ಚೆಯ್ಯಂಡಾಣೆ, ಆ. ೪: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ೨೦೨೧-೨೨ ಸಾಲಿನ ಲೆಕ್ಕಪರಿಶೋಧನಾ ಗ್ರಾಮ ಸಭೆಯು ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.

ನೋಡಲ್ ಅಧಿಕಾರಿ ಬಾಲಕೃಷ್ಣ ರೈ ಮಾತನಾಡಿ, ನರೇಗಾ ಯೋಜನೆ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ೧೪/೧೫ ಹಣಕಾಸಿ ನಡಿಯಲ್ಲಿ ನಡೆಸಿದ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿದ್ದು ಶ್ಲಾಘನೆ ವ್ಯಕ್ತಪಡಿಸಿದರು. ಚೇಲವಾರ ಗ್ರಾಮಸ್ಥರ ಪರವಾಗಿ ಪಿ.ಪಿ.ಪ್ರತಾಪ್ ಮಾತನಾಡಿ, ವಾಪ್ತಿಯಲ್ಲಿ ನಡೆಸಿದ ಕಾಮಗಾರಿಗಳ ಬಗ್ಗೆ ಮಾಹಿತಿ ಕೋರಿದಾಗ ಅಧಿಕಾರಿಗಳು ಅದಕ್ಕೆ ಸಮಾಜಾಯಿಷಿಕೆ ನೀಡಿದರು. ಅರಪಟ್ಟು ಹಾಗೂ ಕರಡ ಗ್ರಾಮದಲ್ಲಿ ಅಳವಡಿಸಿದ ಸೋಲಾರ್ ಬೀದಿ ದೀಪ ಉರಿಯುತ್ತಿಲ್ಲ ಎಂಬ ದೂರಿಗೆ ಕೂಡಲೇ ಅದನ್ನು ಸರಿಪಡಿಸ ಲಾಗುವುದೆಂದರು. ಗ್ರಾಮ ಪಂಚಾಯಿತಿ ಸದಸ್ಯ ಸುಬೈರ್ ಮಾತನಾಡಿ, ಅರಪಟ್ಟು ಗ್ರಾಮದ ಎಂ. ಮರಿಯಾ ಖಾದರ್ ಬಚ್ಚಲು ಮನೆಯ ನೀರಿಗೆ ಇಂಗು ಗುಂಡಿ ನಿರ್ಮಾಣಕ್ಕೆ ಪೂರ್ತಿ ಹಣ ಬಾರದ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದಾಗ ಅದಕ್ಕೆ ಅಧಿಕಾರಿಗಳು ಉತ್ತರಿಸಿ ಬ್ಯಾಂಕ್ ವಾಹಿವಾಟಿನಲ್ಲಿ ತಕರಾರುಗಳು ಕಂಡು ಬಂದಿದ್ದು ಅದನ್ನು ಪರಿಶೀಲಿಸಿ ಕೂಡಲೇ ಅರ್ಹ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುದೆಂದರು.

ತೋಟಗಾರಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಯೋಗಿತಾ ಮಾಹಿತಿ ನೀಡಿದರು. ಕೃಷಿ ಇಲಾಖೆಯ ಸೌಲಭ್ಯಗಳ ಕುರಿತು ಯಾಶಿಕಾ ಮಾಹಿತಿ ನೀಡಿ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು. ೨೦೨೧-೨೨ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ- ಗ್ರಾಮೀಣ ವಸತಿ ಯೋಜನೆ ಅಡಿಯಲ್ಲಿ ಒಟ್ಟು ೨೫ ದೊರೆಯುವ ಸೌಲಭ್ಯಗಳ ಕುರಿತು ಯೋಗಿತಾ ಮಾಹಿತಿ ನೀಡಿದರು. ಕೃಷಿ ಇಲಾಖೆಯ ಸೌಲಭ್ಯಗಳ ಕುರಿತು ಯಾಶಿಕಾ ಮಾಹಿತಿ ನೀಡಿ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು. ೨೦೨೧-೨೨ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ- ಗ್ರಾಮೀಣ ವಸತಿ ಯೋಜನೆ ಅಡಿಯಲ್ಲಿ ಒಟ್ಟು ೨೫ ಫಲಾನುಭವಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರವನ್ನು ಗ್ರಾ.ಪಂ. ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಫಲಾನು ಭವಿಗಳಿಗೆ ವಿತರಿಸಿದರು. ಈ ಸಂದರ್ಭ ಗ್ರಾಮ ಸಂಪನ್ಮೂಲ ವ್ಯಕ್ತಿ ರೋಹಿತ್, ತಾಂತ್ರಿಕ ಸಹಾಯಕಿ ನಲಾನಿ, ತಾಲೂಕು ಐಇಸಿ ಸಂಯೋಜಕಿ ಅಕ್ಷಿತಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಸ್ವಾಗತ ಹಾಗೂ ವಂದನೆಯನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಿದ್ದಪ್ಪ ನೆರವೇರಿಸಿದರು.