ಮಡಿಕೇರಿ, ಆ. ೧: ಹೋಬಳಿ ಮಟ್ಟದ ಸಮಿತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಬೇರುಗಳು ಅವು ಸದೃಢ ವಾದರೆ ಪರಿಷತ್ತು ಬಲಿಷ್ಠವಾಗುತ್ತದೆ. ಸದÀ್ಯದಲ್ಲೇ ಸದಸ್ಯತ್ವ ಆಂದೋಲನ ಪ್ರಾರಂಭಿಸಲಾಗುವುದು. ಆ ಸಂದರ್ಭ ದಲ್ಲಿ ಪರಿಷತ್ತಿನ ಸದಸ್ಯರು ಹೆಚ್ಚು ಹೆಚ್ಚು ಸದಸ್ಯರನ್ನು ಸೇರ್ಪಡೆ ಮಾಡುವ ಮೂಲಕ ಪರಿಷತ್ತನ್ನು ಗಟ್ಟಿಗೊಳಿಸಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೇಶವ ಕಾಮತ್ ನುಡಿದರು. ಅವರು ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಮ್ಮತ್ತಿ ಹೋಬಳಿ ಘಟಕದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಪರಿಷತ್ತಿನ ಪೂರ್ವಾಧ್ಯಕ್ಷ ಟ.ಪಿ. ರಮೇಶ್, ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ‘ಸಾಹಿತ್ಯ ಪರಿಷತ್ತಿನ ನಡಿಗೆ ಶಾಲೆಗಳ ಕಡೆಗೆ’ ಎಂಬAತೆ ಶಾಲಾ ಅಧ್ಯಾಪಕ ರನ್ನು ಮತ್ತು ವಿದ್ಯಾರ್ಥಿಗಳನ್ನು ಪರಿಷತ್ತಿನ ಕಾರ್ಯಕ್ರಮಗಳೆಡೆಗೆ ಕರೆತರಬೇಕಿದೆ. ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಸಾಹಿತಿಗಳನ್ನು, ಕವಿಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಸಾಹಿತ್ಯ ಬೆಳೆಯಬೇಕಿದೆ ಎಂದರು.

ಜಿಲ್ಲಾಧ್ಯಕ್ಷ ಕೇಶವಕಾಮತ್ ಅವರು ಘಟಕದ ನೂತನ ಅಧ್ಯಕ್ಷರಾದ ಟಿ.ಹೆಚ್. ಮಂಜುನಾಥ್ ಅವರಿಗೆ ಅಧಿಕಾರ ಹಸ್ತಾಂತರ ಪರಿಷತ್ತಿನ ಪೂರ್ವಾಧ್ಯಕ್ಷ ಟ.ಪಿ. ರಮೇಶ್, ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ‘ಸಾಹಿತ್ಯ ಪರಿಷತ್ತಿನ ನಡಿಗೆ ಶಾಲೆಗಳ ಕಡೆಗೆ’ ಎಂಬAತೆ ಶಾಲಾ ಅಧ್ಯಾಪಕ ರನ್ನು ಮತ್ತು ವಿದ್ಯಾರ್ಥಿಗಳನ್ನು ಪರಿಷತ್ತಿನ ಕಾರ್ಯಕ್ರಮಗಳೆಡೆಗೆ ಕರೆತರಬೇಕಿದೆ. ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಸಾಹಿತಿಗಳನ್ನು, ಕವಿಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಸಾಹಿತ್ಯ ಬೆಳೆಯಬೇಕಿದೆ ಎಂದರು.

ಜಿಲ್ಲಾಧ್ಯಕ್ಷ ಕೇಶವಕಾಮತ್ ಅವರು ಘಟಕದ ನೂತನ ಅಧ್ಯಕ್ಷರಾದ ಟಿ.ಹೆಚ್. ಮಂಜುನಾಥ್ ಅವರಿಗೆ ಅಧಿಕಾರ ಹಸ್ತಾಂತರ ಪಡೆದುಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ನಡೆಸುವುದಾಗಿ ಹೇಳಿದರು.

ವೀರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜೇಶ್ ಪದ್ಮನಾಭ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಸಾಪ ಜಿಲ್ಲಾ ಸಮಿತಿ ಸದಸ್ಯರುಗಳಾದ ಬೀಜೊಯ್, ಮೂಸಾ, ಸಿದ್ದಾಪುರ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಎಂ.ಎ. ಯಮುನಾ, ದೇವಜಾನು, ಗ್ರಾಮ ಪಂಚಾಯಿತಿ ಸದಸ್ಯಸರುಗಳಾದ ಎಂ.ಎ. ಆನಂದ, ಲೋಕೇಶ್, ಝಮೀರಾ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ಸಂತ ಅನ್ನಮ್ಮ ಶಾಲೆಯ ಶಿಕ್ಷಕರು, ಬಿಜಿಎಸ್ ವಿದ್ಯಾ ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಿದ್ದಾಪುರ ಸುತ್ತಮುತ್ತಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ಸಿದ್ದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನ್‌ಮೋಹನ್ ಹಾಗೂ ಸಿಬ್ಬಂದಿ ವರ್ಗದವರು, ಅಮ್ಮತ್ತಿ ಹೋಬಳಿ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರುಗಳು, ವಿ ಸೆವೆನ್ ಸಂಘದ ಸದ್ಯಸರುಗಳು, ಸಿದ್ದಾಪುರ ವ್ಯಾಪ್ತಿಯ ಅಂಗನವಾಡಿ ಶಿಕ್ಷಕರು ಗಳು, ಆಟೋ ಚಾಲಕ ಸಂಘದ ಸದಸ್ಯರುಗಳು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಉದ್ಯಮಿ ರಾಜೇಂದ್ರ ಪ್ರಸಾದ್ ಎಲ್ಲರಿಗೂ ತುಳಸಿ ಗಿಡವನ್ನು ಉಚಿತ ವಾಗಿ ಕೊಟ್ಟು ಪರಿಸರ ಪ್ರೇಮವನ್ನು ತೋರಿದರು. ನೂತನವಾಗಿ ಆಯ್ಕೆ ಯಾದ ಕಾರ್ಯದರ್ಶಿ ವಿಜಯಲಕ್ಷಿö್ಮ ಮತ್ತು ಸಮಿತಿ ಸದಸ್ಯರುಗಳಾದ ಕೆ.ಎ. ಹರಿದಾಸ್, ಹಂಸ, ವಿನೀತ, ಶಿವಕುಮಾರ್ ಮುಂದಿನ ದಿನಗಳಲ್ಲಿ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಲು ತಮ್ಮ ಸಹಕಾರ ಕೊಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮವನ್ನು ನಾ ಕನ್ನಡಿಗ ಟೋಮಿ ಥೋಮಸ್ ನಿರೂಪಿಸಿ, ನೂತನ ಕಾರ್ಯದರ್ಶಿ ವಿಜಯಲಕ್ಷಿö್ಮ ಅವರು ಸ್ವಾಗತ ಕೋರಿ, ನೂತನ ಅಧ್ಯಕ್ಷ ಟಿ.ಎಚ್. ಮಂಜುನಾಥ್ ವಂದಿಸಿದರು. ನಾಡಗೀತೆಯನ್ನು ಜಲಜಾಕ್ಷಿ ಮತ್ತು ತಂಡದವರು ಹಾಡಿದರು.