್ತು.

ಫೈನಲ್‌ನಲ್ಲಿನ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾತ್ವಿಕ್ ಸಾಯ್‌ರಾಜ್ ರಂಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ೧೮-೨೧ ಹಾಗೂ ೧೫-೨೧ ಪಾಯಿಂಟ್ಸ್ಗಳ ಮೂಲಕ ಮಲೇಷಿಯಾದ ವಿರುದ್ಧ ಸೋಲನು ಭವಿಸಿದರು. ಮಹಿಳೆಯರ ಸಿಂಗಲ್ಸ್ನಲ್ಲಿ ಪಿ.ವಿ ಸಿಂಧು ೨೨-೨೦ ಹಾಗೂ ೨೧-೧೭ ಮೂಲಕ ಜಯ ಸಾಧಿಸಿರು. ಪುರುಷರ ಸಿಂಗಲ್ಸ್ನಲ್ಲಿ ಕಿದಂಬಿ ಶ್ರೀಕಾಂತ್ ೧೯-೨೧, ೨೧-೬ ಹಾಗೂ ೧೬-೨೧ ಪಾಯಿಂಟ್ಸ್ಗಳ ಮೂಲಕ ಸೋಲನುಭವಿಸಿದರು.

(ಮೊದಲ ಪುಟದಿಂದ) ಮಹಿಳೆಯರ ಡಬಲ್ಸ್ನಲ್ಲಿ ಟ್ರೀಸಾ ಜಾಲಿ ಹಾಗೂ ಗಾಯತ್ರಿ ಗೋಪಿಚಂದ್ ಜೋಡಿ ೧೮-೨೧, ೧೭-೨೧ ಮೂಲಕ ಸೋಲನುಭವಿಸಿತು. ಒಟ್ಟು ೩ ಪಂದ್ಯಗಳು ಮಲೇಷಿಯಾ ಗೆದ್ದರೆ, ೧ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತು. ಈ ಕಾರಣದಿಂದಾಗಿ ೫ನೇ ಮಿಶ್ರ ಡಬಲ್ಸ್ನಲ್ಲಿ ಆಡಬೇಕಿದ್ದ ರಂಕಿರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಆಟದಿಂದ ವಂಚಿತವಾಯಿತು. ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧದ ಪಂದ್ಯದಲ್ಲಿ ಮಿಶ್ರ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ - ರೆಡ್ಡಿ ಜೋಡಿ ೨೧-೯, ೨೧-೧೧ ಪಾಯಿಂಟ್ಸ್ ಮೂಲಕ ಉತ್ತಮ ಸಾಧನೆ ತೋರಿತ್ತು.