ಸೋಮವಾರಪೇಟೆ, ಆ. ೪: ಸೋಮವಾರಪೇಟೆ ತಹಶೀಲ್ದಾರರಾಗಿ ಎಸ್.ಎನ್ ನರಗುಂದ ನೇಮಕಗೊಂಡಿದ್ದಾರೆ.
ತಹಶೀಲ್ದಾರ್ ಗೋವಿಂದರಾಜು ನಿವೃತ್ತಿ ಹೊಂದುತ್ತಿರುವ ಹಿನ್ನೆಲೆ ನೂತನ ತಹಶೀಲ್ದಾರ್ ನೇಮಕಗೊಂಡಿದ್ದಾರೆ. ಆಗಸ್ಟ್ ೩೧ ರಂದು ಗೋವಿಂದರಾಜು ನಿವೃತ್ತಿ ಹೊಂದಲಿದ್ದಾರೆ. ಈ ಸ್ಥಾನಕ್ಕೆ ಎಸ್.ಎನ್ ನರಗುಂದ ಅವರನ್ನು ನೇಮಿಸಲಾಗಿದೆ.