ಸೋಮವಾರಪೇಟೆ, ಜು. ೩೦: ಬ್ಯಾಂಕ್ ಆಫ್ ಬರೋಡಾದ ೧೧೫ನೇ ವರ್ಷಾಚರಣೆ ಅಂಗವಾಗಿ ಸೋಮವಾರಪೇಟೆ ಶಾಖೆಯ ವತಿಯಿಂದ ಪಟ್ಟಣದ ಬಿಸಿಎಂ ವಿದ್ಯಾರ್ಥಿ ನಿಲಯದ ೨೫ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ಗಳನ್ನು ವಿತರಿಸಲಾಯಿತು. ಇದರೊಂದಿಗೆ ಶಾಂತಳ್ಳಿ-ಬೆಟ್ಟದಳ್ಳಿ ಗ್ರಾಮದ ಶ್ರೀಕುಮಾರಲಿಂಗೇಶ್ವರ ಪ್ರೌಢಶಾಲೆಯ ೭೫ ವಿದ್ಯಾರ್ಥಿಗಳಿಗೆ ಜಾಮಿಟ್ರಿ ಬಾಕ್ಸ್ಗಳನ್ನು ಉಚಿತವಾಗಿ ನೀಡಲಾಯಿತು. ಈ ಸಂದರ್ಭ ಬ್ಯಾಂಕ್ ವ್ಯವಸ್ಥಾಪಕ ಸ್ವರೂಪ್, ಸಿಬ್ಬಂದಿಗಳಾದ ಶೇಖರ್, ಮೃತ್ಯುಂಜಯ, ಶಿಕ್ಷಕಿ ಉಷಾ ಚಂದ್ರಹಾಸ್ ಭಟ್, ಪ್ರಮುಖರಾದ ಮಾದೇವ ಅವರುಗಳು ಉಪಸ್ಥಿತರಿದ್ದರು.