ಕೂಡಿಗೆ, ಜು. ೩: ಹಾರಂಗಿ ಯೋಜನೆಯಡಿಯಲ್ಲಿ ೨೦೨೨ರ ಖಾರೀಫ್ ಬೆಳೆಗಳಿಗೆ ನೀರು ಹರಿಸುವ ಸಂಬAಧ ತಾ. ೨ ರಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಅಧ್ಯಕ್ಷತೆಯಲ್ಲಿ ಹಾಗೂ ಅಚ್ಚುಕಟ್ಟು ಪ್ರದೇಶದ ಶಾಸಕರು ಮತ್ತು ಅಧಿಕಾರಿ ಸದಸ್ಯರ ಉಪಸ್ಥಿತಿಯಲ್ಲಿ ಕೈಗೊಂಡ ತೀರ್ಮಾನದಂತೆ ತಾ. ೩ ರಿಂದ ೧೬ ರವರೆಗೆ (೧೫ ದಿನಗಳು) ಹಾರಂಗಿ ಬಲ ಮತ್ತು ಎಡದಂಡೆ ನಾಲೆಗಳು ಅಚ್ಚುಕಟ್ಟು ವ್ಯಾಪ್ತಿಯ ಕೆರೆ-ಕಟ್ಟೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ನೀರನ್ನು ಹರಿಸಲಾಗುವುದು. ತದನಂತರ ನೀರಿನ ಒಳಹರಿವನ್ನು ಗಮನಿಸಿಕೊಂಡು ಕಟ್ಟುಪದ್ಧತಿಯ ಆಧಾರದಲ್ಲಿ ಖಾರೀಫ್ ೨೦೨೨ರ ಬೆಳೆಗಳಿಗಾಗಿ ಮುಖ್ಯ ನಾಲೆಯಲ್ಲಿ ನೀರನ್ನು ಹರಿಸಲಾಗುವುದು ಮತ್ತು ಈ ಬಗ್ಗೆ ಮುಂದುವರೆದ ಪ್ರಕಟಣೆ ಹೊರಡಿಸಲಾಗುವುದು ಎಂದು ಹಾರಂಗಿ ಯೋಜನಾ ವೃತ್ತದ ಅಧೀಕ್ಷಕರು ತಿಳಿಸಿದ್ದಾರೆ.