ಮಡಿಕೇರಿ, ಜು. ೩೧: ಕುಶಾಲನಗರ ವೃತ್ತ ನಿರೀಕ್ಷಕ ಎಂ.ಮಹೇಶ್ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶಿಸಿದೆ.

ಇವರ ಸ್ಥಾನಕ್ಕೆ ಸೋಮವಾರಪೇಟೆ ವೃತ್ತ ನಿರೀಕ್ಷಕ ಬಿ.ಜೆ ಮಹೇಶ್ ಅವರನ್ನು ನೇಮಿಸಲಾಗಿದೆ.

ಕುಶಾಲನಗರ ವೃತ್ತ ನಿರೀಕ್ಷಕರಾಗಿದ್ದ ಎಂ.ಮಹೇಶ್ ವಿರುದ್ಧ ಇತ್ತೀಚಿಗಷ್ಟೆ ಹಿಂದೂ ಜಾಗರಣಾ ವೇದಿಕೆ ಮಡಿಕೇರಿ ಚಲೋ ನಡೆಸಿ ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿತ್ತು. ಈ ಸಂದರ್ಭ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಅವರು ಸೂಕ್ತ ಕ್ರಮದ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆಯನ್ನು ಕೈಬಿಡಲಾಗಿತ್ತು.