ಗೋಣಿಕೊಪ್ಪ ವರದಿ, ಜು. ೨೯: ಪ್ರೌಢÀಶಾಲಾ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಜೋಡಿಸುವಷ್ಟು ಪ್ರಬುದ್ಧತೆ ಕಾಣುತ್ತಿರುವುದು ಮೆಚ್ಚುವಂತ ವಿಚಾರ ಎಂದು ಲಯನ್ಸ್ ಕ್ಲಬ್ ಗರ‍್ನರ್ ಮೆಲ್ವಿನ್ ಡಿಸೋಜಾ ಅಭಿಪ್ರಾಯಪಟ್ಟರು.

ಕಳತ್ಮಾಡು ಲಯನ್ಸ್ ಪ್ರೌಢಶಾಲೆಯಲ್ಲಿ ಅಟಲ್ ಲ್ಯಾಬ್ ಉದ್ಘಾಟಿಸಿ ಮಾತನಾಡಿ, ಕಿರಿಯ ವಯಸ್ಸಿನಲ್ಲಿ ಅನ್ವೇಷಣೆಗೆ ಮುಂದಾಗುವಷ್ಟು ಪ್ರೋತ್ಸಾಹ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ. ಅಟಲ್ ಲ್ಯಾಬ್‌ನಲ್ಲಿ ತಂತ್ರಜ್ಞಾನಗಳ ಬಿಡಿ ಭಾಗಗಳನ್ನು ಜೋಡಿಸಿ ವಿನೂತನ ತಂತ್ರಜ್ಞಾನ ಅನ್ವೇಷಣೆಯಲ್ಲಿ ಬೆಳವಣಿಗೆ ತೋರಿಸುವಂತಾಗಿದೆ. ಇದು ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲಿದೆ ಎಂದರು.

ಲ್ಯಾಬ್ ದೊರೆಯುವ ತಂತ್ರಜ್ಞಾನಗಳ ಮಾದರಿಗಳಾದ ರೋಬೊಟಿಕ್ ಡಿಸೈನ್, ಎಲೆಕ್ಟಾçನಿಕ್ಸ್ ಮತ್ತು ಸಾಫ್ಟ್ವೇರ್ ತಂತ್ರಜ್ಞಾನದ ಕೋಡ್ ಕಲಿಕೆಯ ಮಾದರಿ, ಕಟ್ಟಡ ನಿರ್ಮಾಣ, ವಾಹನ ಬಿಡಿಭಾಗ ಜೋಡಣೆ, ಸ್ವಯಂ ಚಾಲಿತ ಕೃತಕ ತಂತ್ರಜ್ಞಾನ, ಯಂತ್ರಗಳಲ್ಲಿ ತಂತ್ರಜ್ಞಾನದ ವೃದ್ಧಿ ಮತ್ತು ವಾಸ್ತವ ಮತ್ತು ವಾಸ್ತವತೆಗಳನ್ನು ಕಲಿಯುವುದು, ೩ಡಿ ತಂತ್ರಜ್ಞಾನದಿAದ ಅಭಿವೃದ್ಧಿ ಪಡಿಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳು ಹಂಚಿಕೊAಡರು.

ಈ ಸಂದರ್ಭ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಜಮ್ಮಡ ಎಸ್. ಮಾದಪ್ಪ, ಕಾರ್ಯದರ್ಶಿ ಧನು ಉತ್ತಯ್ಯ, ಖಜಾಂಚಿ ಶರತ್ ದೇವಯ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಅಮ್ಮಂಡ ಚಿಣ್ಣಪ್ಪ, ನಿಕಟಪೂರ್ವ ಅಧ್ಯಕ್ಷ ಅಲ್ಲುಮಾಡ ಸುನಿಲ್, ಲಯನ್ಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಚಿಯಕ್‌ಪೂವಂಡ ಲತಾ ಬೋಪಣ್ಣ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಎ.ಬಿ. ಅಕ್ಕಮ್ಮ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಪಿ.ಡಿ. ತಂಗಮ್ಮ ಇದ್ದರು.