ಮಡಿಕೇರಿ, ಜು. ೨೯: ಪ್ರಸಕ್ತ ವರ್ಷ ಮುಂಗಾರು ಮಳೆಯ ವಾತಾವರಣ ವಾಡಿಕೆಯಂತೆ ಈ ಹಿಂದಿನ ವರ್ಷಗಳ ಮಾದರಿ ಕಂಡುಬರುತ್ತಿಲ್ಲ. ಜೂನ್ ತಿಂಗಳು ಬಹುತೇಕ ಮಳೆ ಕ್ಷೀಣವಾಗಿತ್ತು. ಆದರೆ, ಜುಲೈ ಆರಂಭದಿAದ ಸುಮಾರು ೧೫ ದಿನಗಳ ಕಾಲ ಸುರಿದ ಭಾರೀ ಮಳೆ - ಗಾಳಿ ಕಳೆದ ಸಾಲಿನ ಪ್ರಮಾಣದ ಗಡಿಯನ್ನು ದಾಟಿತ್ತಲ್ಲದೆ, ಜಿಲ್ಲೆಯಾದ್ಯಂತ ವ್ಯಾಪಕ ಹಾನಿಗಳೂ ಉಂಟಾಗಿತ್ತು. ಆದರೆ, ಇದೀಗ ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣವಿದೆ. ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆ ಆಗೊಮ್ಮೆ... ಹೀಗೊಮ್ಮೆ ಸುರಿಯುತ್ತಿದೆ ಯಾದರೂ, ಜುಲೈ ತಿಂಗಳಾAತ್ಯದ ವೇಳೆಗೆ ಸಾಧಾರಣವಾಗಿ ಇರುತ್ತಿದ್ದ ಮಳೆಯ ರಭಸ ಇಲ್ಲ... ಇದೀಗ ಕಳೆದ ಒಂದೆರಡು ದಿನದಿಂದ ಕೆಲವೆಡೆ ಗುಡುಗು ಕಂಡು ಬರುತ್ತಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ. ತಾ. ೨೭ರಂದು ಸಂಜೆ ಬಿಟ್ಟಂಗಾಲ- ವೀರಾಜಪೇಟೆ ವಿಭಾಗ, ನಾಪೋಕ್ಲು ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆಯಾಗಿತ್ತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ
ತಾ. ೨೮ರ ತಡರಾತ್ರಿಯಿಂದ ಭಾರೀ ಗುಡುಗಿನ ಶಬ್ಧದೊಂದಿಗೆ ಸಣ್ಣ ಪ್ರಮಾಣದ ಮಳೆ ಸುರಿದಿದೆ. ಆದರೆ, ಮತ್ತೆ ಹಗಲು ಬಿಸಿಲಿನ ವಾತಾವರಣ ಮುಂದುವರೆಯಿತು.