ನಾಪೋಕ್ಲು, ಆ.೧: ಸಮೀಪದ ಪೇರೂರು ಸುತ್ತಮುತ್ತಲಿನ ಭಾಗದಲ್ಲಿ ನಿರಂತರವಾಗಿರುವ ಕಾಡಾನೆ ಹಾವಳಿ ಯಿಂದ ಗ್ರಾಮದಲ್ಲಿ ಆತಂಕ ಮೂಡಿದ್ದು, ಬೆಳೆಗಳÀÄ ನಾಶವಾಗು ತ್ತಿವೆ. ಅರಣ್ಯ ಇಲಾಖೆ, ಆನೆ ಹಾವಳಿ ತಡೆಗೆ ಮುಂದಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಇತರ ಸಂಘಟನೆ ಗಳೊಂದಿಗೆ ಸೇರಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಪ್ಪಚೀರ ನಂದಕುಮಾರ್ ಎಚ್ಚರಿಸಿದರು. ಪೇರೂರು ಇಗ್ಗುತ್ತಪ್ಪ ದೇವಸ್ಥಾನದಲ್ಲಿ ನಡೆದ ಪೇರೂರು ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ಮಾತನಾಡಿ, ಈ ಬಗ್ಗೆ ತಿಳಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಮಚ್ಚುರ ರವೀಂದ್ರ, ಮಾಜಿ ಸದಸ್ಯ ಚಂಗೇಟಿರ ಸೋಮಣ್ಣ, ಪೇರೂರು ದವಸ ಭಂಡಾರದ ಅಧ್ಯಕ್ಷ ಮೂವೇರ ಪೆಮ್ಮಯ್ಯ, ಪೇರೂರು ಕೈಲ್ ಪೊಳ್ದ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬೊಟ್ಟೊಳಂಡ ರವಿ ಕರುಂಬಯ್ಯ, ಮೂವೇರ ಕಾವೇರಪ್ಪ ಮಾತನಾಡಿ, ಕಾಡು ಪ್ರಾಣಿಗಳಿಂದ ದೇವಸ್ಥಾನದಲ್ಲಿ ನಡೆದ ಪೇರೂರು ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ಮಾತನಾಡಿ, ಈ ಬಗ್ಗೆ ತಿಳಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಮಚ್ಚುರ ರವೀಂದ್ರ, ಮಾಜಿ ಸದಸ್ಯ ಚಂಗೇಟಿರ ಸೋಮಣ್ಣ, ಪೇರೂರು ದವಸ ಭಂಡಾರದ ಅಧ್ಯಕ್ಷ ಮೂವೇರ ಪೆಮ್ಮಯ್ಯ, ಪೇರೂರು ಕೈಲ್ ಪೊಳ್ದ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬೊಟ್ಟೊಳಂಡ ರವಿ ಕರುಂಬಯ್ಯ, ಮೂವೇರ ಕಾವೇರಪ್ಪ ಮಾತನಾಡಿ, ಕಾಡು ಪ್ರಾಣಿಗಳಿಂದ ಗ್ರಾಮದಲ್ಲಾಗುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪೊನ್ನಡ್ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ ಮಚ್ಚುರ ಯದುಕುಮಾರ್, ದವಸ ಭಂಡಾರ ನಿರ್ದೇಶಕ ಪಾಲೆಯಡ ದೇವಯ್ಯ, ಇಗ್ಗುತ್ತಪ್ಪ ದೇವಸ್ಥಾನ ಸಮಿತಿಯ ತಾಪಂಡ ಗಣೇಶ್, ತೆಕ್ಕಡ ಭೀಮಯ್ಯ, ಬೆಳೆಗಾರರಾದ ಕೊಡಿಯಂಡ ಶಶಿಕಾಂತ್, ತೆಕ್ಕಡ ದೊರೆ, ಮತ್ತಿತರರು ಭಾಗವಹಿಸಿದ್ದರು.