ಮಡಿಕೇರಿ, ಆ. ೩: ಕೊಡಗಿನಲ್ಲಿ ವರ್ಷಕ್ಕೊಮ್ಮೆ ಆಚರಿಸುವ

ಕಕ್ಕಡ ಪದಿನೆಟ್ಟ್ ಅನ್ನು ಜಿಲ್ಲೆಯ ವಿವಿಧೆಡೆ ಸಂಭ್ರಮದಿAದ ಆಚರಿಸಲಾಯಿತು.

ಮದ್ದುಸೊಪ್ಪಿನಿಂದ ತಯಾರು ಮಾಡುವ ಪಾಯಸ, ಹಿಟ್ಟನ್ನು ಸವಿಯುವುದು ಈ ಆಚರಣೆಯ ವಿಶೇಷವಾಗಿದ್ದು, ಈ ದಿನ ಆಟಿ ಸೊಪ್ಪಿನಲ್ಲಿ ೧೮ ಔಷಧೀಯ

ಗುಣಗಳು ಸೇರುವುದರಿಂದ ಜಿಲ್ಲೆಯ ಮನೆಗಳಲ್ಲಿ ಇದನ್ನು ತಯಾರಿಸಿ ಸೇವನೆ ಮಾಡ ಲಾಗುತ್ತದೆ. ವಿವಿಧೆಡೆ ಸಂಘಟನೆಗಳು ಕೂಡ ಕಕ್ಕಡ ಪದ್‌ನೆಟ್ಟ್ ಅನ್ನು ಆಚರಿಸಿತು. ಸಾಂಪ್ರದಾಯಿಕ ಖಾದ್ಯಗಳಾದ ಮದ್ದುಪಾಯಸ, ಕೋಳಿಸಾರು, ಪಂದಿಕರಿ, ಪತ್ರೊಡೆ ಸೇರಿದಂತೆ ಇನ್ನಿತರ ಅಡುಗೆ ಮಾಡಿ ಸೇವಿಸಿ ಸಂಭ್ರಮಿಸಿದರು.*ಗೋಣಿಕೊಪ್ಪ: ಕಕ್ಕಡ ೧೮ ಹಬ್ಬವನ್ನು ಗೋಣಿಕೊಪ್ಪ ಜನನಿ ಪೊಮ್ಮಕ್ಕಡ ಕೂಟದಿಂದ ವಿಶೇಷ ವಿವಿಧ ಬಗೆಯ ಆಹಾರ ತಯಾರಿಕೆ ಮತ್ತು ಸವಿಯುವುದರಿಂದ ಆಚರಿಸಲಾಯಿತು. ವೀರಾಜಪೇಟೆ ಅರಪಟ್ಟು ಮುಕ್ಕಾಟಿರ ಸವಿತಾ ಪೊನ್ನಪ್ಪ ಅವರ ಮನೆಯಲ್ಲಿ ಕಕ್ಕಡ ೧೮ರ ಸಂಭ್ರಮ ರಂಗೇರಿತು.

ಗ್ರಾಮೀಣ ಸೊಗಡಿನ ಕಕ್ಕಡ ೧೮ರ ವಿಶೇಷ ಖಾದ್ಯವಾದ ಮದ್ದುಸೊಪುö್ಪ ಪಾಯಸ, ನಾಟಿಕೋಳಿ, ಏಡಿ ಸಾರು, ಕಣಿಲೆ ಸಾರು, ಅಕ್ಕಿ ರೊಟ್ಟಿ, ಹಲಸಿನ ಬೀಜದ ಕಟ್ಲೇಟ್, ಪ್ಯಾಷನ್ ಫ್ರೂಟ್ ಬೀಜದ ಉಪ್ಪಿನ ಕಾಯಿ ಸೇರಿದಂತೆ ಹಲವಾರು ಬಾಯಲ್ಲಿ ನೀರು ತರಿಸುವ ಆಹಾರಗಳು ವಿಶೇಷ ಖಾದ್ಯಗಳಾಗಿದ್ದವು. ಜತೆಗೆ ೧೮ ಬಗೆಯ ಔಷಧಿ ಬೆರೆತ ಆಟಿ ಸೊಪ್ಪಿನಿಂದ ವಿವಿಧ ಬಗೆಯ ಆಹಾರವನ್ನು ಮಹಿಳೆಯರು ತಯಾರಿಸಿ ಸವಿದರು. ಕೊಡವ ವಾಲಗ, ಆಟಿ ೧೮ರ ಸಂಭ್ರಮದ ರಂಗೇರಿಸಿತು.

