ಸುಳ್ಯ, ಜು. ೩೧: ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಅವರು ಸಂಘದ ಪದಾಧಿಕಾರಿಗಳೊಂದಿಗೆ ಆಗಮಿಸಿ ಸುಳ್ಯದಲ್ಲಿ ಉಚಿತ ವಸತಿ ನಿಲಯಕ್ಕಾಗಿ ಮಂಜೂರಾದ ಸ್ಥಳ ವೀಕ್ಷಣೆ ಮಾಡಿದರು. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಅವರ ಮನವಿ ಮೇರೆಗೆ ಗೌಡ ಸಮುದಾಯದ ಬಡ ವಿದ್ಯಾರ್ಥಿಗಳಿಗಾಗಿ ಕೆ.ವಿ.ಜಿ. ವಿದ್ಯಾ ಸಂಸ್ಥೆಗಳ ಸಮೀಪದಲ್ಲೇ ಸ್ಥಳ ಮಂಜೂರು ಮಾಡುವಂತೆ ಮನವಿ ಮಾಡಿಕೊಂಡಿದ್ದರು.