ಅರ್ಜುನನ ಮಗನಾದ ಅಭಿಮನ್ಯು ಮತ್ತು ಉತ್ತರೆಯ ಮಗ ಪರೀಕ್ಷಿತ. ಈತನು ರಾಜ್ಯ ವಹಿಸಿಕೊಂಡು ರಾಜ್ಯಭಾರ ಮಾಡುತ್ತಿರುವಾಗ ಒಂದು ದಿನ ಬೇಟೆಗೆಂದು ಅರಣ್ಯಕ್ಕೆ ಹೋಗು ತ್ತಾನೆ. ಅಲ್ಲಿ ಬಹುಕಾಲ ಬೇಟೆ ಯಾಡಿದ ಕಾರಣ ಬಹಳ ಬಳಲಿದ ರಾಜ ಒಂದು ಗುಹೆಯನ್ನು ಪ್ರವೇಶಿಸುತ್ತಾನೆ. ಅಲ್ಲಿ ಶಮೀಕ ಮುನಿಯು ಸಮಾಧಿ ಸ್ಥಿತಿಯಲ್ಲಿ ತಪಸ್ಸು ಮಾಡುತ್ತಿರುತ್ತಾರೆ. ಆಗ ಪರೀಕ್ಷಿತ ಶಮೀಕ ಋಷಿಯಲ್ಲಿ ನೀರನ್ನು ಕೇಳುತ್ತಾನೆ. ಎಷ್ಟು ಕೇಳಿದರೂ ಮೌನವಾಗಿದ್ದ ಋಷಿಯ ಕಂಡು ಕೋಪಗೊಂಡ ರಾಜ ಅಲ್ಲೇ ಸತ್ತುಬಿದ್ದ ಹಾವನ್ನು ಕತ್ತಿಯಿಂದ ಎತ್ತಿ ತೆಗೆದು ಋಷಿಯ ಕೊರಳಿಗೆ ಹಾಕಿ ಹೋಗುತ್ತಾನೆ. ಗುಹೆಗೆ ಬಂದ ಶಮೀಕ ಋಷಿಯ ಮಗ ಶೃಂಗಿಯು ತನ್ನ ತಂದೆಯ ಕೊರಳಲ್ಲಿರುವ ಹಾವನ್ನು ಕಂಡು ಕೋಪಾವೇಶ ಗೊಂಡು ಯಾರು ಹೀಗೆ ಅಪಚಾರ ಮಾಡಿದ್ದಾರೋ ಅವರು ಇನ್ನು ಏಳು ದಿನಗಳಲ್ಲಿ ಸರ್ಪದಿಂದ ಸಾಯಲಿ ಎಂದು ಶಾಪ ಕೊಡುತ್ತಾನೆ.

ಪರೀಕ್ಷಿತ ಶೃಂಗ ಋಷಿಯ ಶಾಪ ತಿಳಿದು ಬಹಳ ಪಶ್ಚಾತ್ತಾಪ ಪಡುತ್ತಾನೆ. ಆದರೇನಂತೆ ಶಾಪ ಶಾಪವೇ... ಶಾಪದ ಫಲವಾಗಿ ಏಳನೆಯ ದಿನದಂದು ಋಷಿಯ ಶಾಪವನ್ನು ಈಡೇರಿಸುವ ಸಲುವಾಗಿ ಕದ್ರುವಿನ ಮಗ ತಕ್ಷಕ ಪರೀಕ್ಷಿತ ರಾಜನಿದ್ದಲ್ಲಿಗೆ ಬರುತ್ತಾನೆ. ಆದರೆ ಬಹಳಷ್ಟು ಕಾವಲು ಗಾರರಿರುತ್ತಾರೆ. ಒಳಗೆ ಹೋಗಲು ದಾರಿಯೇ ಇರುವುದಿಲ್ಲ. ಆಗ ತಕ್ಷಕ ಸಣ್ಣ ಹುಳುವಿನ ರೂಪ ತಾಳಿ ಹಣ್ಣಿನ ಬುಟ್ಟಿಯಲ್ಲಿ ಸೇರಿ ಹಣ್ಣಿನಲ್ಲಿ ವಿಷ ಬಿಡುತ್ತದೆ. ಆ ವಿಷಪೂರಿತವಾದ ಹಣ್ಣನ್ನು ಸೇವಿಸಿದ ಪರೀಕ್ಷಿತ ಸಾವನ್ನಪ್ಪುತ್ತಾನೆ. ಪರೀಕ್ಷಿತ ರಾಜನ ಮಗ ಜನಮೇಜಯನು ಆಗಿನ್ನೂ ಚಿಕ್ಕವನು. ಜನಮೇಜಯನು ಬೆಳೆದು ದೊಡ್ಡವನಾದಾಗ ತನ್ನ ತಂದೆ ಹೇಗೆ ಸತ್ತರು