ಮಡಿಕೇರಿ, ಜು.೩೦ : ಇತ್ತೀಚೆಗೆ ಈಶಾನ್ಯ ರಾಜ್ಯಗಳ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರವು ಪ್ರಪ್ರಥಮವಾಗಿ ಕಾಣಿಸಿಕೊಂಡು ಹಲವು ಹಂದಿಗಳು ಅಸುನೀಗಿದ್ದು. ಜಿಲ್ಲೆಯಲ್ಲಿ ಈ ಸಂಬAಧ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಸುರೇಶ ಭಟ್ ಹೇಳಿದರು.

ನಗರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಶನಿವಾರ ನಡೆದ

(ಮೊದಲ ಪುಟದಿಂದ) ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಆಫ್ರಿಕನ್ ಹಂದಿ ಜ್ವರವು ಮನುಷ್ಯರಿಗೆ ಬರುವುದಿಲ್ಲ. ಹಾಗಾಗಿ ಆತಂಕಪಡುವ ಅಗತ್ಯ ಇಲ್ಲ. ಇದು ಸಾಕು ಮತ್ತು ಕಾಡು ಹಂದಿಗಳಲ್ಲಿ ಅತ್ಯಂತ ಪ್ರಮುಖವಾದ ವೈರಾಣುಗಳಿಂದ ಬರುವ ಸಾಂಕ್ರಾಮಿಕ ರೋಗವಾಗಿದೆ. ಈಗಾಗಲೇ ಕೇರಳದ ವೈನಾಡು ಪ್ರದೇಶದಲ್ಲಿ ಹಂದಿಜ್ವರದ ಪ್ರಕರಣಗಳು ಕಂಡುಬAದಿದ್ದು. ಮುನ್ನೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕವಾಗಿ ಹಂದಿಗಳ ಆಮದು ಮತ್ತು ರಪ್ತುಗಳನ್ನು ನಿಲ್ಲಿಸಲಾಗಿದೆ.

ರೋಗಗ್ರಸ್ತ ಹಂದಿಗಳ ಎಲ್ಲಾ ರೀತಿಯ ಸ್ರವಿಕೆ ಹಾಗೂ ವಿಸರ್ಜನೆಗಳಲ್ಲಿ ವೈರಾಣು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಸೋಂಕಿತ ಹಂದಿಗಳಿAದ ಇತರೆ ಆರೋಗ್ಯವಂತ ಹಂದಿಗಳಿಗೆ ಹರಡುವ ಸಂಭವವಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯವಂತ ಹಂದಿಗಳನ್ನು ಪ್ರತ್ಯೇಕಿಸಿ, ಸೋಂಕಿತ ಹಂದಿಗಳನ್ನು ನಾಶಗೊಳಿಸಿ, ಕಳೇಬರÀಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದರು.

ಹAದಿ ಗೂಡುಗಳನ್ನು ಕ್ರಿಮಿನಾಶಗಳನ್ನು ಬಳಸಿ ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡಬೇಕು. ಸೋಂಕಿತ ಹಂದಿಗಳ ಸಂಪರ್ಕದಲ್ಲಿದ್ದ ಕಸ ಮತ್ತು ಇತರೆ ಪದಾರ್ಥಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಒಂದು ವೇಳೆ ಹಂದಿಗಳು ಅಸುನೀಗಿದರೆ ಅದರ ಕಳೇಬರಗಳನ್ನು ಆಳವಾದ ಗುಂಡಿ ತೆಗೆದು ಹೂಳುವುದರ ಮೂಲಕ ವಿಲೇವಾರಿ ಮಾಡಬೇಕು ಎಂದರು.

ಜಿಲ್ಲೆಯ ಗಡಿಭಾಗದ ಎಲ್ಲಾ ಚೆಕ್‌ಪೋಸ್ಟ್ಗಳಲ್ಲಿ ಪಶುಪಾಲನಾ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಎಲ್ಲಾ ರೀತಿಯಲ್ಲಿ ನಿಗಾವಹಿಸಲಾಗಿದೆ ಹಾಗೂ ಹಂದಿಗಳು ಅಸ್ವಾಭಾವಿಕವಾಗಿ ಅಸುನೀಗಿದರೆ ಕೂಡಲೇ ಸಂಬAಧಪಟ್ಟ ಪಶು ಇಲಾಖೆಗೆ ಮಾಹಿತಿ ಒದಗಿಸಬೇಕು. ಇಂತಹ ಸಂದರ್ಭದಲ್ಲಿ ಅಸುನೀಗಿದ ಹಂದಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ಪ್ರಾಣಿ ಜೈವಿಕ ಸಂಸ್ಥೆಗೆ ಕಳುಹಿಸಿಕೊಡಲಾಗುವುದು ಎಂದರು.

ಹAದಿಯ ರಕ್ತದ ಮಾದರಿಯಲ್ಲಿ ಆಫ್ರಿಕನ್ ಹಂದಿ ಜ್ವರದ ಲಕ್ಷಣಗಳು ದೃಢಪಟ್ಟರೆ, ಆ ಹಂದಿಗಳನ್ನು ನಾಶಗೊಳಿಸಬೇಕು ಎಂದು ಸುರೇಶ್ ಭಟ್ ಹೇಳಿದರು.