*ಗೋಣಿಕೊಪ್ಪ, ಜು. ೨೯: ವೀರಾಜಪೇಟೆ-ಪೊನ್ನಂಪೇಟೆ ತಾಲೂಕಿನ ೧೫೭ ಶಾಲೆಗಳ ಒಂದರಿAದ ಎಂಟನೇ ತರಗತಿಯ ೯೦೩೬ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರವಾದ ಮೊಟ್ಟೆ, ಬಾಳೆಹಣ್ಣು, ಕಡಲೆ ಟಾಫಿ (ಚಿಕ್ಕಿ) ವಿತರಣೆ ಕಾರ್ಯಕ್ಕೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೊಪಯ್ಯ ಚಾಲನೆ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿಯಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನಕ್ಕೆ ವೀರಾಜಪೇಟೆ ಸಂತ ಅನ್ನಮ್ಮ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆ ಹಣ್ಣು, ಚಿಕ್ಕಿಗಳನ್ನು ವಿತರಿಸಿದರು.
ನಂತರ ಮಾತನಾಡಿದ ಶಾಸಕರು, ಮಕ್ಕಳು ಪೌಷ್ಠಿಕತೆಯಿಂದ ಕೂಡಿದಾಗ ಮಾತ್ರ ಭಾರತ ಸ್ವಾಭಿಮಾನ ಮತ್ತು ಶಕ್ತಿಶಾಲಿ ರಾಷ್ಟçವಾಗಲಿದೆ. ಮಕ್ಕಳ ಬೆಳವಣಿಗೆ ಮತ್ತು ಜ್ಞಾನಾರ್ಜನೆಗೆ ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿ ಮಕ್ಕಳಲ್ಲಿ ಪೌಷ್ಠಿಕ ಆಹಾರ ದೊರೆಯಬೇಕೆಂಬ ಉದ್ದೇಶದಿಂದ ಮಧ್ಯಾಹ್ನದ ಉಪಹಾರ ಯೋಜನೆಯನ್ನು ಜಾರಿಗೆ ತಂದಿದೆ. ೧ರಿಂದ ೮ನೇ ತರಗತಿಯ ವಿದ್ಯಾರ್ಥಿಗಳಷ್ಟೇ ಆಹಾರ ವಿತರಣೆಗೆ ಯೋಜನೆ ರೂಪಿಸಲಾಗಿದೆ. ಈ ಯೋಜನೆಯನ್ನು ೯ ಮತ್ತು ೧೦ನೇ ತರಗತಿಗಳಿಗೂ ವಿಸ್ತರಿಸಲು ಶಿಕ್ಷಣ ಸಚಿವರಲ್ಲಿ ಮತ್ತು ಮುಖ್ಯ ಮಂತ್ರಿಯವರಲ್ಲಿ ಮನವಿ ಸಲ್ಲಿಸಿ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆಯ ನುಡಿಗಳನ್ನಾಡಿದರು.
ಮಕ್ಕಳು ಪೌಷ್ಠಿಕ ಆಹಾರ ಸೇವನೆಯಿಂದ ತಮ್ಮ ಜ್ಞಾನಾರ್ಜನೆಯನ್ನು ವೃದ್ಧಿಸಿಕೊಳ್ಳಲು ಪೂರಕವಾದ ವ್ಯವಸ್ಥೆ ಸರ್ಕಾರ ಕೈಗೊಂಡಿದೆ. ಮಕ್ಕಳ ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿಯೂ ಈ ಯೋಜನೆ ಉಪಯುಕ್ತವಾಗಿದೆ. ಯಾವ ವಿದ್ಯಾರ್ಥಿಯು ಹಸಿವಿನಿಂದ ನರಳಬಾರದು ಎಂಬ ಚಿಂತನೆಯಲ್ಲಿ ಸರ್ಕಾರ ಮಕ್ಕಳಿಗೆ ಬಿಸಿಯೂಟ ಜತೆಗೆ ಉಪಹಾರ ಯೋಜನೆಯಡಿ ಮೊಟ್ಟೆ, ಬಾಳೆಹಣ್ಣು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಯನ್ನು
(ಮೊದಲ ಪುಟದಿಂದ) ಉತ್ಕöÈಷ್ಟಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಉಪಾಹಾರ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಇದರಿಂದ ಮಕ್ಕಳ ಹಾಜರಾತಿ ಮತ್ತು ಮಕ್ಕಳಲ್ಲಿನ ಪೌಷ್ಠಿಕತೆಯನ್ನು ಹೆಚ್ಚಿಸಲು ಸಾಧ್ಯವಾಗಬಲ್ಲದು ಎಂದು ಹೇಳಿದರು.
ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಪ್ರಾಸ್ತಾವಿಕ ನುಡಿಯಲ್ಲಿ ಯೋಜನೆಯ ಕುರಿತು ಮಾಹಿತಿಯನ್ನು ತಿಳಿಸಿದರು. ಜುಲೈ ತಿಂಗಳಿನಿAದ ಫೆಬ್ರವರಿ ತಿಂಗಳವರೆಗೆ ವಾರಕ್ಕೆ ಒಂದು ಮೊಟ್ಟೆಯಂತೆ ೪೬ ಮೊಟ್ಟೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ತಾಲೂಕಿನ ಅಕ್ಷರ ದಾಸೋಹ ದಾಖಲಾತಿಯಂತೆ ಒಂದರಿAದ ಐದನೇ ತರಗತಿವರೆಗಿನ ೫೧೯೩, ೬ರಿಂದ ೮ನೇ ತರಗತಿಯ ೩೮೪೩ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ವಿತರಣಾ ಕಾರ್ಯ ೧೫೭ ಶಾಲೆಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.
ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವನಜಾಕ್ಷಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯಿತ್ರಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಲಾಲ್ ಕುಮಾರ್, ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ರೋಹಿತ್, ಸಂತ ಅನ್ನಮ್ಮ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಫಾ. ರತ್ನಾಕರ್, ಮುಖ್ಯ ಶಿಕ್ಷಕ ಬೆನ್ನಿ, ಬಿಆರ್‌ಪಿಗಳಾದ ಕೆ.ಬಿ. ಪುಷ್ಪ, ಟಿ.ಕೆ. ವಾಮನ, ಕೆ.ಸಿ. ಗೀತಾಂಜಲಿ, ಶಿಕ್ಷಣ ಸಂಯೋಜಕರಾದ ಕೆ.ಆರ್. ವಿಶಾಲಾಕ್ಷಮ್ಮ, ಅಯ್ಯಪ್ಪ, ಸಿ.ಆರ್.ಪಿಗಳಾದ ಟಿ.ಬಿ. ಜೀವನ್, ಪಿ. ಮುರುಗನ್, ರಾಧ, ಸಿ.ಎ. ಅನಿತಾಕುಮಾರಿ, ಎನ್.ಆರ್. ರವಿ, ಚಿಕ್ಕದೇವಯ್ಯ, ಸವಿತಾ ಕುಮಾರಿ, ಪ್ರವೀಣ್, ಸುಷ, ವೆಂಕಟೇಶ್, ಕೇಶವ ಮೂರ್ತಿ, ಕರುಂಬಯ್ಯ, ಶ್ರೀನಿವಾಸ್ ಹಾಗೂ ಸಂತ ಅನ್ನಮ್ಮ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ಸಂತ ಅನ್ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯ ಮೊಟ್ಟೆ, ಬಾಳೆಹಣ್ಣು, ಶೇಂಗ ಚಿಕ್ಕಿಯನ್ನು ವಿತರಿಸಿದರು.