ಮಡಿಕೇರಿ ಜು. ೨೯: ದಫ್ ಕಲಾ ಒಕ್ಕೂಟ ಕೊಡಗು ವತಿಯಿಂದ ತಾ.೩೧ ರಂದು ವೀರಾಜಪೇಟೆಯಲ್ಲಿ ಪೆರುನ್ನಾಲ್ ಪಟ್ಟುರುಮ್ಮಾಲ್ ಸೀಸನ್-೨ ಮದ್‌ಹ ಹಾಡು ಸ್ಪರ್ಧೆ ನಡೆಯಲಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ಎಂ.ಜಿ.ಅಬ್ದುಲ್ ಲತೀಫ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಾಜಪೇಟೆಯ ನುಸ್ರತುಲ್ ಉಲೂಂ ಮದ್ರಸದಲ್ಲಿ ಮಧ್ಯಾಹ್ನ ೨.೩೦ ರಿಂದ ಸ್ಪರ್ಧೆ ನಡೆಯಲಿದ್ದು, ಸಂಜೆ ೪.೩೦ ಗಂಟೆಗೆ ಸಮಾರೋಪ ಸಮಾರಂಭ ಮತ್ತು ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾರ್ಯಕ್ರಮವನ್ನು ಕೊಡಗು ನಾಯಿಬ್ ಖಾಝಿ ಅಬ್ದುಲ್ಲ ಮಜೀದ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ದಫ್ ಕಲಾ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಮಜೀದ್ ಚೋಕಂಡಹಳ್ಳಿ ವಹಿಸಲಿದ್ದಾರೆ. ಡಿಕೆಓ ಉಪಾಧ್ಯಕ್ಷ ಬಶೀರ್ ಅಲಿ ಚೆರಿಯಪರಂಬು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ ಎಂದರು.
ಕೊಡಗಿನಿಂದ ೧೫ ಸ್ಪರ್ಧಿಗಳು ಭಾಗವಹಿಸಲಿದ್ದು, ಪ್ರಥಮ, ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆದ ವಿಜೇತರಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.
ಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಪಿ.ಎ. ಅಬ್ದುಲ್ ಮಜೀದ್ ಚೋಕಂಡಹಳ್ಳಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಮುಸ್ಲಿಯಾರ್ ಪೈಯಡಿ ಉಪಸ್ಥಿತರಿದ್ದರು.