ಮಡಿಕೇರಿ, ಜು. ೩೧: ಕಕ್ಕಡ ಪದ್‌ನೆಟ್ಟ್ ಕಾರ್ಯಕ್ರಮವನ್ನು ಕಳೆದ ಹಲವು ವರ್ಷಗಳಿಂದ ಪೊನ್ನಂಪೇಟೆಯ ಕಿಗ್ಗಟ್ಟ್ ನಾಡ್ ಕೊಡವ ಹಿತರಕ್ಷಣಾ ಬಳಗ ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದು, ಈ ಬಾರಿ ಅದ್ದೂರಿ ಆಚರಣೆ ನಡೆಯಲಿದೆ.
ಕಳೆದ ಎರಡು ವರ್ಷ ಕೊರೊನಾ ಹಿನ್ನೆಲೆಯಲ್ಲಿ ಈ ಸಾರ್ವತ್ರಿಕ ಆಚರಣೆ ನಡೆದಿರಲಿಲ್ಲ. ಈ ಬಾರಿ ಆಗಸ್ಟ್ ೩ರ ಬುಧವಾರದಂದು ಕಾರ್ಯಕ್ರಮದ ಸಾರ್ವತ್ರಿಕ ಆಚರಣೆ ನಡೆಯಲಿದೆ. ಅಂದು ಸಂಜೆ ೬ ಗಂಟೆಗೆ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ಬಳಿಕ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನದೊಂದಿಗೆ ಕಕ್ಕಡ-೧೮ರ ವಿಶೇಷತೆಯಾದ ಮದ್ದ್ ಪಾಯಸ ಹಾಗೂ ಇತರ ಖಾದ್ಯಗಳ ಭೋಜನ ಏರ್ಪಡಿಸಲಾಗಿದೆ. ಸಂಜೆ ೬ಕ್ಕೆ ಕೊಡವ ಸಮಾಜದಿಂದ ಪಂಜಿನ ಮೆರವಣಿಗೆ ಆರಂಭಗೊAಡು ಬಸವೇಶ್ವರ ದೇವಾಲಯದ ಪ್ರದಕ್ಷಿಣೆಯೊಂದಿಗೆ ಮತ್ತೆ ಸಮಾಜದಲ್ಲಿ ಸಂಪನ್ನಗೊಳ್ಳಲಿದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿಗ್ಗಟ್ಟ್ ನಾಡ್ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ಎಂ. ರಾಜಾ ನಂಜಪ್ಪ ವಹಿಸಲಿದ್ದು, ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪÀ್ಟನ್ ಮಲಚೀರ ಎ. ಅಯ್ಯಪ್ಪ, ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ, ಕಾವೇರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಚಿರಿಯಪಂಡ ಕೆ. ಉತ್ತಪ್ಪ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭ ೧೦ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ಅಪ್ಪಚ್ಚ ಕವಿ ವಿದ್ಯಾಲಯದ ಚಿರಿಯಪಂಡ ಮನಿಶಲಕ್ಷಿö್ಮ, ದ್ವಿತೀಯ ಪಿಯುಸಿಯಲ್ಲಿ ವಿದ್ಯಾನಿಕೇತನದ ಆಪಟ್ಟಿರ ಕವಿನ ಚಂಗಪ್ಪ ಹಾಗೂ ಸಿಐಟಿ ಕಾಲೇಜಿನ ಮುಕ್ಕಾಟಿರ ತೀರ್ಥ ಕಾವೇರಪ್ಪ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಕೊಡವ ನೈಟ್ಸ್ ಸಿಂಪೋನಿ ಆರ್ಕೆಸ್ಟಾç ನಡೆಯಲಿದೆ.