ಮಡಿಕೇರಿ, ಜು. ೨೯: ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡು ಧರ್ಮ ರಕ್ಷಣೆಗೆ ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ಇಲ್ಲಸಲ್ಲದ ಪ್ರಕರಣಗಳಲ್ಲಿ ಸಿಲುಕಿಸಿ ‘ಕಮ್ಯೂನಲ್ ಗೂಂಡಾ’ ಪಟ್ಟಿಯಲ್ಲಿ ಸೇರಿಸಿ ಮಾನಸಿಕ ಹಿಂಸೆಯನ್ನು ಪೊಲೀಸರು ನೀಡುತ್ತಿದ್ದಾರೆ ಎಂದು ಆರೋಪಿಸಿ ಮಡಿಕೇರಿ, ಜು. ೨೯: ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡು ಧರ್ಮ ರಕ್ಷಣೆಗೆ ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ಇಲ್ಲಸಲ್ಲದ ಪ್ರಕರಣಗಳಲ್ಲಿ ಸಿಲುಕಿಸಿ ‘ಕಮ್ಯೂನಲ್ ಗೂಂಡಾ’ ಪಟ್ಟಿಯಲ್ಲಿ ಸೇರಿಸಿ ಮಾನಸಿಕ ಹಿಂಸೆಯನ್ನು ಪೊಲೀಸರು ನೀಡುತ್ತಿದ್ದಾರೆ ಎಂದು ಆರೋಪಿಸಿ ಹಿಡಿದು ಸರಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶದ ಘೋಷಣೆಗಳನ್ನು ಕೂಗಿದರು. ನಂತರ ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ಸಾಗಿ ಅಜ್ಜಮಾಡ ದೇವಯ್ಯ ವೃತ್ತ, ಇಂದಿರಾ ಗಾಂಧಿ ವೃತ್ತ, ಕಾಲೇಜು ರಸ್ತೆಯಿಂದ ಕಾವೇರಿ ಹಾಲ್, ಕಾನ್ವೆಂಟ್ ಜಂಕ್ಷನ್ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಸಾಗಿತು.

ಬೇಡಿಕೆಗಳು

ಹಿಂದೂಪರ ಕಾರ್ಯಕರ್ತರ ಮೇಲೆ ಉದ್ದೇಶ ಪೂರ್ವಕವಾಗಿ ದಾಖಲಿಸಿರುವ ಕಮ್ಯುನಲ್ ಗೂಂಡಾ-ರೌಡಿಶೀಟರ್ ಪಟ್ಟಿಯಿಂದ ತೆಗೆಯಬೇಕು. ಹಿಂದೂ ಕಾರ್ಯಕರ್ತರ ಮನೆಗೆ ಯಾವುದೇ ನೋಟೀಸ್ ಇಲ್ಲದೆ ದಾಳಿ ನೆಪದಲ್ಲಿ ಬೆಳ್ಳಂಬೆಳಿಗ್ಗೆ ಅಕ್ರಮ ಪ್ರವೇಶ ಮಾಡಿ ಬೆದರಿಸುವ ತಂತ್ರದ ಹಿಂದಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋಹತ್ಯೆ, ಗೋಸಾಗಾಟ, ಗೋಮಾಂಸ ಮಾರಾಟ ತಡೆಗೆ ಸೂಕ್ತ ಕ್ರಮವಹಿಸಬೇಕು. ಬಾಂಗ್ಲಾ ಕಾರ್ಮಿಕರನ್ನು ಗುರುತಿಸಬೇಕು ಹಾಗೂ ಮತಾಂತರ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಗಳನ್ನು ಪ್ರತಿಭಟನಾನಿರತರು ಮುಂದಿಟ್ಟರು.

ಸಿಪಿಐ ವಿರುದ್ಧ ಜನಾಕ್ರೋಶ

ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್ ಕುಮಾರ್ ವಿರುದ್ಧ ಪ್ರತಿಭಟನೆಯಲ್ಲಿ ಆಕ್ರೋಶ ಮುಗಿಲು ಮುಟ್ಟಿತ್ತು. ಅಧಿಕಾರಿ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರು ಸಿಟ್ಟು ಹೊರಹಾಕಿದರು. ಹಿಂದೂ ಕಾರ್ಯಕರ್ತರನ್ನು ವಿನಾಕಾರಣ ಬಂಧಿಸುವುದು, ಪ್ರಕರಣ ದಾಖಲಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಮಂಗಳೂರು ವಿಭಾಗ ಸಂಚಾಲಕ ಮಹೇಶ್ ಕಡಗದಾಳು, ಸಮಾಜದ ಸ್ವಾಸ್ಥö್ಯ ಕದಡುವವರು, ಬೆಂಕಿ ಹಚ್ಚುವವರು, ಬಾಂಬ್ ಹಾಕುವವರ ಮೇಲೆ ಕ್ರಮ ತೆಗೆದುಕೊಳ್ಳದೆ ಸಮಾಜಕ್ಕೆ ಕೆಲಸ ಮಾಡುವ ಹಿಂದೂಪರ ಕಾರ್ಯಕರ್ತರನ್ನು ಪ್ರಕರಣದಲ್ಲಿ

