ಮಡಿಕೇರಿ, ಆ. ೪: ವಿದ್ಯುತ್ ಪೂರೈಕೆ ವಿಚಾರಕ್ಕೆ ಸಂಬAಧಿಸಿದAತೆ ಕೆ.ಇ.ಆರ್.ಸಿ (ಕರ್ನಾಟಕ ಎಲೆಕ್ಟಿçಸಿಟಿ ರೆಗ್ಯುಲೇಷನ್ ಕಮಿಷನ್) ನಿಬಂಧನೆಯ ವಿರುದ್ಧವಾಗಿ ಗ್ರಾಹಕರಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಹೆಚ್ಚುವರಿಯಾಗಿ ಅಭಿವೃದ್ಧಿ ಶುಲ್ಕ ಎಂದು ಹಣ ಸಂಗ್ರಹಿಸಿದ್ದ ಪ್ರಕರಣದ ವಿರುದ್ಧ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ಪ್ರಕಟಿಸಿದೆ. ಈ ಕುರಿತಾಗಿ ಕೆಲವು ಗ್ರಾಹಕರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಆಯೋಗ ಈ ಬಗ್ಗೆ ಸೆಸ್ಕ್ಗೆ ದಂಡ ವಿಧಿಸಿ ತೀರ್ಪು ನೀಡಿದೆ.ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿ ಮಾಡದ ಲೇಔಟ್‌ಗಳಿಗೆ ಸಂಬAಧಿಸಿದAತೆ ಮಾತ್ರ ಪ್ರತಿ ಕಿಲೋವ್ಯಾಟ್‌ಗೆ ಇಂತಿಷ್ಟು ಅಭಿವೃದ್ಧಿ ಶುಲ್ಕ ಪಡೆಯುವ ನಿಯಮವಿದೆ. ಇದು ನಗರಪ್ರದೇಶಕ್ಕೆ ಇಂತಿಷ್ಟು ಹಾಗೂ ಗ್ರಾಮೀಣಭಾಗಕ್ಕೆ ಇಂತಿಷ್ಟು ಎಂದು ನಿಗದಿಯಾಗಿದೆ. ಆದರೆ ಈ ಅಭಿವೃದ್ಧಿ ಶುಲ್ಕವನ್ನು ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಯಾಗದ ಲೇಔಟ್‌ಗಳ ಬದಲಾಗಿ ಸೆಸ್ಕ್ನಿಂದ ಇನ್ನಿತರ ಎಲ್ಲಾ ಮಾದರಿಯ ವಿದ್ಯುತ್ ಸಂಪರ್ಕಕ್ಕೂ ಸಂಗ್ರಹಿಸಲಾಗುತ್ತಿದ್ದ ಬಗ್ಗೆ ಗ್ರಾಹಕರ ಆಯೋಗದಲ್ಲಿ ಪ್ರಶ್ನಿಸಲಾಗಿತ್ತು.
ಮಡಿಕೇರಿಯ ಎಂ.ಕೆ. ಅರುಣ್‌ಕುಮಾರ್, ಎಫ್. ಜೋಸೆಫ್, ಹೇಮನಾಥ್ ಎಸ್.ಇ. ಹಾಗೂ ಇತರ ಕೆಲವು ಗ್ರಾಹಕರು ಅಭಿವೃದ್ಧಿ ಶುಲ್ಕ ಸಂಗ್ರಹ ಕೆ.ಇ.ಆರ್.ಸಿ ನಿಯಮದ ವಿರುದ್ಧವಾಗಿದೆ ಎಂದು ಆಕ್ಷೇಪಿಸಿ ವಕೀಲರಾದ ಯಾಲದಾಳು ಮನೋಜ್ ಬೋಪಯ್ಯ ಅವರ ಮೂಲಕ ಇದನ್ನು ಪ್ರಶ್ನಿಸಿದ್ದರು. ಈ ವಿಚಾರ ಒಂದೆಡೆಯಾದರೆ ಈ ಬಗ್ಗೆ ಕೊಡಗು ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘವೂ ಈ ಕ್ರಮದ ವಿರುದ್ಧವಾಗಿ ಅವಿರತ ಶ್ರಮ ವಹಿಸಿತ್ತು.
