ಮಡಿಕೇರಿ, ಆ.೧ : ದಫ್ ಕಲಾ ಒಕ್ಕೂಟ ಕೊಡಗು ವತಿಯಿಂದ ವೀರಾಜಪೇಟೆಯಲ್ಲಿ ಪೆರುನ್ನಾಲ್ ಪಟ್ಟುರುಮ್ಮಾಲ್ ಸೀಸನ್-೨ ಮದ್‌ಹ್ ಹಾಡು ಸ್ಪರ್ಧೆ ನಡೆಯಿತು.

ಪಟ್ಟಣದ ನುಸ್ರತುಲ್ ಉಲೂಮ್ ಮದರಸ ಸಭಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಅಝರುದ್ದೀನ್, ದ್ವೀತಿಯ ಶಫೀಕ್ ಕುಂಜಿಲ, ತೃತೀಯ ಅಬೂಬಕರ್ ಕೊಮ್ಮೆತೋಡು ಹಾಗೂ ಅಲವಿ ಕುಂಜಿಲ ನಾಲ್ಕನೇ ಬಹುಮಾನ ಪಡೆದರು.

ಕೊಡಗು ಜಿಲ್ಲೆಯ ನಾಯಿಬ್ ಖಾಝಿಗಳಾದ ಶಾದುಲಿ ಫೈಝಿ, ಅಬ್ದುಲ್ಲ ಫೈಝಿ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಹುಮಾನ ವಿತರಿಸಿದರು.

ಒಕ್ಕೂಟದ ಅಧ್ಯಕ್ಷ ಪಿ.ಎ.ಅಬ್ದುಲ್ ಮಜೀದ್ ಚೋಕಂಡಹಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉಪಾಧ್ಯಕ್ಷ ಎಂ.ಜಿ.ಅಬ್ದುಲ್ ಲತೀಫ್ ಕೊಂಡAಗೇರಿ ನಿರೂಪಿಸಿ, ಕಾರ್ಯದರ್ಶಿ ಅಬ್ದುಲ್ ರಶೀದ್ ಮುಸ್ಲಿಯಾರ್ ವಂದಿಸಿದರು. ಹಲವು ಸ್ಪರ್ಧಿಗಳು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ೨೦೦ ಕ್ಕೂ ಅಧಿಕ ಮಂದಿ ಉಪಸ್ಥಿತರಿದ್ದರು. ನೇರ ಪ್ರಸಾರದ ಮೂಲಕ ೩ ಸಾವಿರಕ್ಕೂ ಹೆಚ್ಚು ಕಲಾಸಕ್ತರು ಕಾರ್ಯಕ್ರಮ ವೀಕ್ಷಿಸಿದರು.