ಮಡಿಕೇರಿ, ಜು.೨೯: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಷ್ಟçದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ಮಹತ್ತರ ಹೆಜ್ಜೆ ಇಟ್ಟಿದೆ ಎಂದು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ರಾಜ್ಯ ಅಧ್ಯಕ್ಷರು ಹಾಗೂ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ಸ್ವಾತಂತ್ರö್ಯದ ಅಮೃತ ಮಹೋತ್ಸವ ಪ್ರಯುಕ್ತ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ‘ಉಜ್ವಲ ಭಾರತ, ಉಜ್ವಲ ಭವಿಷ್ಯ’ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
೨೦೧೪ ರವರೆಗೆ ೨.೪೮ ಲಕ್ಷ ಮೆಗಾ ವ್ಯಾಟ್ನಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು, ಕಳೆದ ಎಂಟು ವರ್ಷದ ಅವಧಿಯಲ್ಲಿ ೪ ಲಕ್ಷ ಹೆಚ್ಚು ಮೆಗಾ ವ್ಯಾಟ್ನಷ್ಟು ವಿದ್ಯುತ್ ಉತ್ಪಾದನೆ ಮಾಡಿ, ಸುಮಾರು ೧.೮೫ ಲಕ್ಷ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಹೆಚ್ಚಾಗಿರುವುದು ಸರ್ಕಾರದ ಮಹತ್ತರ ಸಾಧನೆಯಾಗಿದೆ ಎಂದು ವಿವರಿಸಿದರು.
ಪಂಡಿತ ದೀನಾ ದಯಾಳ್ ಉಪಾಧ್ಯಾಯ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯಡಿ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ಶ್ರಮಿಸಿದೆ. ಹೊಸ ಕಂಬಗಳನ್ನು, ಟ್ರಾನ್ಫಾರ್ಮರ್ (ವಿದ್ಯುತ್ ಪರಿವರ್ತಕ) ಅಳವಡಿಸಿ ವಿದ್ಯುತ್ ಕಲ್ಪಿಸಲು ಸರ್ಕಾರ ಪ್ರಯತ್ನಿಸಿದೆ.
ಒಂದು ರಾಷ್ಟç, ಒಂದೇ ಜಾಲ ಯೋಜನೆಯಡಿ ಇಡೀ ದೇಶದಲ್ಲಿ ೧.೬೩ ಲಕ್ಷಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳನ್ನು ಸ್ಥಾಪಿಸಿ, ಪ್ರತಿ ಕುಟುಂಬಕ್ಕೂ ಗುಣಮಟ್ಟದ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗಿದೆ. ಸ್ವಾಭಾವಿಕವಾಗಿ ದೊರೆಯುವ ಸೋಲಾರ್ ವಿದ್ಯುತ್ ಸಂಪರ್ಕಕ್ಕೂ ಉತ್ತೇಜನ ನೀಡಲಾಗಿದೆ. ಜಲ ವಿದ್ಯುತ್ ಮತ್ತು ಕಿರು ವಿದ್ಯುತ್ ಯೋಜನೆಯು ಸಹ ಬಳಸಿಕೊಳ್ಳ ಲಾಗುತ್ತಿದೆ. ನವೀಕರಿಸಬಹುದಾದ ಇಂಧನವನ್ನು ಸಹ ಬಳಸಿ ವಿದ್ಯುತ್ ಪಡೆಯಬಹುದಾಗಿದೆ ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಶ್ರೀಮಂಗಲ ಮತ್ತು ಸೋಮವಾರ ಪೇಟೆ ಬಳಿಯ ಹಾನಗಲ್ಲು ಶೆಟ್ಟಳ್ಳಿಯಲ್ಲಿ ವಿದ್ಯುತ್ ಉಪ ಕೇಂದ್ರಗಳ ಮೇಲ್ದರ್ಜೆಗೇರಿಸುವ ಕಾಮಗಾರಿ ನಡೆಯುತ್ತಿದೆ. ಉಳಿದಂತೆ ಸಿದ್ದಾಪುರ, ಮೂರ್ನಾಡುಗಳಲ್ಲಿ
(ಮೊದಲ ಪುಟದಿಂದ) ಕಾಮಗಾರಿ ಆರಂಭವಾಗಬೇಕಿದೆ. ಹಾಗೆಯೇ ಹೊಸದಾಗಿ ಬಾಳೆಲೆ, ಹುದಿಕೇರಿ, ಕಳತ್ಮಾಡು ಕೋಪಟ್ಟಿ (ಭಾಗಮಂಡಲ), ಮಾದಾಪುರ, ಕೂಡಿಗೆ, ಕೊಡ್ಲಿಪೇಟೆ, ಸಂಪಾಜೆಗಳಲ್ಲಿ ಹೊಸದಾಗಿ ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಬೇಕಿದೆ ಎಂದು ಕೆ.ಜಿ.ಬೋಪಯ್ಯ ಹೇಳಿದರು.
