ನಾಪೋಕ್ಲು, ಜು. ೩೧: ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ವೃದ್ಧೆ ಇದೀಗ ಪತ್ತೆಯಾಗಿದ್ದಾರೆ. ಕಳೆದ ಬುಧವಾರ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಜಾಟ್ ಕಾಲೋನಿಯ ನಿವಾಸಿ ವೃದ್ಧೆ ಸೀತಮ್ಮ (೮೦) ಸಂಬAಧಿಕರ ಮನೆಯಿಂದ ಹೊರಟು ತನ್ನ ಗುಡಿಸಲಿಗೆ ತೆರಳಿದ್ದರು. ಆದರೆ ೪ ದಿನಗಳಾದರೂ ಮನೆಗೆ ಬಾರದ ಹಿನ್ನೆಲೆ ಸಂಬAಧಿಕರು, ಗ್ರಾಮಸ್ಥರು ಕಂದಾಯ ಇಲಾಖೆ ಸಿಬ್ಬಂದಿ ಪೂಣಚ್ಚ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಮಚ್ಚ್ಚುರ ರವೀಂದ್ರ ಮತ್ತಿತರರು ಒಟ್ಟಾಗಿ ೪ ದಿನಗಳಿಂದ ಸುತ್ತಮುತ್ತಲ ಕಾಡಿನಲ್ಲಿ ಹುಡುಕಾಟ ನಡೆಸಿದ್ದರು.

ಭಾನುವಾರ ದಿನ ಇನ್ನಷ್ಟು ಗ್ರಾಮಸ್ಥರು ಸೇರಿ ಹುಡುಕಾಟ ನಡೆಸಿದಾಗ ಮನೆಯಿಂದ ಎರಡು ಕಿಲೋಮೀಟರ್ ದೂರದ ಬೆಟ್ಟದ ಪೊದೆಯಲ್ಲಿ ವೃದ್ಧೆ ಕಂಡುಬAದಿದ್ದಾರೆ. ವೃದ್ಧೆಯನ್ನು ಪತ್ತೆ ಹಚ್ಚಿ ಮನೆಗೆ ಹೊತ್ತು ತಂದು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ವಾಹನದಲ್ಲಿ ನಾಪೋಕ್ಲುವಿಗೆ ಕರೆದುಕೊಂಡು ಬಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ವೃದ್ಧೆ ಚೇತರಿಸಿಕೊಳ್ಳುತ್ತಿದ್ದಾರೆ. ರಸ್ತೆಯ ಮಾರ್ಗದಲ್ಲಿ ಗೊಂದಲ ಉಂಟಾಗಿ ವೃದ್ಧೆ ಕಾಡಿನಲ್ಲಿ ಸಿಲುಕಿಕೊಂಡಿದ್ದರು.

ಕಳೆದ ನಾಲ್ಕು ದಿನಗಳಿಂದ ಬೆಟ್ಟ ಪ್ರದೇಶದಲ್ಲಿ ಹತ್ತು ಇಂಚಿಗೂ ಅಧಿಕ ಮಳೆಯಾಗಿದೆ. ಮಳೆ ಗಾಳಿ ಚಳಿಗೆ ಊಟ ಉಪಹಾರ ಇಲ್ಲದೆ ವೃದ್ಧೆ ದಿನ ಕಳೆದಿರುವುದು ವಿಸ್ಮಯ. ಈ ಬಗ್ಗೆ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಲಾಗಿತ್ತು. ಇದೀಗ ಚಿಕಿತ್ಸೆ ನೀಡುತ್ತಿದ್ದು, ಯಾವುದೇ ತೊಂದರೆ ಇಲ್ಲದೆ ಸೀತಮ್ಮ ಚೇತರಿಸಿಕೊಳ್ಳುತ್ತಿದ್ದಾರೆ. ಗ್ರಾಮಸ್ಥರ ಸಹಕಾರದಿಂದ ಈ ಕಾರ್ಯ ಆಗಿದ್ದು ಇದೀಗ ಸಂತಸ ತಂದಿದೆ ಎಂದು ಬಲ್ಲಮಾವಟಿ ಗ್ರಾಮ ಪಂಚಾಯಿತಿ ಸದಸ್ಯ ಮಚ್ಚುರ ರವೀಂದ್ರ ತಿಳಿಸಿದ್ದಾರೆ.

-ದುಗ್ಗಳ ಸದಾನಂದ