ಉಕ್ರೇನ್-ರಷ್ಯಾ ಸಂಘರ್ಷವು ಪ್ರಾರಂಭ ವಾದುದು ಹೇಗೆ ? ೩೦ ರಾಷ್ಟçಗಳ ಒಕ್ಕೂಟವಾದ ನ್ಯಾಟೋದ ವಿಸ್ತರಣೆಗಾಗಿ ಉಕ್ರೇನ್‌ನ ಸೇರ್ಪಡೆ ಗಾಗಿ ಪ್ರಯತ್ನ ನಡೆಸಿದಾಗ ಇದನ್ನು ಕೊನೆಗೊಳಿಸಲು ರಷ್ಯಾ ನೇರ ಯದ್ಧಕ್ಕೆ ಇಳಿಯಿತು. ನ್ಯಾಟೋದಲ್ಲಿ ಯುರೋಪಿಯನ್ ಹಾಗೂ ಅಮೇರಿಕಾ ದೇಶಗಳಿದ್ದು ಮಿಲಿಟರಿ ಹೊಂದಾಣಿಕೆಯೂ ಇರುವುದರಿಂದ ಇದರ ವಿಸ್ತರಣೆ ತನ್ನ ನೆರೆ ರಾಷ್ಟçವಾದ ಉಕ್ರೇನ್‌ನತ್ತ ತಿರುಗಿದಾಗ ರಷ್ಯಾಗೆ ಸಹಿಸಲಸಾಧ್ಯ ವಾಯಿತು. ನ್ಯಾಟೋದ ಈ ವಿಸ್ತರಣೆಯನ್ನು ಕೊನೆಗೊಳಿಸಲು ಹಿಂದೆಯೇ ಬೇಡಿಕೆ ಇಟ್ಟಿದ್ದ ರಷ್ಯಾ ಏಕಾಏಕಿ ಉಕ್ರೇನ್‌ನ ಮೇಲೆ ದಾಳಿ ಮಾಡಿತು.

ಈ ಸಂಘರ್ಷ ಆರಂಭವಾದದ್ದು ಹೇಗೆ ?

ಈ ಹಿಂದಿನ ಸೋವಿಯತ್ ಗಣರಾಜ್ಯವಾದ ಭಾಗವಾಗಿದ್ದ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ, ಇದಕ್ಕೆ ಸುದೀರ್ಘ ಕಾಲದ ಇತಿಹಾಸವಿದೆ. ಆದರೆ ಉಭಯ ದೇಶಗಳ ನಡುವಿನ ಪರಿಸ್ಥಿತಿ ಹದಗೆಟ್ಟಿದ್ದು ಮಾತ್ರ ೨೦೨೧ ರ ಆರಂಭಿಕ ಹಂತದಲ್ಲಿ, ಕಳೆದ ವರ್ಷ ಜನವರಿ ತಿಂಗಳಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನ್ ನ್ಯಾಟೋಗೆ ಸೇರಲು ಅವಕಾಶ ನೀಡುವಂತೆ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರನ್ನು ಒತ್ತಾಯಿಸಿದರು.

ಈ ನಡೆ ರಷ್ಯಾ ದೇಶವನ್ನು ಕೆರಳಿಸುವಂತೆ ಮಾಡಿತು, ಹಾಗಾಗಿ ಉಕ್ರೇನ್ ಗಡಿ ಬಳಿ ರಷ್ಯಾ ದೇಶವು ತನ್ನ ಶಸ್ತ್ರಾಭ್ಯಾಸಕ್ಕಾಗಿ ಸೈನ್ಯವನ್ನು ಕಳುಹಿಸಲು ಆರಂಭಿಸಿತು, ಬಳಿಕ ಅದನ್ನು ರಷ್ಯಾ ದೇಶವು ಹೆಚ್ಚಿಸುತ್ತಾ ಬಂದಿತು. ಡಿಸೆಂಬರ್ ವೇಳೆಗೆ, ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದರೆ ತೀವ್ರ ನಿರ್ಬಂಧಗ¼ನ್ನು ವಿಧಿಸುವ ಬಗ್ಗೆ ಅಧ್ಯಕ್ಷ ಬಿಡೆನ್ ಎಚ್ಚರಿಕೆ ನೀಡಿದರು.

