ಕುಶಾಲನಗರ, ಆ.೧: ಆನೆ ಮಾವುತ ಕಾವಾಡಿಗರ ಪ್ರತಿಭಟನೆ ನಡುವೆ ಈ ಬಾರಿಯ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ದುಬಾರೆ ಮತ್ತು ಆನೆಕಾಡು ಸಾಕಾನೆ ಶಿಬಿರದಿಂದ ಆಗಸ್ಟ್ ೭ ರಂದು ಗಜಪಯಣಕ್ಕೆ ೯ ಆನೆಗಳು ಸಿದ್ಧಗೊಂಡಿವೆ.

ಹಿAದೆ ದಸರಾದಲ್ಲಿ ಪಾಲ್ಗೊಂಡ ಕಾವೇರಿ, ವಿಜಯ, ಧÀನಂಜಯ, ಗೋಪಿ, ವಿಕ್ರಮ, ಪ್ರಶಾಂತ್ ಸೇರಿದಂತೆ ಅಜಯ, ಶ್ರೀರಾಮ, ಸುಗ್ರೀವ ಜೊತೆಗೂಡಿ ಒಟ್ಟು ೯ ಆನೆಗಳು ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳಲಿದೆ. ಈ ಸಂಬAಧ ಮೈಸೂರಿನಿಂದ ಹಿರಿಯ ಅಧಿಕಾರಿಗಳ ತಂಡ ದುಬಾರೆ ಸಾಕಾನೆ ಶಿಬಿರ ಸೇರಿದಂತೆ ಮತ್ತಿಗೋಡು, ರಾಣಿಗೇಟ್ ಶಿಬಿರಗಳಿಗೆ ಭೇಟಿ ನೀಡಿ ಆನೆಗಳ ಪರಿಶೀಲನೆ ನಡೆಸಿತು.

ಕಳೆದ ಬಾರಿ ದುಬಾರೆ ಶಿಬಿರದಿಂದ

(ಮೊದಲ ಪುಟದಿಂದ) ೩ ಆನೆಗಳು ಮಾತ್ರ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದವು. ಹಲವು ಬೇಡಿಕೆಗಳನ್ನು ಮುಂದಿಟ್ಟುಕೊAಡು ಈ ಬಾರಿಯ ದಸರಾಕ್ಕೆ ಬಹಿಷ್ಕಾರ ಹಾಕುವುದಾಗಿ ಹೇಳಿರುವ ಮಾವುತ ಕಾವಾಡಿಗರ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನೀಡಿದ್ದು, ಪ್ರತಿಭಟನಾಕಾರರ ನಿಲುವು ಇನ್ನಷ್ಟೇ ಹೊರಬೀಳಬೇಕಾಗಿದೆ. -ಸಿಂಚು