ಎಂದು ತಿಳಿದು ಕೋಪಗೊಂಡು ಒಂದು ಹಾವು ತಂದೆಯನ್ನು ಸಾಯಿಸಿತೇ, ಇಡೀ ನಾಗಕುಲವನ್ನೇ ಸಂಹರಿಸುತ್ತೇನೆ. ಎಂದು ಮಹಾಸರ್ಪಯಾಗವನ್ನು ಮಾಡುತ್ತಾನೆ. ಆ ಯಾಗದ ಪ್ರಕಾರ ಜಗತ್ತಿನಲ್ಲಿರುವ ಎಲ್ಲಾ ಹಾವುಗಳು ಬಂದು ಅಗ್ನಿಕುಂಡ ದಲ್ಲಿ ಬೀಳುತ್ತಿದ್ದವು. ಹೀಗಿರು ವಾಗ ನಾಗಕುಲವು ಭಯದಿಂದ ಇದ್ದಾಗ ನಾಗಕುಲದ ದೂರ ಸಂಬAಧಿಯಾದ ‘‘ಆಸ್ತಿಕ’’ ಋಷಿಯು ಜನಮೇಜಯ ನಿದ್ದಲ್ಲಿಗೆ ಬಂದು ಪ್ರಾರ್ಥಿಸಿದಾಗ ಸಂಪನ್ನರಾದ ಜನಮೇಜಯ ಏನು ವರಬೇಕು ಎಂದಾಗ ಈ ಕೂಡಲೇ ಸರ್ಪಯಾಗ ನಿಲ್ಲಿಸಿ, ಇದು ಮಹಾಪಾಪ. ನಾಗಕುಲ ನಿರ್ನಾಮ ಮಾಡುವುದು ಒಳ್ಳೆಯ ದಲ್ಲ ಅಂದಾಗ ಜನಮೇಜಯ ತಾನು ಮಾಡುತ್ತಿದ್ದ ಯಾಗವನ್ನು ನಿಲ್ಲಿಸಿದನು. ಅದು ಪಂಚಮಿಯ ದಿನವಾಗಿತ್ತು. ಯಾಗ ನಿಂತು ತಮ್ಮ ಸರ್ಪಕುಲ ನಾಶವಾಗುವು ದನ್ನು ತಡೆದ ‘‘ಆಸ್ತಿಕ’’ ಋಷಿಗೆ ನಮಿಸಿದ ನಾಗರಾಜ, ಆಸ್ತಿಕ ಋಷಿಯೇ ನಮ್ಮ ಸಂಕುಲವನ್ನು ಉಳಿಸಿದ ನಿಮಗೆ ವರ ಕೊಡುತ್ತಿದ್ದೇವೆ. ಈ ಪಂಚಮಿಯ ದಿನದಂದು ಯಾಗ ನಿಲ್ಲಿಸಿದ್ದೀರಿ. ಈ ದಿನದಂದು ಯಾರು ಆಸ್ತಿಕ ಎಂಬ ಹೆಸರನ್ನು ಹೇಳುವರೋ ಅವರಿಗೆ ನಮ್ಮ ನಾಗಕುಲ ತೊಂದರೆ ಕೊಡುವುದಿಲ್ಲ. ಆಸ್ತಿಕ ಎನ್ನುವ ಹೆಸರನ್ನು ಜಪಿಸುವವರ ಮೇಲೆ ನಮ್ಮ ಕೃಪೆ ಇರುತ್ತದೆ. ಯಾವ ನಾಗದೋಷಗಳೂ ಅವರಿಗೆ ಬರುವುದಿಲ್ಲ. ಅವರ ಮೇಲೆ ನಮ್ಮ ಕೃಪೆ ಇರುತ್ತದೆ. ಎಂದು ನಾಗರಾಜ ವರವನ್ನು ಕೊಡುತ್ತಾನೆ. ಈ ನಾಗರಪಂಚಮಿ ದಿನದಂದು ಯಾರು ಆಸ್ತಿಕ, ಆಸ್ತಿಕ ಎಂದು ಋಷಿಯ ಹೆಸರನ್ನು ಜಪಿಸುವರೋ ಅವರಿಗೆ ಯಾವ ನಾಗದೋಷಗಳೂ ಬರುವುದಿಲ್ಲ ಮತ್ತು ಏನೇ ನಾಗದೋಷ ಇದ್ದರೂ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ನಾಗರಾಜನ ಕೃಪೆ ಎಲ್ಲರ ಮೇಲೆ ಇರಲಿ.