ಪೂರ್ವ ಯುರೋಪ್ ಮತ್ತು ಉಕ್ರೇನ್ನಲ್ಲಿ ನ್ಯಾಟೋ ಯಾವುದೇ ಮಿಲಿಟರಿ ಚಟುವಟಿಕೆಯನ್ನು ನಡೆಸುವುದಿಲ್ಲ ಎಂಬುದಕ್ಕೆ ಪಶ್ಚಿಮವು ಕಾನೂನುಬದ್ಧವಾಗಿ ಖಾತರಿ ನೀಡಬೇಕೆಂದು ರಷ್ಯಾ ಒತ್ತಾಯಿಸಿತು. ಇನ್ನೊಂದೆಡೆಗೆ ವ್ಲಾಡಿಮಿರ್ ಪುಟಿನ್ ಉಕ್ರೇನ್ ಪಾಶ್ಚಿಮಾತ್ಯರ ಕೈಗೊಂಬೆಯಾಗಿದೆ, ಅದೆಂದಿಗೂ ಕೂಡ ಸ್ವಾಯತ್ತ ದೇಶವಾಗಿಲ್ಲ ಎಂದು ಆರೋಪಿಸಿದರು.

ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆ ಕುದಿಯುವ ಹಂತವನ್ನು ತಲುಪಿರುವುದು ಇದೇ ಮೊದಲಲ್ಲ. ಅಧ್ಯಕ್ಷ ಪುಟಿನ್ ಬೆಂಬಲಿತ ಬಂಡು ಕೋರರು ಪೂರ್ವ ಉಕ್ರೇನ್ನ ದೊಡ್ಡ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದರು. ಆಗ ಉಕ್ರೇನ್ನ ಸೈನ್ಯ ಇದರÀ ವಿರುದ್ಧ ಹೋರಾಡಿದಾಗ ರಷ್ಯಾ ೨೦೧೪ ರಲ್ಲಿ ಉಕ್ರೇನ್ ಮೇಲೆ ಆಕ್ರಮಣ ಮಾಡಿತ್ತು. ಆ ಸಮಯದಲ್ಲಿ, ರಷ್ಯಾ ಕ್ರೆöÊಮಿಯಾವನ್ನು ಸ್ವಾಧೀನಪಡಿಸಿಕೊಂಡಿತು.

೨೦೨೨ ರ ಪ್ರಾರಂಭದಲ್ಲ್ಲಿ ಯುರೋಪಿಯನ್ ಒಕ್ಕೂಟದ ಗಡಿಯಲ್ಲಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಹೊಸ ಉದ್ವಿಗ್ನತೆಯಿಂದಾಗಿ ಯುರೋಪಿಯನ್ ಒಕ್ಕೂಟದ ಮೇಲೆಯೂ ಕೂಡ ಪರಿಣಾಮವನ್ನು ಬೀರಿತು, ಇದರಿಂದಾಗಿ ನ್ಯಾಟೋಗೆ ಸಹಿ ಮಾಡಿದ ಬಹುತೇಕ ಐರೋಪ್ಯ ರಾಷ್ಟ್ರಗಳು ರಷ್ಯಾದ ಘಟಕಗಳ ವಿರುದ್ಧ ನಿರ್ಬಂಧಗಳನ್ನು ಘೋಷಿಸುವಲ್ಲಿ ಅಮೆರಿಕಾದ ಜೊತೆಗೆ ಸೇರಿಕೊಂಡವು.