ಬೆಳಕು ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಕಲ್ಪಿಸಲಾಗುತ್ತದೆ. ಮಡಿಕೇರಿಯಿಂದ ವೀರಾಜಪೇಟೆಗೆ ಎಕ್ಸ್ಪ್ರೆಸ್ ವಿದ್ಯುತ್ ಮಾರ್ಗಕ್ಕೂ ಕ್ರಮವಹಿಸಲಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು ಸಹ ಜಿಲ್ಲಾಡಳಿತ ಜೊತೆ ಕೈಜೋಡಿಸಿದ್ದಲ್ಲಿ, ವಿದ್ಯುತ್ ಸಮರ್ಪಕ ಪೂರೈಕೆಗೆ ಮುಂದಾಗಬಹುದಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಇದ್ದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಮತ್ತಷ್ಟು ಸ್ವಾವಲಂಬಿ ಸಾಧಿಸಬಹುದು ಎಂದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ ವಿದ್ಯುತ್ ಇಲ್ಲದ ಬದುಕನ್ನು ಊಹಿಸಿಕೊಳ್ಳುವುದು ಅಸಾಧ್ಯ. ಸಾರ್ವಜನಿಕರಿಗೆ ವಿದ್ಯುತ್ ಪೂರೈಕೆ ಸಮರ್ಪಕವಾಗಿ ಒದಗಿಸುವುದು ಅತ್ಯವಶ್ಯ. ಆ ನಿಟ್ಟಿನಲ್ಲಿ ವಿದ್ಯುತ್ ಇಲಾಖೆ ಕಾರ್ಯನಿರ್ವಹಿಸುತ್ತಿದೆ.
ವಿದ್ಯುತ್ ಪೂರೈಕೆ ಸಂಬAಧಿಸಿದAತೆ ಬಹಳಷ್ಟು ಕೆಲಸಗಳು ನಡೆಯುತ್ತಿವೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಕೊಡಗು ಜಿಲ್ಲೆಯಲ್ಲಿ ಜೂನಿಯರ್ ಲೈನ್ಮೆನ್ಗಳನ್ನು ನೇಮಕ ಮಾಡಬೇಕು. ಇದರಿಂದ ಜಿಲ್ಲೆಯಲ್ಲಿಯೇ ಕೆಲಸ ನಿರ್ವಹಿಸಲು ಸಾಧ್ಯವಾಗಲಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಶೇ.೧೦೦ ರಷ್ಟು ವಿದ್ಯುತ್ ಬಿಲ್ಲು ಪಾವತಿಸಲಾಗುತ್ತಿದೆ; ಜಿಲ್ಲಾಡಳಿತ ವಿದ್ಯುತ್ ಕಾಮಗಾರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಸರ್ಕಾರದ ಪ್ರಯೋಜನಗಳನ್ನು ಅರ್ಹರು ಪಡೆದುಕೊಳ್ಳುವಂತಾಗಬೇಕು. ಬದುಕು ಹಸನು ಮಾಡಿಕೊಳ್ಳುವಲ್ಲಿ ಮುಂದಾಗಬೇಕು ಎಂದರು.
