ಮಡಿಕೇರಿ, ಜು. ೩೧: ೨೦೧೪ ರಲ್ಲಿ ಮಡಿಕೇರಿಯಲ್ಲಿ ನಡೆದ ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾ. ಡಿಸೋಜ ಅವರ ಹೆಸರಿನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಸ್ಥಾಪಿಸಿದೆ. ಇದರ ಅಂಗವಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಾಟಕ ಸ್ವರ್ಧೆಯನ್ನು ಈ ಸಾಲಿನಲ್ಲಿ ಏರ್ಪಡಿಸಿದೆ.
ಪ್ರೌಢಶಾಲಾ ವಿದ್ಯಾರ್ಥಿಗಳ ನಾಟಕ ತಂಡದಲ್ಲಿ ೫ ಮಂದಿ ಪಾತ್ರದಾರಿಗಳಿಗೆ ಅವಕಾಶವನ್ನು ನೀಡಲಾಗಿದೆ. ಐತಿಹಾಸಿಕ ಪೌರಾಣಿಕ ಮತ್ತು ಸಾಮಾಜಿಕ ವಲಯದ ಕಥಾ ವಿಷಯಗಳನ್ನು ಆದರಿಸಿ ೩೦ ನಿಮಿಷದ ಒಳಗೆ ನಾಟಕ ಪ್ರದರ್ಶನವನ್ನು ಮಾಡಬೇಕಾಗಿದೆ. ಲೇಖಕರುಗಳು ಬರೆದ ಅಥವಾ ಸ್ವರಚಿತ ನಾಟಕಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವ ಪ್ರೌಢ ಶಾಲೆಗಳ ನಾಟಕ ತಂಡದ ವಿದ್ಯಾರ್ಥಿಗಳು ತಾವು ಅಭಿನಯಿಸುವ ನಾಟಕದ ಹೆಸರು ಮತ್ತು ತಮ್ಮ ಪ್ರೌಢಶಾಲೆಯ ಹೆಸರನ್ನು ನಮೂದಿಸಿ ಶಾಲೆಯ ಮುಖ್ಯೋಪಾಧ್ಯಾಯರ ಪತ್ರದೊಂದಿಗೆ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಆಗಸ್ಟ್ ೧೦ ರೊಳಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಕಳುಹಿಸಿಕೊಡಬೇಕಾಗಿ ಕೋರುತ್ತೇವೆ.
ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎಸ್.ಜಿ.ಆರ್.ವೈ ಕಟ್ಟಡ, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ.
ಸಂಪರ್ಕಿಸಲು ದೂರವಾಣಿ ಸಂಖ್ಯೆ: ಎಂ.ಪಿ.ಕೇಶವ ಕಾಮತ್, ಅಧ್ಯಕ್ಷರು. ೯೪೪೮೩೪೬೨೭೬
ಎಸ್.ಐ. ಮುನೀರ್ ಅಹಮದ್, ಗೌ.ಕಾರ್ಯದರ್ಶಿ. ೯೮೮೬೧೮೧೬೧೩
ರೇವತಿ ರಮೇಶ್, ಗೌ. ಕಾರ್ಯದರ್ಶಿ. ೯೬೬೩೨೫೪೮೨೯
ಇಮೇಲ್ ವಿಳಾಸ : ಞeshಚಿvಚಿಞಚಿmಚಿಣh@gmಚಿiಟ.ಛಿom
ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಮತ್ತು ಕನ್ನಡ ನಾಡು, ನುಡಿ, ಸಂಸ್ಕೃತಿಯ ಪರಿಚಯ ಮಾಡಿಕೊಡುವ ಉದ್ದೇಶದಿಂದ ಜಿಲ್ಲೆಯ ಶಾಲೆ ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಅವಕಾಶವನ್ನು ಉಪಯೋಗಿಸಿಕೊಂಡು ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನ ಮಾಡುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮದ್ ಕೋರಿದ್ದಾರೆ.