ಅಧ್ಯಕ್ಷೆ ಕುಲ್ಲೇಟಿರ ಪ್ರವಿ ಮೊಣ್ಣಪ್ಪ, ಕಾರ್ಯದರ್ಶಿ ಸುಮಿ ಉತ್ತಪ್ಪ, ಖಜಾಂಚಿ ಕೆ.ಜೆ. ತಾರ, ಸದಸ್ಯರುಗಳು ವಿ.ಎನ್. ಶಿಲ್ಪ, ಅಕ್ಕಮ್ಮ ಪೂವಣ್ಣ, ಕೆ.ಡಿ. ಧನು, ಸವಿತಾ ಪೊನ್ನಪ್ಪ, ಪೂಮಾಲೆ ಮಾಲಾ, ದಮಯಂತಿ ಕಾವೇರಮ್ಮ, ಮಮಿತಾ ಕೆ.ಎಂ., ಆಶಾ. ಕೆ.ಎಂ., ತಂಗಮ್ಮ ಸಿ.ಎನ್., ದಿವ್ಯ ವಿ.ಎಸ್., ಮೀನ ಎನ್.ಎಸ್., ಟೀನಾ ಮಾಚಯ್ಯ. ಎಸ್., ಪವಿತಾ. ಸಿ.ಬಿ., ಅಂಜಲಿ ಕೆ.ಎಸ್., ವೀಣಾ ಉತ್ತಪ್ಪ, ಸೀಮಾ ಅಯ್ಯಪ್ಪ ಇದ್ದರು. ನಾಪೋಕ್ಲು: ನಮ್ಮ ಆಚಾರ, ವಿಚಾರ, ಸಂಸ್ಕೃತಿ ಉಳಿದರೆ ಮಾತ್ರ ಜನಾಂಗ ಉಳಿಯಲು ಸಾಧ್ಯ ಎಂದು ಮಡಿಕೇರಿ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಹೇಳಿದರು. ನಾಪೋಕ್ಲು ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ವತಿಯಿಂದ ಕೊಡವ ಸಮಾಜದ ಸಭಾಂಗಣದಲ್ಲಿ ಮಂಗಳವಾರ ಕಕ್ಕಡ ೧೮ ರ ಅಂಗವಾಗಿ ಏರ್ಪಡಿಸಲಾಗಿದ್ದ ತೀನಿ ನಮ್ಮೆ ಪೈಪೋಟಿ ಮತ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನಾಂಗದ ಸಂಸ್ಕೃತಿ ಸಂಪ್ರದಾಯವನ್ನು ಮಕ್ಕಳಿಗೆ ತಿಳಿಸಿ ಮನದಟ್ಟು ಮಾಡುವ ಕೆಲಸ ನಮ್ಮ ನಮ್ಮ ಮನೆಯಿಂದಲೇ ಆಗಬೇಕು. ಆಚಾರ ವಿಚಾರಗಳನ್ನು ಹಿರಿಯರು ಮಕ್ಕಳಿಗೆ ಹೇಳಿಕೊಟ್ಟರೆ ಮಾತ್ರ ಸಂಸ್ಕೃತಿ ಬೆಳೆಯಲು ಸಾಧ್ಯ ಎಂದರು. ಸ್ವಉದ್ಯೋಗಗಳಲ್ಲಿ ಕೀಳರಿಮೆ ಬೇಡ. ಸಿಕ್ಕಿದ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ ಹಾಗೂ ಸರಕಾರದ ವಿವಿಧ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಉನ್ನತಿಯನ್ನು ಕಾಣಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ನಮ್ಮ ಯುವ ಜನಾಂಗ ಡ್ರಗ್ಸ್ ಹಾಗೂ ಮಾದಕ ವಸ್ತುಗಳ ವ್ಯಸನಿಗಳಾಗಿ ಪರಿವರ್ತನೆಗೊಂಡು ಸಮಾಜಘಾತುಕ ಶಕ್ತಿಗಳಾಗಿ ದಾರಿ ತಪ್ಪುತ್ತಿದ್ದಾರೆ. ಇದರಿಂದ ಸಮಾಜ ತಲೆತಗ್ಗಿಸುವ ಕೆಲಸವಾಗುತ್ತಿರುವುದು ದುರದೃಷ್ಟಕರ ಎಂದರು.

