ವರದಿ: ಚಂದ್ರಮೋಹನ್

ಕುಶಾಲನಗರ, ಆ. ೨: ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿ ಅಣೆಕಟ್ಟೆಯಲ್ಲಿ ಮಳೆಗಾಲ ಸಂದರ್ಭ ನೀರಿನ ಸಂಗ್ರಹ ಹಾಗೂ ನೀರಿನ ಬಿಡುಗಡೆಯನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಸಂಬAಧ ರಾಜ್ಯ ಉಚ್ಚ ನ್ಯಾಯಾಲಯ ಸರ್ಕಾರಕ್ಕೆ ನೋಟೀಸ್ ನೀಡಿದ್ದರೂ ಅದನ್ನು ಪಾಲಿಸುವಲ್ಲಿ ಸಂಬAಧಿಸಿದ ಇಲಾಖೆಗಳು ವಿಫಲಗೊಂಡಿರುವ ಬಗ್ಗೆ ನದಿ ಪಾತ್ರದ ಜನತೆ ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ಜಲಾನಯನ ಮತ್ತು ನದಿ ಪಾತ್ರದ ನಾಗರಿಕರು ಮಳೆಗಾಲದ ಅವಧಿಯಲ್ಲಿ ನಿತ್ಯ ಪರದಾಡುವುದರೊಂದಿಗೆ ಜನಜೀವನ ಏರುಪೇರಾಗುತ್ತಿರುವ ಪರಿಸ್ಥಿತಿ ಮುಂದುವರೆದಿದೆ.

ಹಾರAಗಿ ಜಲಾನಯನ ಪ್ರದೇಶದ ಜನರ ಪರವಾಗಿ ಹಾರಂಗಿ ಹಿನ್ನೀರಿನ ವ್ಯಾಪ್ತಿಯ ಪ್ರದೇಶದ ಬೆಳೆಗಾರರು ರಾಜ್ಯ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕÀ ರಿಟ್ ಅರ್ಜಿ ಸಲ್ಲಿಸಿದ್ದು, ಮಳೆಗಾಲದ ಸಂದರ್ಭ ಅಣೆಕಟ್ಟಿನಲ್ಲಿ ಅವೈಜ್ಞಾನಿಕವಾಗಿ ನೀರಿನ ಸಂಗ್ರಹ ಹಾಗೂ ನೀರಿನ ಬಿಡುಗಡೆ ಕಾರ್ಯ ನಡೆಯುತ್ತಿದೆ. ಇದರಿಂದ ಕೊಡಗು ಜಿಲ್ಲೆಯಲ್ಲಿ ಮಳೆ ಅಧಿಕಗೊಂಡ ಸಂದರ್ಭ ಹಾರಂಗಿ ಮತ್ತು ಕಾವೇರಿ ನದಿ ಪಾತ್ರದ ವ್ಯಾಪ್ತಿಯಲ್ಲಿ ಪ್ರವಾಹ ಭೀತಿ ಎದುರಾಗುವುದರೊಂದಿಗೆೆ ಹೆಚ್ಚಿನ ಪ್ರಮಾಣದ ಅನಾಹುತಗಳು ಆಗುತ್ತಿವೆ. ೨೦೧೮ರಲ್ಲಿ ಹಾರಂಗಿ ಜಲಾಶಯದಿಂದ ಏಕಾಏಕಿ ಭಾರಿ ಪ್ರಮಾಣದ ನೀರು ನದಿಗೆ ಹರಿಸಿದ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದ ಸಾವಿರಕ್ಕೂ ಅಧಿಕ ಮನೆಗಳು ಹಲವು ದಿನಗಳ ಕಾಲ ಜಲಾವೃತಗೊಂಡಿದ್ದವು.