(ಮೊದಲ ಪುಟದಿಂದ) ಸಿಲುಕಿಸಿ ಅವರ ಧೈರ್ಯವನ್ನು ಕುಗ್ಗಿಸುವ ಕೆಲಸವಾಗುತ್ತಿದೆ. ಮಾದಾಪುರದಲ್ಲಿ ಬಾಲಕಿಯ ಜೊತೆ ಅನುಚಿತ ವರ್ತನೆ ತೋರಿದ ಅನ್ಯಕೋಮಿನ ಯುವಕ ನನ್ನು ಪೊಲೀಸರಿಗೆ ಒಪ್ಪಿಸಿದರೆ ಅವನ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುವ ಕೆಲಸವಾಗಿದೆ. ಅದೇ ಪ್ರಕರಣಕ್ಕೆ ಸಂಬAಧಿಸಿದAತೆ ಹಿಂದೂ ಕಾರ್ಯಕರ್ತರ ವಾಹನಗಳನ್ನು ಅಡ್ಡಗಟ್ಟಿ ಕೊಲೆ ಯತ್ನ ಮಾಡುವ ಘಟನೆ ನಡೆದಿದೆ. ಈ ಸಂಬAಧ ಕೊಲೆಯತ್ನ, ಜಾತಿ ನಿಂದನೆ ಪ್ರಕರಣ ದಾಖಲಾದರೂ ಆರೋಪಿಗಳು ಯಾವುದೇ ಶಿಕ್ಷೆಗೆ ಒಳಗಾಗದೆ ದುಬಾಯಿಗೆ ತೆರಳಿದ್ದಾರೆ. ಪೊಲೀಸ್ ಇಲಾಖೆಯಲ್ಲಿರುವ ಕೆಲವರಿಂದ ಇಡೀ ಇಲಾಖೆಗೆ ಕಪ್ಪುಚುಕ್ಕೆ ಬರುವಂತಾಗಿದೆ. ಈ ಪ್ರಕರಣವನ್ನು ತಿರುಚಿರುವ ವೃತ್ತ ನಿರೀಕ್ಷಕ ಮಹೇಶ್ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.

ನಮ್ಮ ಕಾರ್ಯಕರ್ತರ ವಿರುದ್ಧ ಇಲ್ಲಸಲ್ಲದ ಪ್ರಕರಣದಲ್ಲಿ ಆರೋಪ ಮಾಡಲಾಗುತ್ತದೆ. ಗೋಮಾಂಸ ಎಂದು ತಿಳಿದು ವ್ಯಕ್ತಿಯೋರ್ವನನ್ನು ಪೊಲೀಸರಿಗೆ ಮಾಹಿತಿ ನೀಡಿ ತಡೆದ ಸಂದರ್ಭ ಕಾರ್ಯಕರ್ತರ ವಿರುದ್ಧವೇ ಪ್ರಕರಣ ದಾಖಲಿಸಲಾಗಿತ್ತು. ಇದೆಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಹಿಂದೂಗಳ ರಕ್ಷಣೆಗೆ ಒತ್ತಾಯಿಸಿದರು.

ಗೋಮಾಂಸ ಮಾರಾಟ, ಸಾಗಾಟ ವಿಚಾರದಲ್ಲಿ ಠಾಣೆಯಲ್ಲಿ ಜಾಮೀನು ನೀಡಲಾಗುತ್ತದೆ. ಅದೇ ಗೋ ರಕ್ಷಿಸಿದವರ ವಿರುದ್ಧ ಕಮ್ಯುನಲ್ ಗೂಂಡಾ ಪಟ್ಟಿಗೆ ಸೇರಿಸಲಾಗುತ್ತದೆ. ಹಿಂದೂಗಳನ್ನು ಧಮನ ಮಾಡುವ ನಿಟ್ಟಿನಲ್ಲಿ ಈ ರೀತಿಯಲ್ಲಿ ಕೆಲಸಗಳಾ ಗುತ್ತಿವೆ. ಕುಶಾಲನಗರದಲ್ಲಿ ಹಿಂದೂಗಳ ಮೇಲೆ ಪೊಲೀಸ್ ಅಧಿಕಾರಿಯ ಕಿರುಕುಳ ಮಿತಿಮೀರಿದೆ. ಮಹೇಶ್ ವರ್ಗಾವಣೆಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ದೌರ್ಜನ್ಯ ನಿಲ್ಲಿಸಿ

ಹಿಂದೂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆಯನ್ನು ನಿಲ್ಲಿಸುವಂತೆ ಹಿಂದೂ ಜಾಗರಣ ವೇದಿಕೆ ಪ್ರಾಂತ ಸಹ ಸಂಯೋಜಕ ಲೋಹಿತ್ ಅರಸ್ ಆಗ್ರಹಿಸಿದರು.