ತೀನಿ ಪ್ರದರ್ಶನವನ್ನು ಆರೋಗ್ಯ ಇಲಾಖೆಯ ಮಾಜಿ ಮುಖ್ಯ ಅಧಿಕಾರಿ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಉದ್ಘಾಟಿಸಿ ಮಾತನಾಡಿದರು. ಸಮಾಜ ಸೇವಕಿ ಅಪ್ಪುಮಣಿಯಂಡ ಡೇಸಿ ಸೋಮಣ್ಣ ಮಾತನಾಡಿ, ಅನಿಸಿಕೆ ವ್ಯಕ್ತಪಡಿಸಿದರು. ಸಂಸಾರ ಬೆಳೆಸುವಲ್ಲಿ ತಾಯಿಯಂದಿರ ಪಾತ್ರ ಎಂಬ ವಿಷಯದ ಕುರಿತು ಕುಂಡ್ಯೋಳAಡ ಕವಿತಾ ಮುತ್ತಣ್ಣ ವಿಚಾರ ಮಂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಮೂವೇರ ರೇಖಾ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೇಟಿರ ಅಜಿತ್, ನಾಣಯ್ಯ ಚೋದ್ಚೋದ್ಯ (ರಸಪ್ರಶ್ನೆ) ವಾಲಗ ತಾಟ್ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಬಾಳೆಯಡ ದಿವ್ಯ ಮಂದಪ್ಪ ಅವರನ್ನು ಪರಿಷತ್ತು ವತಿಯಿಂದ ಸನ್ಮಾನಿಸಲಾಯಿತು. ಕೊಡವ ತೀನಿ ಪೈಪೋಟಿಯಲ್ಲಿ ೭೦ ಜನರು ಭಾಗವಹಿಸಿದ್ದ ೩೦ ವಿವಿಧ ತಿಂಡಿ ತಿನಿಸುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ತೀರ್ಪುಗಾರರಾಗಿ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಕನ್ನಂಡ ಕವಿತ, ಬೊಳ್ಳಜ್ಜೀರ ಯಮುನ ಅಯ್ಯಪ್ಪ, ಪೊನ್ನಚೆಟ್ಟೀರ ಡಾಟಿ ಅಕ್ಕಮ್ಮ, ಮುಕ್ಕಾಟಿರ ಅಂಜು ಸುಬ್ರಮಣಿ ಪಾಲ್ಗೊಂಡಿದ್ದರು. ಪೊಮ್ಮಕ್ಕಡ ಪರಿಷತ್ ನಿರ್ದೇಶಕಿ ಬಿದ್ದಂಡ ಉಷಾ ದೇವಮ್ಮ ಸ್ವಾಗತಿಸಿದರು. ಬಾಳೆಯಡ ದಿವ್ಯಾ ಮಂದಪ್ಪ ಹಾಗೂ ಕಲಿಯಂಡ ಬೀನಾ ನವೀನ್ ಕಾರ್ಯಕ್ರಮ ನಿರೂಪಿಸಿ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ವಂದಿಸಿದರು.

ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿಜೇತರರಿಗೆ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು. ಮಡಿಕೇರಿಯ ಮುಳಿಯ ಜುವೆಲ್ಲರ್ಸ್, ವೆಲ್ನೆಸ್ ಆಯುರ್ವೇದ ಮತ್ತು ಮಹೇಶ್ ಎಂಟಪ್ರೆöÊಸಸ್ ವತಿಯಿಂದ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.