ಚೆಯ್ಯಂಡಾಣೆ, ಜು. ೨೯: ಸ್ಥಳೀಯ ನರಿಯಂದಡ ಕೇಂದ್ರ ಪ್ರೌಢಶಾಲೆಯ ಸಭಾಂಗಣದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪೋಷಕರ ಸಭೆ ನಡೆಯಿತು.

ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಆರ್. ಮನೋಹರ್ ನಾಯ್ಕ್ ವಹಿಸಿ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಕಲಿಕೆ ಕಡೆಗೆ ಗಮನ ಹರಿಸುವಂತೆ ಸಲಹೆಯಿತ್ತರು. ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಶಾಲಾ ನಾಯಕನಾಗಿ ಅಜಯ್ ವಿ.ಎಂ., ಉಪನಾಯಕಿಯಾಗಿ ಪೌಝಿಯ ಕೆ.ಯು., ಕಾರ್ಯದರ್ಶಿಯಾಗಿ ಖುಷಿ ಎಂ.ಎಸ್., ಉಪ ಕಾರ್ಯದರ್ಶಿಯಾಗಿ ಶರಣ್ಯ ಪಿ.ಟಿ., ವಾಚನಾಲಯ ಕಾರ್ಯದರ್ಶಿಯಾಗಿ ನಂದಿತಾ ಎಂ.ಎಸ್., ವಾಚನಾಲಯ ಉಪಕಾರ್ಯದರ್ಶಿಯಾಗಿ ಹರ್ಷಿತ ಎಂ.ಬಿ., ಆರೋಗ್ಯ ಮಂತ್ರಿಯಾಗಿ ಐಶ್ವರ್ಯ ಎಂ., ಉಪ ಆರೋಗ್ಯ ಮಂತ್ರಿಯಾಗಿ ಪ್ರಥ್ವಿ ಕೆ.ಎಲ್., ಕ್ರೀಡಾ ಮಂತ್ರಿಯಾಗಿ ಮದನ್ ಎಂ., ಉಪ ಕ್ರೀಡಾ ಮಂತ್ರಿಯಾಗಿ ದಯಾನಂದ್ ವಿ.ಹೆಚ್. ಆಯ್ಕೆಯಾದರು.

ಈ ಸಂದರ್ಭ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಎಂ. ಅಚ್ಚಯ್ಯ, ನಿರ್ದೇಶಕರಾದ ಪಿ.ಯು. ಸೋಮಣ್ಣ, ಪಿ.ಪಿ. ಪ್ರತಾಪ್, ಹೆಚ್.ಎಸ್. ವಸಂತಿ, ಶಾಲಾ ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು. ಅಧ್ಯಾಪಕ ರವೀಂದ್ರನಾಥ್ ನಿರೂಪಿಸಿ, ಹೆಚ್.ಕೆ. ರಾಜಕುಮಾರ ಸ್ವಾಗತಿಸಿ, ಕೆ.ಪಿ. ಹೇಮಾಮಾಲಿನಿ ವಂದಿಸಿದರು.