ರಷ್ಯಾ ವಿರೋಧಿ ಕೂಟವಾದ ಪಾಶ್ಚಾತ್ಯ ದೇಶಗಳ ನೇತೃತ್ವದ ‘ನ್ಯಾಟೋ’ ಒಕ್ಕೂಟ ಸೇರಲು ಉಕ್ರೇನ್ ತುದಿಗಾಲಲ್ಲಿ ನಿಂತಿತ್ತು. ಇದೇ ವೇಳೆ ಉಕ್ರೇನ್‌ನ ಡಾನ್ಬಾಸ್ ಸೇರಿದಂತೆ ತನ್ನ ಗಡಿಯಂಚಿನಲ್ಲಿರುವ ೨ ಪ್ರಾಂತ್ಯಗಳ ವಶಕ್ಕೆ ರಷ್ಯಾ ಮೊದಲಿನಿಂದಲೂ ಕಣ್ಣಿಟ್ಟಿತ್ತು. ಈ ಹಿನ್ನೆಲೆಯಲ್ಲಿ ೨೦೨೨ರ ಫೆ. ೨೪ ರಂದು ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿತು. ಆದರೆ ಉಕ್ರೇನ್ ನಂತಹ ಕಿರು ದೇಶವನ್ನು ರಷ್ಯಾ ಬಲುಬೇಗ ವಶಪಡಿಸಿಕೊಳ್ಳಲಿದೆ ಎಂದು ಅನೇಕರು ಅಂದಾಜಿಸಿದ್ದರೂ, ಅದು ಹುಸಿಯಾಗಿದೆ. ಉಕ್ರೇನಿಗಳ ತೀವ್ರ ಪ್ರತಿರೋಧ ಹಾಗೂ ಅಂತಾರಾಷ್ಟಿçÃಯ ಒತ್ತಡದ ಕಾರಣ ರಷ್ಯಾಗೆ ಈ ವರೆಗೆ ಕೇವಲ ಶೇ. ೨೨ ರಷ್ಟು ಉಕ್ರೇನ್‌ನ ಭಾಗವನ್ನು ಮಾತ್ರ ಸಂಪೂರ್ಣ ವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಉಳಿದ ಭಾಗಗಳ ವಶಕ್ಕೆ ರಷ್ಯಾ ಯುದ್ಧ ಮುಂದುವರಿಸಿದೆ. ಈಗ ನೋಡಿದರೆ ಸದ್ಯಕ್ಕೆ ಯುದ್ಧ ನಿಲ್ಲುವ ಲಕ್ಷಣವಿಲ್ಲ.

ಭೀಕರ ಸಾವು-ನೋವಿಗೆ ಕಾರಣವಾಗಿರುವ ಹಾಗೂ ಇಡೀ ವಿಶ್ವದ ಮೇಲೆಯೇ ಆರ್ಥಿಕ ಮತ್ತು ಇತರ ದುಷ್ಪರಿಣಾಮ ಬೀರಿರುವ ಉಕ್ರೇನ್ ಮೇಲಿನ ರಷ್ಯಾ ಆಕ್ರಮಣಕ್ಕೆ ೫ ತಿಂಗಳು ಪೂರ್ಣಗೊಂಡಿದೆ.

ಅಪಾರ ಸಾವು-ನಷ್ಟ

೪,೯೨,೬೪೭ ಮಕ್ಕಳು ಉಕ್ರೇನ್‌ನಿಂದ ವಲಸೆ ತೆರಳಿದ್ದು ಯುರೋಪಿಯನ್ ರಾಷ್ಟçಗಳಲ್ಲಿ ತಮ್ಮ ಓದು ಮುಂದುವರಿಸಲು ಯುರೋಪಿಯನ್‌ನ ವಲಸೆ ಇಲಾಖಾ ಆಯೋಗವು ವ್ಯವಸ್ಥೆ ಮಾಡಿರುವುದಾಗಿ ಹೇಳಲಾಗಿದೆ. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದಿಂದ ಕನಿಷ್ಟ ೧೮ ವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು ೯೦೦ ವೈದ್ಯಕೀಯ ಸೌಲಭ್ಯಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ ಎಂದು ಉಕ್ರೇನ್ನ ಆರೋಗ್ಯ ಸಚಿವಾಲಯ ಹೇಳಿದೆ. ರಷ್ಯಾದ ದಾಳಿಯಿಂದ ೫೦ ಕ್ಕೂ ಹೆಚ್ಚು ವೈದ್ಯಕೀಯ ಕಾರ್ಯಕರ್ತರು ಗಾಯಗೊಂಡಿದ್ದಾರೆ ಮತ್ತು ಉಕ್ರೇನ್ನಲ್ಲಿನ ೧೨೩ ವೈದ್ಯಕೀಯ ಸೌಲಭ್ಯಗಳು ಆಕ್ರಮಣದಿಂದ ಸಂಪೂರ್ಣವಾಗಿ ನಾಶವಾಗಿವೆ, ಆದರೆ ಇನ್ನೂ ೭೪೬ ಕೇಂದ್ರಗಳಲ್ಲಿ ದುರಸ್ತಿ ಅಗತ್ಯವಿದೆ ಎಂದು ಸಚಿವಾಲಯ ಹೇಳಿದೆ.