ಪ್ರಕರಣದ ವಿಚಾರಣೆ ಸುದೀರ್ಘವಾಗಿ ಸುಮಾರು ಎರಡು ವರ್ಷಗಳ ಕಾಲ ನಡೆದಿದ್ದು, ಇದೀಗ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅರ್ಜಿದಾರರ ಪರವಾಗಿ ತೀರ್ಪು ನೀಡಿದ್ದು, ಸೆಸ್ಕ್ಗೆ ದಂಡವನ್ನು ವಿಧಿಸಿ ಆದೇಶ ನೀಡಿದೆ. ಆಯೋಗದ ಅಧ್ಯಕ್ಷರಾದ ಸಿ.ರೇಣುಕಾಂಬ (ಪ್ರಭಾರ) ಅವರು ಈ ತೀರ್ಪು ಪ್ರಕಟಿಸಿದ್ದಾರೆ. ಕೆಲವು ಗ್ರಾಹಕರು ಮಾತ್ರ ಇದನ್ನು ಪ್ರಶ್ನಿಸಿದ್ದಾರೆ. ಆದರೆ ಈ ರೀತಿ ಯಾಗಿ ಹೆಚ್ಚುವರಿ ಹಣ ನೀಡಿದ ಗ್ರಾಹಕರು ಜಿಲ್ಲೆಯಲ್ಲಿ ಹಲವಷ್ಟು ಮಂದಿ ಇದ್ದಾರೆ ಎನ್ನಲಾಗಿದೆ.
(ಮೊದಲ ಪುಟದಿಂದ) ಇದು ಕೊಡಗು ಮಾತ್ರವಲ್ಲದೆ ಸೆಸ್ಕ್ ವ್ಯಾಪ್ತಿಯ ಇನ್ನಿತರ ವಿಭಾಗಗಳಲ್ಲಿಯೂ ಅನಧಿಕೃತ ವಸೂಲಿಯ ಆರೋಪವಿದೆ.
ಆಕ್ಷೇಪ ಏನಿತ್ತು?
ಸೆಸ್ಕ್ ವ್ಯಾಪ್ತಿಯಲ್ಲಿ ಬರುವ ಮನೆ, ವಾಣಿಜ್ಯ, ಕೈಗಾರಿಕೆ ಹಾಗೂ ಇನ್ನಿತರ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಬಡಾವಣೆಗಳಿಗೆ ಅಳವಡಿಸುವ ಅಭಿವೃದ್ಧಿ ಶುಲ್ಕವನ್ನೇ ಅಧಿಕಾರಿಗಳು ಅವೈಜ್ಞಾನಿಕವಾಗಿ ಬಡಾವಣೆ ರಹಿತರಿಗೂ ವಿಧಿಸುತ್ತಿದ್ದರು. ಇದನ್ನು ಪ್ರಶ್ನಿಸಿ ಹಲವು ಬಾರಿ ವಿದ್ಯುತ್ ಗ್ರಾಹಕರ ಹೋರಾಟ ಸಮಿತಿ ಸೆಸ್ಕ್ ಕಾರ್ಯಪಾಲಕ ಅಭಿಯಂತರರು, ವ್ಯವಸ್ಥಾಪಕ ನಿರ್ದೇಶಕರು, ಅಧೀಕ್ಷಕ ಅಭಿಯಂತರರು ಮುಂತಾದವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ದೂರು ಸಲ್ಲಿಸಿ, ಅಭಿವೃದ್ಧಿ ಶುಲ್ಕ ನಿಗದಿಯಲ್ಲಿನ ಗೊಂದಲವನ್ನು ನಿವಾರಿಸುವಂತೆ ಕೋರಿತ್ತು. ಅಲ್ಲದೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೂ ದೂರು ನೀಡಲಾಗಿತ್ತು.
ಸಾಮಾನ್ಯವಾಗಿ ಗ್ರಾಹಕರು ವಿದ್ಯುತ್ ಸಂಪರ್ಕ ಪಡೆಯುವ ಸಂದರ್ಭ ೩೦ ಮೀಟರ್ ಅಂತರದಲ್ಲಿ ೩ ಕೆ.ವಿ.ವರೆಗಿನ ಮಾರ್ಗಕ್ಕೆ ಯಾವುದೇ ಅಭಿವೃದ್ಧಿ ಶುಲ್ಕ ಪಾವತಿಸಬೇಕಾಗಿಲ್ಲ. ಆ ನಂತರದ ಕೆ.ವಿ.ಗಳಿಗೆ ತಲಾ ೬೫೦ ರೂ.ಗಳನ್ನು ಪಾವತಿಸಬೇಕಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಪ್ರತಿ ಕೆ.ವಿ.ಗೆ ೬೫೦೦ ರೂ.ಗಳಷ್ಟು ಅಭಿವೃದ್ಧಿ ಶುಲ್ಕವನ್ನು ಪಡೆಯುತ್ತಿದ್ದು, ಇದು ಅವೈಜ್ಞಾನಿಕವಾಗಿದೆ ಎಂದು ವಕೀಲ ಮನೋಜ್ ಬೋಪಯ್ಯ ಪ್ರತಿಪಾದಿಸಿದ್ದರು.