ನಗರಸಭೆ ಅಧ್ಯಕ್ಷೆÀ ಅನಿತಾ ಪೂವಯ್ಯ ಅವರು ಮಾತನಾಡಿ ೧೦ ಎಚ್ಪಿ ವರೆಗೆ ಕೃಷಿಕರ ಪಂಪ್ಸೆಟ್ಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸುತ್ತಿರುವುದು ಕೃಷಿಕರಿಗೆ ಅನುಕೂಲವಾಗಿದೆ, ಹಿಂದೆ ಬೀದಿ ದೀಪ ಹಾಗೂ ಸೀಮೆ ಎಣ್ಣೆ ದೀಪದ ಬೆಳಕಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಕೇಳಿದ್ದೇವೆ, ಆದರೆ ಇಂದು ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಪ್ರಯತ್ನಿಸಲಾಗಿದೆ. ಆ ನಿಟ್ಟಿನಲ್ಲಿ ರಾಷ್ಟç ಅಭಿವೃದ್ಧಿಯತ್ತ ಸಾಗುತ್ತಿದೆ. ಮಳೆಗಾಲದಲ್ಲಿ ವಿದ್ಯುತ್ ಇಲಾಖೆಯ ಸಿಬ್ಬಂದಿಗಳು ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ಇವರ ಕಾರ್ಯ ಶ್ಲಾಘನೀಯ ಎಂದರು.
ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆ ತಂಡ ಹಾಗೂ ಭಾರತೀಯ ವಿದ್ಯಾಭವನ ವಿದ್ಯಾರ್ಥಿಗಳಿಂದ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯುತ್ ಇಲಾಖೆಯ ಕಾರ್ಯ ಯೋಜನೆಗಳ ಬಗ್ಗೆ ವಿಡಿಯೋ ಪ್ರಸಾರ ಮಾಡಲಾಯಿತು. ಸೆಸ್ಕ್ ಇಇ ಅನಿತಾ ಬಾಯಿ, ಎಇಇ ವಿನಯ ಕುಮಾರ್, ಸುರೇಶ್ ಕುಮಾರ್, ದೇವಯ್ಯ ಇತರರು ಇದ್ದರು.
ಸೆಸ್ಕ್ ಮುಖ್ಯ ಎಂಜಿನಿಯರ್ ಉಮೇಶ್ ಚಂದ್ರ ಸ್ವಾಗತಿಸಿದರು. ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆಯ ಇ.ರಾಜು ಮತ್ತು ತಂಡದವರು ವಿದ್ಯುತ್ ಜಾಗೃತಿ ಗೀತೆ ಹಾಡಿದರು. ಚಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿ, ವಂದಿಸಿದರು.
ಸಂವಾದ ಕಾರ್ಯಕ್ರಮ: ಫಲಾನುಭವಿಗಳು ಮತ್ತು ಸೆಸ್ಕ್ ಅಧಿಕಾರಿಗಳ ಜೊತೆ ವಿದ್ಯುತ್ಗೆ ಸಂಬAಧಿಸಿದ ವಿಷಯ ಕುರಿತು ಸಂವಾದ ನಡೆಯಿತು. ಮಳೆ, ಗಾಳಿ ಯಾವುದನ್ನು ಲೆಕ್ಕಿಸದೆ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಿ ಸಾರ್ವಜನಿಕರಿಗೆ ವಿದ್ಯುತ್ ಪೂರೈಸುವಲ್ಲಿ ಸಹಕರಿಸಿದ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನು ಫಲಾನುಭವಿಗಳು ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅರುವತ್ತೋಕ್ಲು ಗ್ರಾಮದ ಆಶಾ ಕಾರ್ಯಕರ್ತೆ ಚಂಪಾ ಶೆಟ್ಟಿಗಾರು ಮಾತನಾಡಿ ೨೭ ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಲೈನ್ ಮನೆಯಲ್ಲಿ ವಾಸವಾಗಿದ್ದೆ. ೨೦೧೮ ರ ಪ್ರಾಕೃತಿಕ ವಿಕೋಪದಲ್ಲಿ ನನ್ನ ಮನೆಯ ಒಂದು ಭಾಗ ಮುರಿದು ಬಿದ್ದಿತ್ತು. ಆಶಾ ಕಾರ್ಯಕರ್ತೆಯಾದ ನನಗೆ ವಿದ್ಯುತ್ನ ಅವಶ್ಯಕತೆ ಬಹಳ ಇತ್ತು. ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ ಮೇಲೆ ಮನೆ ಕಟ್ಟಲು ಅನುಮತಿ ದೊರೆಯಿತು. ವಿದ್ಯುತ್ ಇಲಾಖೆಯ ಬೆಳಕು ಯೋಜನೆಯ ಬಗ್ಗೆ ನಮಗೆ ತಿಳಿದಿರಲಿಲ್ಲ. ಕೊನೆ ಹಂತದಲ್ಲಿ ವಿದ್ಯುತ್ ಸಿಬ್ಬಂದಿಗಳ ಮಾರ್ಗದರ್ಶನ ಮತ್ತು ಸ್ಪಂದನೆಯಿAದ ಮನೆಗೆ ಕೊನೆಯ ಕ್ಷಣದಲ್ಲಿ ವಿದ್ಯುತ್ ಲಭಿಸಿತು ಎಂದು ಅವರು ಹೇಳಿದರು.