ಉಕ್ರೇನ್-ರಷ್ಯಾ ಯುದ್ಧದಲ್ಲಿ ಅಪಾರ ಅಮಾಯಕರ ಪ್ರಾಣಹಾನಿ ಯಾಗಿದೆ. ಎಷ್ಟು ಜನ ಅಸುನೀಗಿದ್ದಾರೆ ಎಂಬ ಅಧಿಕೃತ ಅಂಕಿ-ಅAಶ ಸ್ಪಷ್ಟ ಲಭ್ಯವಿಲ್ಲ. ರಷ್ಯಾ, ಉಕ್ರೇನ್ ಹಾಗೂ ವಿಶ್ವಸಂಸ್ಥೆಗಳು ವಿಭಿನ್ನ ಅಂಕಿ-ಅAಶ ನೀಡುತ್ತಿದ್ದು, ಗೊಂದಲಕ್ಕೆ ಕಾರಣವಾಗಿದೆ. ಉಕ್ರೇನ್ ಸರ್ಕಾರದ ಅಂದಾಜಿನ ಪ್ರಕಾರ ೨೭ ಸಾವಿರ ಉಕ್ರೇನೀ ನಾಗರಿಕರು ಯುದ್ಧದಲ್ಲಿ ಸಾವನ್ನಪ್ಪಿ ದ್ದಾರೆ. ಇದೇ ವೇಳೆ, ೨೩ ಸಾವಿರ ಉಕ್ರೇನೀ ಯೋಧರನ್ನು ಕೊಂದಿದ್ದಾಗಿ ರಷ್ಯಾ ಹೇಳಿಕೊಂಡಿದೆ. ಇನ್ನು ರಷ್ಯಾದ ಸುಮಾರು ೧೫ ಸಾವಿರ ಯೋಧರು ಸಾವನ್ನಪ್ಪಿದ್ದಾರೆ ಹಾಗೂ ೪೦ ಸಾವಿರ ಯೋಧರು ಗಾಯಗೊಂಡಿದ್ದಾರೆ ಎಂಬ ಅಂದಾಜಿದೆ. ಆದರೆ ಉಕ್ರೇನ್‌ನ ಅಧ್ಯಕ್ಷ ಝೆಲೆನ್ಸಿ÷್ಕ ಪ್ರಕಾರ, ನಿತ್ಯ ೬೦ರಿಂದ ೧೦೦ ರಷ್ಯಾ ಯೋಧರು ಯುದ್ಧದಲ್ಲಿ ಬಲಿಯಾಗುತ್ತಿದ್ದಾರೆ.

ಸಾವಿರಾರು ಕಟ್ಟಡಗಳ ನಾಶ

ರಷ್ಯಾ ದಾಳಿ ನಡೆಸಿದ್ದರಿಂದ ಉಕ್ರೇನ್‌ನ ಮರಿಯುಪೋಲ್, ಖಾರ್ಕೀವ್, ಕೀವ್ ಹಾಗೂ ಇತರ ಕೆಲವು ನಗರಗಳು ತೀವ್ರ ಹಾನಿಗೆ ಒಳಗಾಗಿವೆ. ೩೮ ಸಾವಿರ ನಾಗರಿಕ ಕಟ್ಟಡಗಳು ನಾಶವಾಗಿದ್ದು, ೨.೨೦ ಲಕ್ಷ ಜನ ನಿರ್ವಸಿತರಾಗಿದ್ದಾರೆ. ೧೯೦೦ ಶಾಲಾ-ಕಾಲೇಜು ಕಟ್ಟಡ, ೩೦೦ ರಸ್ತೆ ಸೇತುವೆ, ೫೦ ರೈಲು ಸೇತುವೆ, ೫೦೦ ಕಾರ್ಖಾನೆ, ೫೦೦ ಆಸ್ಪತ್ರೆಗಳು ಧ್ವಂಸಗೊAಡಿವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಐರೋಪ್ಯ ರಾಷ್ಟçಗಳು ನಿರ್ಬಂಧದ ಅಸ್ತç ಪ್ರಯೋಗಿಸಿದರೂ ಅದ್ಯಾವುದನ್ನೂ ರಷ್ಯಾದ ಅಧ್ಯಕ್ಷ ಲೆಕ್ಕಿಸುತ್ತಿಲ್ಲ. ಚೀನಾದ ಪರೋಕ್ಷ ಬೆಂಬಲದೊAದಿಗೆ ಐರೋಪ್ಯ ರಾಷ್ಟçಗಳಿಗೆ ರಷ್ಯಾ ಸೆಡ್ಡು ಹೊಡೆಯುತ್ತಿದೆ. ರಷ್ಯಾದ ಪಡೆಗಳು ತೀವ್ರವಾಗಿ ಹೋರಾಟಕ್ಕಿಳಿದಿರುವ ಪೂರ್ವ ಉಕ್ರೇನಿಯನ್ ನಗರದಲ್ಲಿ ಸುಮಾರು ಶೇ.೮೦ gಷ್ಟು ಪ್ರಮಾಣದಲ್ಲಿ ರಷ್ಯಾ ನಿಯಂತ್ರಣ ಸಾಧಿಸಿದೆ, ೪೨ ಕ್ಕೂ ಅಧಿಕ ನಗರಗಳನ್ನು ಈ ವಿಭಾಗದಲ್ಲಿ ವಶಪಡಿಸಿಕೊಂಡಿದೆ. ಅಲ್ಲಿಂದÀ ಉಕ್ರೇನ್ ಪಡೆಗಳು ಹೊರಬರದಂತೆÀ ಎಲ್ಲಾ ಮೂರು ಸೇತುವೆಗಳನ್ನು ರಷ್ಯಾ ನಾಶಪಡಿಸಿದೆೆ.

