ಸೋಮವಾರಪೇಟೆ, ಜು. ೨: ಮೊಗೇರ ಸೇವಾ ಸಮಾಜದ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಪ್ರಥಮ ವರ್ಷದ ಆಟಿದೊಂಜಿ ದಿನ ಮೊಗೇರ ಕೂಟ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಮಾಜೀ ಸಚಿವ ಬಿ.ಎ. ಜೀವಿಜಯ ಮಾತನಾಡಿ, ಸತತ ಪರಿಶ್ರಮ ಮತ್ತು ದುಡಿಮೆಯ ಮೂಲಕವೇ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವ ಮೊಗೇರ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕಾದುದು ಸರಕಾರದ ಕರ್ತವ್ಯ ಎಂದರು.

ಮೊಗೇರ ಸಮಾಜದ ಬಂಧುಗಳು ಸಂಘಟನೆ ಹಾಗೂ ಹೋರಾಟದ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಸಮಾಜದ ಪ್ರತಿಯೋರ್ವವೂ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿದರೆ ಮಾತ್ರ ಸಮುದಾಯದ ಬೆಳವಣಿಗೆ ಸಾಧ್ಯ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ಡಾ. ಮಂಥರ್‌ಗೌಡ ಮಾತನಾಡಿ, ದೇಶವು ಪ್ರಬುದ್ಧವಾದ ಸಂವಿಧಾನವನ್ನು ಹೊಂದಿದೆ. ಡಾ.ಬಿ.ಆರ್.ಅಂಬೇಡ್ಕರ್ ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಎಲ್ಲಾರು ಒಂದಾಗಿ ನಡೆಯುತ್ತಿದ್ದಾರೆ. ಆದರೆ ಕೆಲ ರಾಜಕಾರಣಿಗಳು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಸಂವಿಧಾನವನ್ನು ಬದಲಾಯಿಸುವ ಹೇಳಿಕೆ ಕೊಡುತ್ತಿದ್ದಾರೆ. ಬಡವರು, ಶ್ರಮಿಕರು, ದೀನದಲಿತರನ್ನು ನಮ್ಮ ಸಂವಿಧಾನ ಕಾಪಾಡುತ್ತಿದೆ ಎಂದು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ.ರವಿ ಮಾತನಾಡಿ, ಪ್ರಕೃತಿಯನ್ನು ಆರಾಧಿಸುವ ಮೊಗೇರ ಸಮಾಜ ಹಿಂದಿನಿAದಲೂ ಶ್ರಮ ಜೀವಿಗಳು. ಸಂಸ್ಕೃತಿ, ಪದ್ಧತಿ ಆಚಾರ ವಿಚಾರಗಳು ದೈವ ಕೋಲಗಳನ್ನು ಇಂದಿಗೂ ಚಾಚೂ ತಪ್ಪದೆ ಪರಿಪಾಲಿಸಿಕೊಂಡು ಬಂದಿರುವುದರಿAದ ಮುಂದಿನ ಪೀಳಿಗೆಗೆ ಸಂಸ್ಕೃತಿ ಹಸ್ತಾಂತರಿಸಲು ಅನುಕೂಲವಾಗಿದೆ ಎಂದರು.

ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸುಮಾರು ೩೫ ರಿಂದ ೪೦ ಸಾವಿರದವರೆಗೆ ಮೊಗೇರ ಸಮಾಜದ ಸದಸ್ಯರಿದ್ದರೂ ಇದುವರೆಗೂ ಒಂದು ಸಮುದಾಯ ಭವನ ನಿರ್ಮಾಣ ವಾಗಿಲ್ಲ. ಜನಾಂಗದ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಅಗತ್ಯವಾಗಿ ಬೇಕಾದ ಶೈಕ್ಷಣಿಕ ಸಂಸ್ಥೆ ಇಲ್ಲದಂತಾಗಿದೆ. ಸರಕಾರ ಮತ್ತು ಜನಪ್ರತಿನಿಧಿಗಳು ಮೊಗೇರ ಸಮಾಜವನ್ನು ಕಡೆಗಣಿಸಬಾರದು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಘಟಕದ ಅಧ್ಯಕ್ಷರಾದ ಬಿ.ಎಂ. ದಾಮೋದರ್ ವಹಿಸಿದ್ದರು. ವೇದಿಕೆಯಲ್ಲಿ ಮೊಗೇರ ಸಮಾಜದ ರಾಜ್ಯ ಉಪಾಧ್ಯಕ್ಷ ಬಿ. ಶಿವಪ್ಪ, ಮಡಿಕೇರಿ ತಾಲೂಕು ಅಧ್ಯಕ್ಷ ಪಿ.ಟಿ. ಸುರೇಶ್, ಪ್ರಮುಖರಾದ ಎಸ್.ಎಂ. ಡಿಸಿಲ್ವಾ, ನಾರಾಯಣ, ವೆಂಕಪ್ಪ, ಗೀತಾ ಧರ್ಮಪ್ಪ, ಪಿ.ಸಿ. ನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದ್ದರು.