ಮಡಿಕೇರಿ, ಆ. ೨: ಚುನಾವಣಾ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವ ಕಾರ್ಯಕ್ರಮಕ್ಕೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಚಾಲನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಆಧಾರ್ ಅನ್ನು ವೋಟರ್ ಐಡಿಯೊಂದಿಗೆ ಲಿಂಕ್ ಮಾಡುವ’ ಭಿತ್ತಿಪತ್ರ ಬಿಡುಗಡೆ ಮಾತನಾಡಿದ ಅವರು, ಪ್ರಜಾ ಪ್ರತಿನಿಧಿ ಕಾಯಿದೆ, ೧೯೫೦ರ ಸೆಕ್ಷನ್ ೧೪ಕ್ಕೆ ತಿದ್ದುಪಡಿಯನ್ನು ಮಾಡಲಾಗಿದ್ದು, ೧ ಜನವರಿ ಅರ್ಹತಾ ದಿನಾಂಕವನ್ನು ಬಹು ಅರ್ಹತಾ ದಿನಾಂಕಗಳು ಅಂದರೆ ೧ ಜನವರಿ, ೧ ಏಪ್ರಿಲ್, ೧ ಜುಲೈ ಮತ್ತು ೧ ಅಕ್ಟೋಬರ್ ಎಂದು ತಿದ್ದುಪಡಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಪ್ರಜಾ ಪ್ರತಿನಿಧಿ ಕಾಯಿದೆ, ೧೯೫೦ರ ಸೆಕ್ಷನ್ ೨೩ಕ್ಕೆ ತಿದ್ದುಪಡಿಯನ್ನು ಮಾಡಲಾಗಿದ್ದು, ಮತದಾರರ ಪಟ್ಟಿಯಲ್ಲಿ ಯಾರ ಹೆಸರನ್ನು ನೋಂದಣಿ ಮಾಡಲಾಗಿದೆಯೋ ಆ ವ್ಯಕ್ತಿಯು ತನ್ನ ಆಧಾರ್ ಸಂಖ್ಯೆಯನ್ನು ಮತದಾರರ ನೋಂದಣಾಧಿಕಾರಿಗೆ ನಮೂನೆ ೬ಬಿ ಯಲ್ಲಿ ಸಲ್ಲಿಸುವಂತೆ ತಿಳಿಸಿದ್ದಾರೆ. ಆಧಾರ್ ಜೋಡಣೆ ಕಾರ್ಯವು ೧ನೇ ಆಗಸ್ಟ್ ೨೦೨೨ ರಿಂದ ಜಾರಿಗೆ ಬಂದಿದ್ದು, ಆನ್‌ಲೈನ್ ಮೂಲಕ ಮತದಾರರು hಣಣಠಿs://ತಿತಿತಿ.ಟಿvsಠಿ.iಟಿ, hಣಣಠಿs://voಣeಡಿಠಿoಡಿಣಚಿಟ.eಛಿi.gov.iಟಿ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಮತ್ತು ಗಿಊಂ ಮೊಬೈಲ್ ಆ್ಯಪ್ ಮೂಲಕ ನಮೂನೆ ೬ಬಿ ಅನ್ನು ಭರ್ತಿ ಮಾಡಿ ಆಧಾರ್ ಅನ್ನು ದೃಢೀಕರಿಸಬಹುದಾಗಿದೆ ಎಂದರು.

ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರಿಂದ ನಮೂನೆ ೬ ಬಿ ಪ್ರತಿಯಲ್ಲಿ ಆಧಾರ್ ಸಂಖ್ಯೆಯನ್ನು ಸಂಗ್ರಹಿಸುವರು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಆಧಾರ್ ಸಂಖ್ಯೆಯನ್ನು ಹೊಂದಿರದ ಮತದಾರರು ನಮೂನೆ-೬ ಬಿ ಯೊಂದಿಗೆ ನರೇಗಾ ಜಾಬ್ ಕಾರ್ಡ್, ಬ್ಯಾಂಕ್/ ಅಂಚೆ ಕಚೇರಿ ಯಲ್ಲಿ ನೀಡಿದ ಭಾವಚಿತ್ರವಿರುವ ಪಾಸ್‌ಬುಕ್, ಕಾರ್ಮಿಕ ಸಚಿವಾಲ ಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಎನ್‌ಪಿಆರ್ ಅಡಿಯಲ್ಲಿ ಆರ್‌ಜಿಐ ನೀಡಿದ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್ ಪೋರ್ಟ್, ಭಾವಚಿತ್ರ ವಿರುವ ಪಿಂಚಣಿ ದಾಖಲೆ, ಕೇಂದ್ರ/ ರಾಜ್ಯ ಸರ್ಕಾರ/ ಪಿ.ಎಸ್.ಯು/ ಪಬ್ಲಿಕ್ ಲಿಮಿಟೆಡ್ ಕಂಪೆನಿಗಳಿAದ ಉದ್ಯೋ ಗಿಗಳಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಸಂಸದರು/ ಶಾಸಕರು/ ಎಂಎಲ್‌ಸಿ ಗಳಿಗೆ ನೀಡಿದ ಅಧಿಕೃತ ಗುರುತಿನ ಚೀಟಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಭಾರತ ಸರಕಾರದಿಂದ ನೀಡಲಾದ ವಿಶಿಷ್ಟ ಗುರುತಿನ ಚೀಟಿ, ಯಾವು ದಾದರೂ ಒಂದು ಪರ್ಯಾಯ ದಾಖಲೆಗಳನ್ನು ಸಲ್ಲಿಸಬಹುದು ಎಂದು ಹೇಳಿದರು. ಮತದಾರರ ನೋಂದಣಿ ನಿಯಮ ಗಳು ೧೯೬೦ರ ನಿಯಮ ೧೩ ಮತ್ತು ೨೬ಕ್ಕೆ ತಿದ್ದುಪಡಿ ಮಾಡಲಾಗಿದ್ದು, ಹೊಸ ಮತದಾರರ ನೋಂದಣಿಗಾಗಿ ನಮೂನೆ ೬, ಹಾಲಿ ಇರುವ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು/ ಕೈಬಿಡಲು ಆಕ್ಷೇಪಣೆಗಾಗಿ ನಮೂನೆ ೭ ಮತ್ತು ನಿವಾಸ ಸ್ಥಳಾಂತರ, ಹಾಲಿ ಇರುವ ಮತದಾರರ ಪಟ್ಟಿಯಲ್ಲಿ ನಮೂದುಗಳ ತಿದ್ದುಪಡಿ, ಬದಲಿ ಎಪಿಕ್‌ಗಾಗಿ ಮತ್ತು ವಿಕಲಚೇತನ ಹೊಂದಿರುವ ವ್ಯಕ್ತಿಯ ಗುರುತು ಮಾಡಲು ನಮೂನೆ ೮ ಅನ್ನು ಹೊಸದಾಗಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಪರಿಷ್ಕೃತ ನಮೂನೆಗಳು ೧ ಆಗಸ್ಟ್ ೨೦೨೨ ರಿಂದ ಜಾರಿಗೆ ಬರುತ್ತಿದ್ದು ಆನ್‌ಲೈನ್ ನಲ್ಲಿಯೂ ಸಹ ೧ ಆಗಸ್ಟ್ ೨೦೨೨ ರಿಂದ ಜಾರಿಗೆ ಬರುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ತಹಶೀಲ್ದಾರ್ ಪಿ.ಎಸ್. ಮಹೇಶ್, ಶಿರಸ್ತೆದಾರರು ಇತರರು ಇದ್ದರು.