ಲಕ್ಷಾಂತರ ಮಂದಿ ವಲಸೆ

ರಷ್ಯಾದ ನಿರಂತರ ಧಾಳಿಯಿಂದ ಭಯ ವಿಹ್ವಲಗೊಂಡು ಸುಮಾರು ೬೮ ಲಕ್ಷಕ್ಕೂ ಮಿಕ್ಕಿ ಉಕ್ರೇನೀ ನಾಗರಿಕರು ಸನಿಹದ ದೇಶಗಳಿಗೆ ವಲಸೆ ಹೋಗಿದ್ದಾರೆ. ಆದರೆ ರಷ್ಯಾ ಕೀವ್ ಹಾಗೂ ಇತರ ಕೆಲವು ಕಡೆ ಯುದ್ಧವನ್ನು ಕಡಿಮೆ ಮಾಡಿದ್ದರಿಂದ ಸುಮಾರು ೨೨ ಲಕ್ಷ ಜನರು ವಾಪಸು ಮರಳಿದ್ದಾರೆ ಎಂದು ವಿಶ್ವಸಂಸ್ಥೆ ವಕ್ತಾರರು ತಿಳಿಸಿದ್ದಾರೆ. ಯುದ್ಧವು ೨ ದೇಶಗಳ ನಡುವಿನ ದ್ದಾಗಿದ್ದರೂ ವಿಶ್ವದ ಆರ್ಥಿಕತೆ ಮೇಲೆ ಅಪಾರ ದುಷ್ಪÀರಿಣಾಮ ಬೀರಿದೆ. ರಷ್ಯಾ ಹಾಗೂ ಉಕ್ರೇನ್ ದೇಶಗಳು ತೈಲೋತ್ಪನ್ನ ಹಾಗೂ ಅನೇಕ ಕೃಷಿ ಉತ್ಪನ್ನಗಳ ಪೂರೈಕೆಯಲ್ಲಿ ಪ್ರಮುಖ ದೇಶಗಳಾಗಿದ್ದವು. ಯುದ್ಧದ ಬಳಿಕ ಈ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಬೆಲೆ ಏರಿಕೆ-ತೈಲ ಹಾಗೂ ಆಹಾರ ಅಭಾವ ತಲೆದೋರಿದೆ. ಇನ್ನೊಂದೆಡೆ ರಷ್ಯಾ ದೇಶದ ಮೇಲೂ ಯುದ್ಧ ದುಷ್ಪರಿಣಾಮವುಂಟುಮಾಡಿದೆ. ರಷ್ಯಾದ ತೈಲೋತ್ಪನ್ನ ಆಮದನ್ನು ಹಲವು ಯುದ್ಧ ವಿರೋಧೀ ಪಾಶ್ಚಾತ್ಯ ದೇಶಗಳು ನಿಲ್ಲಿಸಿವೆ. ಇದರಿಂದ ರಷ್ಯಾದ ಆರ್ಥಿಕ ವಹಿವಾಟಿನ ಮೇಲೆಯೂ ತೀವ್ರ ಬಿಸಿ ತಟ್ಟಿದೆ.