ತೀರ್ಪಿನಲ್ಲಿ ಏನಿದೆ
ಎಂ.ಕೆ. ಅರುಣ್‌ಕುಮಾರ್ ಅವರ ಪ್ರಕರಣದಲ್ಲಿ ವಿದ್ಯುತ್ ಸಂಪರ್ಕಕ್ಕೆ ಹೆಚ್ಚಿಗೆ ಪಡೆದ ಮೊತ್ತ ರೂ. ೧೨ ಸಾವಿರವನ್ನು ಹಿಂತಿರುಗಿಸತಕ್ಕದ್ದು, ತಪ್ಪಿದಲ್ಲಿ ಶೇ. ೬ರ ಬಡ್ಡಿ ದರದಂತೆ ಆದೇಶದ ದಿನಾಂಕದಿAದ ೪೫ ದಿನದ ಒಳಗೆ ಪಾವತಿಸಬೇಕು. ಎಫ್. ಜೋಸೆಫ್ ಅವರ ಪ್ರಕರಣದಲ್ಲಿ ವಿದ್ಯುತ್ ಸಂಪರ್ಕಕ್ಕೆ ಹೆಚ್ಚಿಗೆ ಪಡೆದ ಮೊತ್ತ ರೂ. ೧೬,೬೫೦ಗಳನ್ನು ಹಿಂಗಿರುಗಿಸತಕ್ಕದ್ದು, ತಪ್ಪಿದಲ್ಲಿ ಶೇ. ೬ ಬಡ್ಡಿಯಂತೆ ಆದೇಶದ ದಿನಾಂಕದಿAದ ೪೫ ದಿನದ ಒಳಗೆ ಪಾವತಿಸಬೇಕು.
ಎಸ್.ಈ. ಹೇಮನಾಥ್ ಅವರ ಪ್ರಕರಣದಲ್ಲಿ ವಿದ್ಯುತ್ ಸಂಪರ್ಕಕ್ಕೆ ಹೆಚ್ಚಿಗೆ ಪಡೆದ ಮೊತ್ತ ರೂ. ೨೪ ಸಾವಿರನ್ನು ಹಿಂತಿರುಗಿಸತಕ್ಕದ್ದು, ತಪ್ಪಿದಲ್ಲಿ ಶೇ. ೬ ಬಡ್ಡಿಯಂತೆ ಆದೇಶದ ದಿನಾಂಕದ ೪೫ ದಿನದ ಒಳಗೆ ಪಾವತಿಸಬೇಕು ಹಾಗೂ ಮತ್ತೊಂದು ಪ್ರಕರಣದಲ್ಲಿ ವಿದ್ಯುತ್ ಸಂಪರ್ಕಕ್ಕೆ ಹೆಚ್ಚಿಗೆ ಪಡೆದ ಮೊತ್ತ ರೂ.೧೫,೩೫೦ಗಳನ್ನು ಹಿಂತಿರುಗಿಸತಕ್ಕದ್ದು, ತಪ್ಪಿದಲ್ಲಿ ಶೇ. ೬ ಬಡ್ಡಿಯಂತೆ ಆದೇಶದ ದಿನಾಂಕದ ೪೫ ದಿನದ ಒಳಗೆ ಪಾವತಿಸಬೇಕು.
ಫರ‍್ಯಾದುದಾರರುಗಳಿಗೆ ಎದುರುದಾರರು ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ಪ್ರತಿ ಪ್ರಕರಣಗಳಿಗೆ ರೂ. ೧೦ ಸಾವಿರವನ್ನು ಪರಿಹಾರವಾಗಿ ನೀಡತಕ್ಕದ್ದು, ತಪ್ಪಿದಲ್ಲಿ ಶೇ. ೬ ಬಡ್ಡಿಯಂತೆ ಆದೇಶದ ದಿನಾಂಕದಿAದ ೪೫ ದಿನದ ಒಳಗೆ ಪಾವತಿಸಬೇಕು ಎಂದು ಆದೇಶಿಸಲಾಗಿದೆ.
ಈ ತೀರ್ಪನ್ನು ಸ್ವಾಗತಿಸಿರುವ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸತೀಶ್ ಪೂಣಚ್ಚ, ಪ್ರಧಾನ ಕಾರ್ಯದರ್ಶಿ ಪಿ.ಎನ್. ರವಿಚಂದ್ರ ಹಾಗೂ ಖಜಾಂಚಿ ಮಹಮ್ಮದ್ ಷರೀಫ್ ಚೆಸ್ಕಾಂ ಅಧಿಕಾರಿಗಳು ನಿಯಮ ಉಲ್ಲಂಘಿಸುವುದರಿAದ ಗ್ರಾಹಕರಿಗೆ ಹೊರೆಯಾಗುತ್ತಿತ್ತು. ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸಬಾರದು ಎಂದು ತಿಳಿಸಿದ್ದಾರೆ.