ಬೆಟ್ಟತ್ತೂರು ನಿವಾಸಿಯೊಬ್ಬರು ಮಾತನಾಡಿ ನಮ್ಮ ಗ್ರಾಮದಲ್ಲಿ ಪ್ರತಿ ಮನೆಗೂ ವಿದ್ಯುತ್ ದೊರೆತಿದೆ ಇಲಾಖೆಯವರ ಮುತುವರ್ಜಿ, ಸ್ಪಂದನದಿAದ ಆ ಭಾಗದ ಜನರಿಗೆ ವಿದ್ಯುತ್ ದೊರೆಯಿತು ಎಂದರು. ಯಾವುದೇ ಸಂದರ್ಭದಲ್ಲೂ ವಿದ್ಯುತ್ ತೊಂದರೆಗಳು ಉಂಟಾದಾಗ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದರೆ ಕೂಡಲೇ ಸ್ಪಂದಿಸುವ ಕೆಲಸ ಇಲಾಖೆಯಿಂದ ಆಗುತ್ತಿದೆ ಎಂದರು.
ಸೆಸ್ಕ್ ಸಿಬ್ಬಂದಿಗಳು ವಾರದಲ್ಲಿ ಒಂದು ದಿನ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ವಿದ್ಯುತ್ ಅವಘಡದಿಂದ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಸ್ಥಳೀಯರೊಬ್ಬರು ಮಾತನಾಡಿ ಬೊಯಿಕೇರಿ, ಮಕ್ಕಂದೂರು ಭಾಗಗಳಿಗೆ ಒಂದೇ ಫೀಡರ್ಗಳು ಇದ್ದವು. ಅಧಿಕಾರಿಗಳ ಸ್ವಯಂ ಚಿಂತನೆ ಮತ್ತು ಮುತುವರ್ಜಿಯಿಂದ ಅವರೇ ಅದನ್ನು ಬದಲಿಸಿ ಗ್ರಾಮಕ್ಕೆ ವಿದ್ಯುತ್ ಸಮಸ್ಯೆ ನಿವಾರಿಸಿದ್ದಾರೆ ಎಂದು ಶ್ಲಾಘಿಸಿದರು.
ಕೆ.ನಿಡುಗಣೆ ಗ್ರಾಮದ ಭಾಗೀರಥಿ ಮಾತನಾಡಿ ಗ್ರಾಮ ಪಂಚಾಯಿತಿ ವತಿಯಿಂದ ಮನೆ ನಿರ್ಮಾಣ ಮಾಡಲು ಸಹಾಯ ಮಾಡಿದರು. ಮನೆಗೆ ವಿದ್ಯುತ್ ದೊರೆತಿದೆ ಎಂದು ಹೇಳಿದರು. ಸ್ಥಳೀಯರೊಬ್ಬರು ಮಾತನಾಡಿ, ಜೋಡುಪಾಲ ಅಬ್ಬಿಕೊಲ್ಲಿ ವಾಸಿಯಾಗಿದ್ದು, ಈ ಭಾಗದಲ್ಲಿ ಸಮಸ್ಯೆಗಳು ಬಹಳ ಇದ್ದವು. ಸೆಸ್ಕ್ ಅಧಿಕಾರಿಯೊಬ್ಬರ ಸಹಾಯದಿಂದ ನಮಗೆ ವಿದ್ಯುತ್ ದೊರೆಯುವಂತಾಗಿದೆ ಎಂದು ಅವರು ಹೇಳಿದರು.
ಮೈಸೂರು ಸೆಸ್ಕ್ ಮುಖ್ಯ ಎಂಜಿನಿಯರ್ ಉಮೇಶ್ ಚಂದ್ರ ಮಾತನಾಡಿ ವಿದ್ಯುತ್ನ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಕೂಡ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.