ಜಾಗತಿಕವಾಗಿ ಸಂಕಷ್ಟ: ಬೆಲೆ ಏರಿಕೆ ಬಿಸಿ

ಯುದ್ಧದಿಂದ ವಿಶ್ವದ ೯೪ ದೇಶಗಳ ೧.೬ ಬಿಲಿಯನ್ ಜನರು ತೊಂದರೆಗೆ ಒಳಗಾಗಿದ್ದಾರೆ ಎಂದು ವಿಶ್ವ ಸಂಸ್ಥೆ ಮಾಹಿತಿಯಿತ್ತಿದೆ. ಜಾಗತಿಕವಾಗಿ ಆಹಾರ ಹಾಗೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಯುದ್ಧ ಹೀಗೇ ಮುಂದುವರಿದರೆ ೨೦೨೩ ರಲ್ಲಿ ಜಾಗತಿಕವಾಗಿ ಆಹಾರ ಉತ್ಪನ್ನಗಳ ಉತ್ಪಾದನೆ, ಸಾಗಾಟ, ಮಾರಾಟ, ಇಂಧನದ ಬೆಲೆ ಏರಿಕೆ ಸಾಮಾನ್ಯ ಜನತೆಯನ್ನು ಸಂಕಷ್ಟಕ್ಕೀಡು ಮಾಡಲಿದೆ ಎಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಟೋನಿಯೋ ಗುಟರೆಸ್ ಮುನ್ನೆಚ್ಚರಿಕೆಯಿತ್ತಿದ್ದಾರೆ. ಈಗಾಗಲೇ ಆಹಾರ ಧಾನ್ಯಗಳ ಬೆಲೆ ಏರಿಕೆ ಆಗಿದೆ. ರಸಗೊಬ್ಬರ ಹಾಗೂ ಕೀಟ ನಾಶಕ ಲಭ್ಯವಾಗುತ್ತಿಲ್ಲ. ಇಂಧನ ಬೆಲೆ ಏರಿಕೆಯಾಗಿದ್ದು, ಇದರಿಂದಾಗಿ ಇತರ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಮುಂದಿನ ಬಿತ್ತನೆ ಅವಧಿ ವೇಳೆಗೆ ಯುದ್ಧ ನಿಲ್ಲದೆ ಹೋದರೆ ಆಹಾರ ಧಾನ್ಯಗಳ ಉತ್ಪಾದನೆ ಬಹಳಷ್ಟು ಕಡಿಮೆ ಆಗಲಿದೆ. ಇದರಿಂದಾಗಿ ಆಹಾರ ಧಾನ್ಯಗಳ ಬೆಲೆ ಇನ್ನಷ್ಟು ಏರಿಕೆ ಆಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಈ ನಡುವೆ ರಷ್ಯಾ ಮತ್ತು ಉಕ್ರೇನ್ ಒಂದು ಒಪ್ಪಂದ ಮಾಡಿಕೊಂಡವು. ಉಕ್ರೇನ್‌ನಲ್ಲಿ ಉತ್ಪಾದಿಸುವ ದವಸ ಧಾನ್ಯಗಳನ್ನು ಹಡಗಿನ ಮೂಲಕ ಇತರ ದೇಶಗಳಿಗೆ ಮಾರಾಟ ಮಾಡಲು ಅವಕಾಶ ಕೊಡ ಬೇಕೆಂದು ತೀರ್ಮಾನಿಸಲಾಗಿದೆ. ಆದರೆ, ಎರಡು ರಾಷ್ಟçಗಳ ಸಮರ ವಿಚಾರದಲ್ಲಿ ಭಾರತ ತಟಸ್ಥ ಧೋರಣೆ ಅನುಸರಿಸಿದೆ. ಉಕ್ರೇನ್‌ನಿಂದ ೨೦ ಸಾವಿರಕ್ಕೂ ಅಧಿಕ ಭಾರತೀಯರನ್ನು ಸ್ವದೇಶÀಕ್ಕೆ ಕರೆ ತರಲಾಗಿದೆ. ಇನ್ನೊಂದೆಡೆ ಇಂಧನ ಸಮಸ್ಯೆ ಹಾಗೂ ಯಾವದೇ ದೇಶದ ಪರ ವಹಿಸಿದರೆ ಭಾರತಕ್ಕೆ ಅದು ಇನ್ನೂ ಹೆಚ್ಚಿನ ಸಮಸ್ಯೆಯಂಟು ಮಾಡುವ ಹಿನ್ನೆಲೆ ಭಾರತ ಈ ಧೋರಣೆಯನ್ನು ಮುಂದುವರಿಸಿದೆ. ಯುದ್ಧ ಶೀಘ್ರ ಅಂತ್ಯ ಕಾಣಲಿ. ಲೋಕ ಕಲ್ಯಾಣಕ್ಕೆ ನಾಂದಿಯಗಲಿ ಎಂದು ಹಾರೈಸೋಣ. (ಮುಗಿಯಿತು)

-“ಚಕ್ರವರ್ತಿ”