ಸುಂಟಿಕೊಪ್ಪ, ಆ. ೨: ಧರ್ಮದ ಹೆಸರಿನಲ್ಲಿ ಹಿಂದೂಗಳ ಮೇಲೆ ಹಲ್ಲೆ ಮತ್ತು ಹತ್ಯೆಗಳು ನಡೆಯುತ್ತಿದ್ದು ಪರಿಸ್ಥಿತಿ ಕೈ ಮೀರುವ ಮುನ್ನ ನಾವೆಲ್ಲಾರೂ ಸಂಘಟಿತ ರಾಗಬೇಕೆಂದು ಭಜರಂಗದಳದ ಜಿಲ್ಲಾ ಸಂಚಾಲಕ ಅನಿಶ್ ಕರೆ ನೀಡಿದರು.
ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಕೆಲವರು ಹಿಂದೂ ಪರ ಸಂಘಟನೆಗಳ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದು ನಮ್ಮ ಸಹನೆ ಮೀರುವ ಮುನ್ನ ಸಂಬAಧಿಸಿದವರು ಎಚ್ಚೆತ್ತುಕೊಳ್ಳಬೇಕು. ಧರ್ಮದ ವಿರುದ್ಧ ಅವಹೇಳನ ಇನ್ನಿತರ ಅನ್ಯಾಯ ಹಿಂದೂಗಳ ಮೇಲೆ ಹೆಚ್ಚಾಗಿದೆ ಎಂದರು.
ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಬಿ.ಕೆ. ಮೋಹನ್ ಸರಕಾರಗಳು ಒಲೈಕೆ ರಾಜಕಾರಣವನ್ನು ಮಾಡುತ್ತಿದ್ದು, ನಮ್ಮಗೆ ಧರ್ಮ ಕಾಯುವ ರಕ್ಷಣೆ ನೀಡುವ ಸರಕಾರ ಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾ ನಿರತರು ಪ್ರವೀಣ್ ನೆಟ್ಟಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೃತರ ಆತ್ಮಕ್ಕೆ ಶಾಂತಿಕೋರಿ ಮೌನಪ್ರಾರ್ಥನೆ ಸಲ್ಲಿಸಿ, ಮಾನವ ಸರಪಳಿ ನಿರ್ಮಿಸಿ ಘೋಷಣೆಗಳನ್ನು ಕೂಗಿದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಮುಖ್ ಅರುಣ್ ಗುಡ್ಡೆಹೊಸೂರು, ತಾಲೂಕು ಗೋರಕ್ಷಾ ಪ್ರಮುಖ್ ಶಶಿಕುಮಾರ್, ಆರ್. ರಮೇಶ್ ಪಿಳ್ಳೆ, ವಾಸುದೇವ್, ಈಶ್ವರ ಸೇರಿದಂತೆ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.