ಮಡಿಕೇರಿ, ಜು. ೩೧: ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ನೃತ್ಯ
ಶಾಲೆಯ ಶಾಖೆಯಾದ ಪೊನ್ನಂಪೇಟೆ ನಾಟ್ಯಸಂಕಲ್ಪ ನೃತ್ಯ ಶಾಲೆಗೆ ಅಕಾಡೆಮಿಯ ಕಾರ್ಯದರ್ಶಿ ಡಾ. ಸ್ವಾತಿ ಪಿ. ಭಾರದ್ವಾಜ್ ಭೇಟಿ ನೀಡಿ ನೃತ್ಯ ತರಬೇತಿಯನ್ನು ಪರಿಶೀಲಿಸಿದರು.
ಅಲ್ಲದೆ ತಾವು ಬರೆದಿರುವ “ನೃತ್ಯ ತರಬೇತಿ ನಾಟ್ಯ ಹೆಜ್ಜೆ” ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದರು. ಅಕಾಡೆಮಿ ಅಧ್ಯಕ್ಷೆ ಅನಿತಾ ಪ್ರಕಾಶ್, ನಾಟ್ಯ ಸಂಕಲ್ಪ ನೃತ್ಯ ಶಾಲೆಯ ಅಧ್ಯಕ್ಷೆ ವಿದ್ಯಾ ಅಶೋಕ್ ಹಾಗೂ ಶಿಕ್ಷಕಿ ಪ್ರೇಕ್ಷ ಭಟ್ ಹಾಜರಿದ್ದರು.