ಈ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಲ್ಲಿ ನೀರನ್ನು ಸಂಗ್ರಹಿಸುವ ಮತ್ತು ಬಿಡುಗಡೆ ಮಾಡುವ ಸಂದರ್ಭ ವೈಜ್ಞಾನಿಕವಾಗಿ ಕಾರ್ಯನಿರ್ವಹಿಸು ವಂತೆ ಸಂಬAಧಿಸಿದ ಇಲಾಖೆ ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ಉಚ್ಚ ನ್ಯಾಯಾಲಯಕ್ಕೆ ಜುಲೈ ೨೦೨೧ರಲ್ಲಿ ಮನವಿ ಮಾಡಿದ್ದರು. ಮೂಲತಃ ಕೊಡಗು ಜಿಲ್ಲೆಯ ಭಾಗಮಂಡಲ ನಿವಾಸಿ ಹೈಕೋರ್ಟ್ ವಕೀಲರಾದ ಮೊಟ್ಟನ ರವಿಕುಮಾರ್ ಅವರ ಮೂಲಕ ಈ ಪ್ರಕರಣದ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಈ ಸಂಬAಧ ಕಳೆದ ಜುಲೈನಲ್ಲಿ ಅರ್ಜಿಯ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಮುಖ್ಯ ನ್ಯಾಯಾಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ಕೇಂದ್ರ ಜಲಾನಯನ ಸಚಿವಾಲಯ, ರಾಜ್ಯ ಸರ್ಕಾರದ ಜಲ ಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮ ಸೇರಿದಂತೆ ೧೩ ಇಲಾಖೆಗಳಿಗೆ ನೋಟೀಸ್ ಜಾರಿ ಮಾಡಿದ್ದು, ಅರ್ಜಿದಾರರ ಕೋರಿಕೆಯಂತೆ ಪ್ರತಿ ವರ್ಷ ಮಳೆಗಾಲದ ಅವಧಿಯಲ್ಲಿ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಹಾರಂಗಿ ಅಣೆಕಟ್ಟಿನಲ್ಲಿ ಶೇ.೫೦ ರಷ್ಟು ಪ್ರಮಾಣದ ನೀರನ್ನು ಮಾತ್ರ ಸಂಗ್ರಹಿಸಿ ಇಟ್ಟುಕೊಳ್ಳುವ ಮೂಲಕ ಪ್ರವಾಹದಂತಹ ಅನಾಹುತಗಳು ಸಂಭವಿಸುವುದನ್ನು ತಪ್ಪಿಸಲುಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಭಿಪ್ರಾಯ ತಿಳಿಸುವಂತೆ ಸೂಚಿಸಿತ್ತು. ಆದರೆ, ಸಂಬAಧಿಸಿದ ಇಲಾಖೆಗಳು ಹೈ ಕೋರ್ಟ್ ಸೂಚನೆಯನ್ನು ಪಾಲಿಸುವಲ್ಲಿ ವಿಫಲವಾಗಿದ್ದು, ಹಾರಂಗಿ ಮತ್ತು ಕಾವೇರಿ ನದಿ ಪಾತ್ರದ ಜನತೆ ಮಾತ್ರ ಮಳೆಗಾಲ ಸಂದರ್ಭ ಆತಂಕದಲ್ಲಿ ದಿನದೂಡುವ ಪರಿಸ್ಥಿತಿ ಮುಂದುವರೆದಿದೆ. ಈ ಬಗ್ಗೆ ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಅವರೊಂದಿಗೆ ‘ಶಕ್ತಿ’ ಸ್ಪಷ್ಟನೆ ಬಯಸಿದ ಸಂದರ್ಭ ತನಗೆ ಈ ಬಗ್ಗೆ ಮಾಹಿತಿ ಲಭ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದರು.

ಈ ಪ್ರಕರಣದ ಬಗ್ಗೆ ಇಲಾಖೆಗಳಿಂದ ಯಾವುದೇ ಅಭಿಪ್ರಾಯ ಇನ್ನೂ ಬಂದಿರುವುದಿಲ್ಲ ಎಂದು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಹೈಕೋರ್ಟ್ ವಕೀಲ ಮೊಟ್ಟನ ರವಿಕುಮಾರ್ ಹಾರಂಗಿ ಜಲಾಶಯದ ಹೂಳೆತ್ತುವ ಮತ್ತು ಅಭಿವೃದ್ಧಿ ಕಾಮಗಾರಿ ಸಂಬAಧ ಸರ್ಕಾರದ ೧೩೦ ಕೋಟಿ ರೂ. ಯೋಜನೆ ಅಂತಿಮ ರೂಪ ಪಡೆದಿಲ್ಲ. ಈ ಬಗ್ಗೆ ಕೂಡ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಮೊಕ್ಕದ್ದಮೆ ದಾಖಲಾಗಿದ್ದು, ತಜ್ಞರ ವರದಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ಕಳೆದ ೩ ವರ್ಷಗಳ ಕಾಲ ಪ್ರವಾಹದಿಂದ ತತ್ತರಿಸಿದ ಕುಶಾಲನಗರ ಮತ್ತು ಸುತ್ತಮುತ್ತಲ ಜನರ ಸಂಕಷ್ಟ ಅರಿತ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಕಾವೇರಿ ನದಿ ನಿರ್ವಹಣೆ ಕಾಮಗಾರಿಯ ಬಗ್ಗೆ ಕಾಳಜಿ ವಹಿಸಿರುವುದು ಈ ಭಾಗದ ಜನರಲ್ಲಿ ಪ್ರವಾಹದ ಆತಂಕದಿAದ ತುಸು ನಿರಾಳತೆ ಕಾಣುವಂತೆ ಮಾಡಿದೆ. ಇದರೊಂದಿಗೆ ಹಾರಂಗಿ ಮತ್ತು ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗದAತೆ ಹಾರಂಗಿ ಅಣೆಕಟ್ಟಿನಿಂದ ನದಿಗೆ ಹಂತ ಹಂತವಾಗಿ ನೀರು ಬಿಡುವ ನಿಟ್ಟಿನಲ್ಲಿ ಅಣೆಕಟ್ಟು ಅಧಿಕಾರಿಗಳಿಗೆ ಸ್ಪಷ್ಟ ಸಲಹೆ ಸೂಚನೆ ನೀಡುವ ಮೂಲಕ ಕಳೆದ ೨ ವರ್ಷಗಳಿಂದ ನದಿ ಪಾತ್ರದ ಬಡಾವಣೆಗಳಿಗೆ ನೀರು ನುಗ್ಗದಂತೆ ನಿರಂತರ ಗಮನ ಹರಸುತ್ತಿರುವ ಕಾರಣ ನಾಗರಿಕರು ನಿಟ್ಟುಸಿರು ಬಿಡುವಂತಾಗಿದೆ.