ಕರಿಕೆ, ಆ. ೪: ಜಿಲ್ಲೆಯ ಅಂತರರಾಜ್ಯ ಸಂಪರ್ಕ ರಸ್ತೆಯಲ್ಲಿ ಒಂದಾದÀ ಭಾಗಮಂಡಲ- ಕರಿಕೆ ಪಾಣತ್ತೂರು ಅಂರ್ರಾಜ್ಯ ಹೆದ್ದಾರಿಯಲ್ಲಿನ ಕೊಟ್ಟೆಮಲೆ ಮತ್ತು ಬಾಚಿಮಲೆ ಬಳಿ ರಸ್ತೆಗೆ ಗುಡ್ಡ ಹಾಗೂ ಮರಗಳು ಬಿದ್ದ ಪರಿಣಾಮ ಕಳೆದ ತಡರಾತ್ರಿಯಿಂದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ. ಭಾಗಮಂಡಲದಿAದ ಎಂಟು ಕಿ.ಮೀ. ದೂರದ ಕೊಟ್ಟೆಮಲೆಯಲ್ಲಿ ರಸ್ತೆಗೆ ಬೃಹತ್ ಪ್ರಮಾಣದಲ್ಲಿ ಬರೆ ಕುಸಿದಿದ್ದು, ಹದಿನೈದು ಕಿ.ಮೀ. ದೂರದ ಬಾಚಿಮಲೆ ಎಂಬಲ್ಲಿ ಮೂರು ನಾಲ್ಕಕ್ಕಿಂತ ಅಧಿಕ ಕಡೆಯಲ್ಲಿ ದೊಡ್ಡ ಪ್ರಮಾಣದ ಬರೆಕುಸಿತವಾದ ಪರಿಣಾಮ ಮಣ್ಣು, ಬಂಡೆಕಲ್ಲು ಹಾಗೂ ದೊಡ್ಡ ಮರಗಳು ಕೊಚ್ಚಿಕೊಂಡು ಬಂದಿದ್ದು, ಕಳೆದ ತಡರಾತ್ರಿಯಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.