೫೦೦ ವರ್ಷದ ರಾಮ ಜನ್ಮಭೂಮಿ ಹೋರಾಟದಲ್ಲಿ ಲಕ್ಷಾಂತರ ಮಂದಿ ಜೀವ ಕಳೆದು ಕೊಂಡಿದ್ದಾರೆ. ಇದೀಗ ರಾಜ್ಯದಲ್ಲಿ ಪೊಲೀಸರ ಮೇಲೆ ದಾಳಿಗಳು ಹೆಚ್ಚಾಗುತ್ತಿವೆ. ಡಿಜೆ ಹಳ್ಳಿ, ಕೆ.ಜೆ.ಹಳ್ಳಿ, ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆಯೇ ದಾಳಿ ನಡೆದಿದೆ. ಹಿಂದೂ ಸಮಾಜ ಎಂದಿಗೂ ವ್ಯವಸ್ಥೆಯ ವಿರುದ್ಧ ನಡೆದುಕೊಂಡಿಲ್ಲ. ಕಾನೂನು, ಸಂವಿಧಾನಕ್ಕೆ ಗೌರವ ನೀಡುತ್ತಿದೆ. ಧರ್ಮ ರಕ್ಷಣೆಯನ್ನು ಹತ್ತಿಕ್ಕಲು ಪೊಲೀಸರು ಕಾರ್ಯಕರ್ತರ ವಿರುದ್ಧವೇ ಸಂಚು ರೂಪಿಸಿ ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಂಘಟನೆ ಪ್ರಮುಖ ಕುಕ್ಕೇರ ಅಜಿತ್ ಮಾತನಾಡಿ, ಮೂರು ಬಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳನ್ನು ಭೇಟಿಯಾಗಲು ಬಂದಾಗಲು ಅವರು ಭೇಟಿಗೆ ಸಿಗಲಿಲ್ಲ. ಇದು ಸಂಘಟನೆಯನ್ನು ನಿರ್ಲಕ್ಷö್ಯ ಮಾಡಿದಂತೆ. ಹಲವು ಬಾರಿ ಮಹೇಶ್ ವಿರುದ್ಧ ದೂರು ಸಲ್ಲಿಸಿ, ಪತ್ರಿಕಾಗೋಷ್ಠಿ ನಡೆಸಿದರು ಯಾವುದೇ ಕ್ರಮಕೈ ಗೊಳ್ಳದಿರುವುದು ಪ್ರಶ್ನೆಗೆ ಕಾರಣ ವಾಗಿದೆ. ಅವರ ವರ್ಗಾವಣೆ ಯಾಗದಂತೆ ಯಾರಾದರೂ ಒತ್ತಡ ತರುತ್ತಿದ್ದಾರಾ? ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಸಂಘಟನೆ ಪ್ರಮುಖರು ಗಳಾದ ಜೀವನ್, ಚೇತನ್, ಮಂಜು, ಯೋಗೇಶ್, ಸುಭಾಷ್ ತಿಮ್ಮಯ್ಯ, ಲಕ್ಷಿö್ಮ ನಾರಾಯಣ, ವಿಶ್ವ ಹಿಂದೂ ಪರಿಷದ್ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

ಪ್ರತಿಭಟನೆ ಹಿಂತೆಗೆತ

ಕುಶಾಲನಗರ ಸಿಪಿಐ ಮಹೇಶ್ ವರ್ಗಾವಣೆಗೆ ಒತ್ತಾಯಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿದ್ದರು. ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರೊಂದಿಗೆ ಸಂಪರ್ಕ ಸಾಧಿಸಿ ಮಾತನಾಡಿದ ಜಿಲ್ಲಾ ವರ್ಗಾವಣೆಗೆ ಒತ್ತಾಯಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿದ್ದರು. ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರೊಂದಿಗೆ ಸಂಪರ್ಕ ಸಾಧಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ವೃತ್ತ ನಿರೀಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗುವದು ಹಾಗೂ ಮುಂದಿನ ೧೫ ದಿನಗಳಲ್ಲಿ ಸಮಸ್ಯೆ ಬಗೆಹರಿಸುವದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.